ಹುಬ್ಬಳ್ಳಿಯಲ್ಲಿ ಡಿಜಿ ಫೋಟೋ ಎಕ್ಸ್​ಪೋ ಉದ್ಘಾಟನೆ

blank

ಹುಬ್ಬಳ್ಳಿ : ಛಾಯಾಗ್ರಹಣ ಜವಾಬ್ದಾರಿಯುತ ಕೆಲಸ. ಛಾಯಾಗ್ರಾಹಕರು ಉತ್ಸಾಹಿಗಳಾಗಿದ್ದು, ಕಲೆ, ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಹುಬ್ಬಳ್ಳಿ-ಧಾರವಾಡ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೊಸಿಯೇಷನ್ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಛಾಯಾಗ್ರಾಹಕರ ಛಾಯಾವಸ್ತು ಪ್ರದರ್ಶನ -‘ಡಿಜಿ ಫೋಟೋ ಎಕ್ಸ್​ಪೋ’ ಉದ್ಘಾಟಿಸಿ ಅವರು ಮಾತನಾಡಿದರು.

ಸೃಜನಶೀಲತೆ ಛಾಯಾಗ್ರಾಹಕರ ಪ್ರಮುಖ ಗುಣ. ಇತಿಹಾಸ ದಾಖಲಿಸಲು, ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಛಾಯಾಗ್ರಹಣ ಉತ್ತಮ ಸಾಧನ. ಛಾಯಾಗ್ರಾಹಕರಿಗೆ ತಾಳ್ಮೆ ಮುಖ್ಯವಾದದ್ದು. ಯಾವುದೇ ದೃಶ್ಯ ಸುಂದರವಾಗಿ ಮೂಡಿಬರಬೇಕೆಂದರೆ ತಾಳ್ಮೆ ಅಗತ್ಯ ಎಂದರು.

ಹುಬ್ಬಳ್ಳಿ-ಧಾರವಾಡ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘಟನೆಯವರು ತಮಗೊಂದು ಸಭಾಭವನ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಕಟ್ಟಡ ಒದಗಿಸುವಂತೆ ಮನವಿ ಸಲ್ಲಿಸಿದ್ದು, ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ರ್ಚಚಿಸುತ್ತೇನೆ. ಈ ಭಾಗದ ಶಾಸಕರು ಸಹ ಇದಕ್ಕೆ ಸಹಕರಿಸಬೇಕು. ಬರುವ ಬಜೆಟ್​ನಲ್ಲಿ ಇದಕ್ಕಾಗಿ ಹಣ ಮೀಸಲಿಡುವಂತೆ ಮುಖ್ಯಮಂತ್ರಿ ಅವರನ್ನು ಕೋರುವುದಾಗಿ ತಿಳಿಸಿದರು.

ಅತಿಥಿಯಾಗಿದ್ದ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಛಾಯಾಗ್ರಾಹಕರು ಹೊಸ ತಂತ್ರಜ್ಞಾನವನ್ನು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಅನೇಕರಿಗೆ ಛಾಯಾಗ್ರಹಣವೇ ವೃತ್ತಿಯಾಗಿದೆ. ಈ ವೃತ್ತಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅತ್ಯುತ್ತಮ ಛಾಯಾಗ್ರಾಹಕರನ್ನು ಸಮಾಜ ಗುರಿತಿಸುತ್ತದೆ ಎಂದರು.

ಹಿರಿಯ ಛಾಯಾಗ್ರಾಹಕರಾದ ನಾಗೇಂದ್ರಸಾ ಪೂಜಾರಿ, ಕೃಷ್ಣಾಸಾ ಪಟ್ಟಣ, ರವೀಂದ್ರ ಕಾಟೀಗರ, ಭರತ ದಲಬಂಜನ, ಕಿಶೋರ ಮಗಜಿ, ಪ್ರಭಾಕರ ಕಲಬುರ್ಗಿ, ಯಲ್ಲಪ್ಪ ಶಿಂಗ್ರಿ, ನಿಂಗಪ್ಪ ಉಗರಗೋಳ, ಅಶೋಕ ಬಡಿಗೇರ, ಉಮೇಶ ನಿಂಬಾಳಕರ, ಸಂತೋಷ ಖಿರೋಜಿ, ರವಿ ಕೋರ್ಪಡೆ, ರಾಜೇಶ ನಂದಿ, ಮಹ್ಮದಅಸ್ಲಂ ಖೋಜೆ, ಬಸವರಾಜ ಶೀಲವಂತ ಅವರಿಗೆ ‘ಉತ್ತರ ಕರ್ನಾಟಕ ಛಾಯಾರತ್ನ’ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

ಫೋಟೋ ಎಕ್ಸ್​ಪೋದಲ್ಲಿ ವಿವಿಧ ಕಂಪನಿಗಳ ಅತ್ಯಾಧುನಿಕ ಕ್ಯಾಮರಾಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಛಾಯಾಗ್ರಾಹಕರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯ ಮಾಡಿಕೊಡಲಾಗುತ್ತಿತ್ತು.

ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲ ಪಾಟೀಲ, ಹುಬ್ಬಳ್ಳಿ-ಧಾರವಾಡ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ಕಿರಣ ಬಾಕಳೆ, ದಿನೇಶ ದಾಬಡೆ, ಅನಿಲ ತುರುಮರಿ, ಕೃಷ್ಣಪ್ಪ ಹುಲಿಬೇಲಿ ಹಾಗೂ ಇತರರು ಇದ್ದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…