ದಿಗ್ವಿಜಯ ನ್ಯೂಸ್​ನಲ್ಲಿ ​ನಾಳೆ ಚುನಾವಣಾ ಕಣದ ಕ್ಷಣ ಕ್ಷಣದ ಸುದ್ದಿ ಬಿತ್ತರ

ಬೆಂಗಳೂರು: ವಿಧಾನಸಭೆ ಚುನಾವಣೆಯ ಮತದಾನದ ಕ್ಷಣ ಕ್ಷಣದ ಸುದ್ದಿಯನ್ನು ವೀಕ್ಷಕರಿಗೆ ಮುಟ್ಟಿಸಲು ದಿಗ್ವಿಜಯ 24X7 ನ್ಯೂಸ್​ ಮತ ಸಂಗ್ರಾಮ- 2018ರ ತಂಡ ಅಣಿಯಾಗಿದ್ದು, ಶನಿವಾರ (ಮೇ 12) ಬೆ.6 ರಿಂದಲೇ ನಿರಂತರವಾಗಿ ಸುದ್ದಿ ಬಿತ್ತರಿಸಲಿದೆ.

ರಾಜ್ಯದ 30 ಜಿಲ್ಲೆಗಳಿಂದಲೂ ನಮ್ಮ ವರದಿಗಾರರು ಲೈವ್​ ಅಪ್​ಡೇಟ್ಸ್​ ನೀಡಲಿದ್ದಾರೆ. ಪ್ರತಿ ಗಂಟೆಗೊಮ್ಮೆ ಶೇಕಡಾವಾರು ಮತದಾನದ ವಿವರ ಅಪ್​ಡೇಟ್ ಆಗಲಿದ್ದು, ಪೋಲ್ ಮೀಟರ್​​ ಇರುತ್ತದೆ.

ಮತ್ತಷ್ಟು ವಿಶೇಷ
ಅಷ್ಟೇ ಅಲ್ಲದೆ, ಚುನಾವಣೆಯಲ್ಲಿ ಪ್ರಥಮ ಬಾರಿ ವೋಟ್ ಮಾಡಿದವರನ್ನು ದಿಗ್ವಿಜಯ ನ್ಯೂಸ್​ ಸ್ಟುಡಿಯೋಗೆ ಕರೆದು ಚರ್ಚೆ ಮಾಡಲಿದೆ. ಜತೆಗೆ ‘ಸೆಲ್ಫಿ ವಿತ್ ವೋಟರ್ಸ್​’ ಇರಲಿದೆ. ವೋಟ್​ ಹಾಕಿ ಸೆಲ್ಫಿ ಕಳುಹಿಸಿದರೆ ಬೆಳಗ್ಗೆಯಿಂದ ವೋಟ್​ ಮಾಡಿದವರ ಫೋಟೋಗಳು ಪ್ರಸಾರವಾಗಲಿವೆ.

ಸಂಜೆ 6.30 ಗಂಟೆ ವಿಜಯವಾಣಿ, ದಿಗ್ವಿಜಯ ನ್ಯೂಸ್​ ಚುನಾವಣೋತ್ತರ ಸಮೀಕ್ಷೆ ನಡೆಸಲಿದ್ದು, ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿವೆ? ಈ ಬಾರಿ ಯಾರು ಮುಖ್ಯಮಂತ್ರಿಯಾಗ್ತಾರೆ? ಎಂಬುದರ ಕುರಿತು ನಿಖರ ಎಕ್ಸಿಟ್​ ಪೋಲ್​ಗಳ ವಿಶ್ಲೇಷಣೆ ನಡೆಸಲಾಗುವುದು.

ದಿಗ್ವಿಜಯ ನ್ಯೂಸ್ ವಿಶೇಷ

  • ಬೆಳಗ್ಗೆ 6 ರಿಂದ ನಿರಂತರ ಸುದ್ದಿ
  • 30 ಜಿಲ್ಲೆಗಳಿಂದ ರಿಪೋರ್ಟರ್ಸ್​ ಲೈವ್
  • ಸೆಲ್ಫಿ ವಿತ್​​ ವೋಟರ್ಸ್​
  • ಪ್ರತಿ ಕ್ಷೇತ್ರದ ಅಭ್ಯರ್ಥಿಗಳ ವಿವರ
  • 3 ಡಿ ತಂತ್ರಜ್ಞಾನದ ಗ್ರಾಫಿಕ್ಸ್ ಮೂಲಕ ವಿಶ್ಲೇಷಣೆ

Leave a Reply

Your email address will not be published. Required fields are marked *