ದಿಗ್ವಿಜಯ ನ್ಯೂಸ್​ ಇಂಪ್ಯಾಕ್ಟ್​: ಮಲ್ಲೇಶ್ವರದ ಸೂರ್ಯ ಬುಕ್​ ಸ್ಟಾಲ್​ ಮೇಲೆ ದಾಳಿ

ಬೆಂಗಳೂರು: ಸರ್ಕಾರಿ ಗ್ರಂಥಾಲಯದ ಪುಸ್ತಕಗಳು ಖಾಸಗಿ ಪುಸ್ತಕ ಮಳಿಗೆಗಳಲ್ಲಿ ಮಾರಾಟವಾಗುತ್ತಿರುವ ಕುರಿತು ದಿಗ್ವಿಜಯ ನ್ಯೂಸ್​ ಪ್ರಸಾರ ಮಾಡಿದ್ದ ‘ಭ್ರಷ್ಟಾಲಯ’ ವರದಿಯಿಂದ ಎಚ್ಚೆತ್ತ ಗ್ರಂಥಾಲಯ ಇಲಾಖೆ ನಿರ್ದೇಶಕರು ಮಲ್ಲೇಶ್ವರಂನ ಸೂರ್ಯ ಬುಕ್​ ಸ್ಟಾಲ್​ ಮೇಲೆ ದಾಳಿ ನಡೆಸಿದ್ದಾರೆ.

ಶುಕ್ರವಾರ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಸತೀಶ್​ ಕುಮಾರ್​ ಹೊಸಮನಿ ನೇತೃತ್ವದ ತಂಡ ಸೂರ್ಯ ಬುಕ್​ ಸ್ಟಾರ್​ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ರಾಜ್ಯದ 30 ಜಿಲ್ಲೆಗಳ ಗ್ರಂಥಾಲಯದಲ್ಲಿರಬೇಕಾದ ಸಾವಿರಾರು ಪುಸ್ತಕಗಳು ಸೂರ್ಯ ಬುಕ್​ ಸ್ಟಾಲ್​ನಲ್ಲಿರುವುದು ಕಂಡು ಬಂದಿತು.

ಈ ಸಂದರ್ಭದಲ್ಲಿ ಸತೀಶ್​ ಕುಮಾರ್​ ಅವರು ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆದೇಶಿಸಿದರು.