ಮಂಗಳೂರು ಚಲೋ ವಿಫಲಕ್ಕೆ ಸರ್ಕಾರದ ಪ್ಲಾನ್?

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಭಾನುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ

1.ಕೇಂದ್ರ ಕ್ಯಾಬಿನೆಟ್​​​​​​​ ಪುನಾರಚನೆಗೆ ಕ್ಷಣಗಣನೆ – ಸಂಪುಟಕ್ಕೆ 9 ಹೊಸ ಮುಖಗಳ ಪರಿಗಣನೆ- ಅಸಮರ್ಥ ಆರು ಮಂದಿಗೆ ಗೇಟ್​​ಪಾಸ್​
2.ಮೈತ್ರಿ ಲೆಕ್ಕಕ್ಕಿಲ್ಲ, ಚುನಾವಣೆಯ ಚಿಂತೆಯಿಲ್ಲ- ಕೇಂದ್ರ ಸಂಪುಟಕ್ಕೆ ನಾಲ್ವರು ನಿವೃತ್ತ ಅಧಿಕಾರಿಗಳು-ಅಳೆದು ತೂಗಿ ಸಂಪುಟ ಪುನರ್​ರಚನೆ

3.ತಿರುಪತಿ ಲಡ್ಡುಗೂ ಇರಲಿಲ್ಲ ಫುಡ್​ ಬೋರ್ಡ್​ ಲೈಸೆನ್ಸ್- ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಪಡೆದ್ರು ಪರವಾನಗಿ- ಟಿಟಿಡಿ ಬಳಿ ಇರಲಿಲ್ವಾ ಏಳುವರೆ ಸಾವಿರ ರೂಪಾಯಿ
4.ನಿರಂತರ ಮಳೆಗೆ ಬೆಂಗಳೂರು ಹೈರಾಣ- ಮುನ್ನೆಚ್ಚರಿಕೆಯಾಗಿ ಎನ್​​ಡಿಆರ್​​​ಎಫ್​ ತಂಡ ಆಗಮನ- ಸಚಿವರಿಂದ ನಗರದ ಹಲವೆಡೆ ನೈಟ್​ ರೌಂಡ್​

ಮಂಗಳೂರು ಚಲೋ ವಿಫಲಕ್ಕೆ ಪ್ಲಾನ್- ಕಾರ್ಯಕರ್ತರು ಉಳಿದುಕೊಳ್ಳುವ ಸ್ಥಳಕ್ಕೆ ಪೊಲೀಸ್ ನೋಟಿಸ್​- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ

ಮಂಗಳೂರು: ರಾಜ್ಯ ಬಿಜೆಪಿ ಯುವ ಮೋರ್ಚಾ ಕೈಗೊಂಡಿರುವ ಮಂಗಳೂರು ಚಲೋ ರ್ಯಾಲಿಯನ್ನು ವಿಫಲಗೊಳಿಸಲು ಸರ್ಕಾರ ಪ್ಲಾನ್ ರೂಪಿಸಿದೆ.

ಮೈಸೂರು ಮತ್ತು ಕೊಡಗಿನಿಂದ ಬೈಕ್ ರ್ಯಾಲಿಯಲ್ಲಿ ಬರುವ ಬಿಜೆಪಿ ಕಾರ್ಯಕರ್ತರಿಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸದಂತೆ ಕಲ್ಯಾಣ ಮಂಟಪಗಳಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ.

ಮೈಸೂರು ಮತ್ತು ಕೊಡಗಿನಿಂದ ಬರುವ ಕಾರ್ಯಕರ್ತರಿಗೆ ಉಳಿದುಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿತ್ತು

ಆದರೆ ಇದೀಗ ಸುಳ್ಯ ತಾಲೂಕು ಪೊಲೀಸರು ಕಲ್ಯಾಣ ಮಂಟಪದ ಮಾಲಿಕರಿಗೆ ನೋಟಿಸ್ ನೀಡಿದ್ದು,ವಾಸ್ತವ್ಯ ಹೂಡಲು ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರಿಂದ ಅವಕಾಶ ಕಲ್ಪಿಸಬಾರದೆಂದು ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *