Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಸಮಿತಿ ಸಾಥ್

Wednesday, 13.06.2018, 3:03 AM       No Comments

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಸಮಿತಿ ಈ ಬಾರಿ ಪ್ಲಾಸ್ಟಿಕ್ ತೊಲಗಿಸಿ ಎಂಬ ಘೊಷವಾಕ್ಯದೊಂದಿಗೆ ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್ ಸುದ್ದಿವಾಹಿನಿ ಸಹಯೋಗದಲ್ಲಿ ಯೋಗ ದಿನ ಆಚರಿಸಲು ಮುಂದೆ ಬಂದಿದೆ.

ವಿಜಯವಾಣಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಪೂರ್ವಭಾವಿ ಸಿದ್ಧತೆ ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರು, ಯೋಗ ಶಿಕ್ಷಕರು, ಯೋಗ ಸಾಧಕರು ಮತ್ತಿತರರು ಪಾಲ್ಗೊಂಡಿದ್ದರು.

ಮೊದಲ ಬಾರಿ ವೃಕ್ಷ ಸಂರಕ್ಷಣೆ ಹೆಸರಿನಲ್ಲಿ ಯೋಗ ದಿನಾಚರಣೆ ನಡೆಸಿ ಯಶಸ್ವಿ ಯಾದ ಸಮಿತಿ ಸತತ ಮೂರು ಬಾರಿಯೂ ಪರಿಸರ ಸಂಬಂಧಿತ ವಿಷಯಗಳನ್ನಿಟ್ಟು ಕೊಂಡು ಯೋಗ ದಿನಾಚರಣೆ ಆಯೋಜಿಸಿದೆ.

ಈ ಬಾರಿ ಜೂ.21ರಂದು ಪ್ಲಾಸ್ಟಿಕ್ ತೊಲಗಿಸಿ ಎಂಬ ಘೋಷವಾಕ್ಯದೊಂದಿಗೆ ಸಮಿತಿ ಯೋಗ ದಿನ ಆಚರಿಸಲು ಉದ್ದೇಶಿಸಿದೆ ಎಂದು ಸಮಿತಿ ಸದಸ್ಯ ಕೃಷ್ಣೇಗೌಡ ತಿಳಿಸಿದರು. ಯೋಗ ದಿನಾಚರಣೆ ಯೋಗ ಪ್ರದರ್ಶನಕ್ಕಷ್ಟೇ ಸೀಮಿತವಾಗಬಾರದು, ಸಮಾಜದ ಪ್ರತಿವ್ಯಕ್ತಿಯೂ ಯೋಗಾಭ್ಯಾಸ ಮಾಡಬೇಕು. ಯೋಗದ ಮಹತ್ವ ಅರಿಯಬೇಕು ಎಂಬ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಸಮಿತಿ ಭರದ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.

ವಿಜಯವಾಣಿ ಪತ್ರಿಕೆ ಮಧ್ಯಮವರ್ಗದ ಜನರನ್ನು ತಲುಪಿದೆ. ಯೋಗ ದಿನಾಚರಣೆಯಂಥ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಸಮಾಜದ ಒಳಿತನ್ನು ಬಯಸುವ ಮಾಧ್ಯಮ ಎಂದರೆ ಅತಿಶಯೋಕ್ತಿಯಾಗಲಾರದು. ಜನರೊಂದಿಗಿನ ಬಾಂಧವ್ಯವೇ ವಿಜಯವಾಣಿ ಯಶಸ್ವಿನ ಮೊದಲ ಮೆಟ್ಟಿಲು.

| ಸವಿತಾ ಯೋಗಾಸಕ್ತೆ

 

ಯೋಗ ದಿನಾಚರಣೆ ವಿಚಾರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಜನರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡುತ್ತಿದೆ. ಇದರಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಇಂಥ ವಿಷಯಗಳನ್ನು ಮಾಧ್ಯಮಗಳು ಹೆಚ್ಚು ಒತ್ತು ನೀಟಿದರೆ ಕೋಟ್ಯಂತರ ಮಂದಿಗೆ ತಲುಪುತ್ತದೆ.

| ಬಿ. ರವಿ ಕಿಶೋರ್ ಸೇವಾ ಸಮಿತಿ

Leave a Reply

Your email address will not be published. Required fields are marked *

Back To Top