Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ವಿಶ್ವ ಯೋಗ ದಿನಾಚರಣೆಗೆ ಭರ್ಜರಿ ಸಿದ್ಧತೆ

Sunday, 17.06.2018, 3:03 AM       No Comments

ಬೆಂಗಳೂರು: ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕೊಡುಗೆ ಯೋಗ. ಇಡೀ ಜಗತ್ತೇ ಯೋಗಕ್ಕೆ ಮಾರುಹೋಗಿದ್ದು, ಜಾಗತಿಕ ಮಟ್ಟದಲ್ಲಿ ಯೋಗದ ಮೂಲಕ ಭಾರತದ ಘನತೆ ಇನ್ನಷ್ಟು ಹೆಚ್ಚಾಗಿದೆ. ಭಾರತೀಯ ಪುರಾತನ ಕಲೆಯಾದ ಯೋಗ, ಧ್ಯಾನದಿಂದ ಬಹುತೇಕ ಮಂದಿ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವ ಯೋಗ ದಿನಾಚರಣೆಗೆ ಎಲ್ಲರೂ ಕೈ ಜೋಡಿಸಲು ಪೂರಕವಾಗಿ ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ 24ಗಿ7 ನ್ಯೂಸ್​ಜೂ.21 ರಂದು ಯೋಗ ದಿನಾಚರಣೆ ಆಯೋಜಿಸಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಸಿದ್ಧತೆ ನಡೆಸಿದ್ದು, ಅಂದು ಬೆಳಗ್ಗೆ 8ರಿಂದ 9ವರೆಗೆ ಯೋಗ ಕಾರ್ಯಕ್ರಮ ನಡೆಯಲಿದೆ. ಪರಿಸರ ಸ್ನೇಹಿಗಳು, ಸಂಘ-ಸಂಸ್ಥೆಗಳು, ಐಟಿ-ಬಿಟಿ ಕಂಪನಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸೇರಿ ಸಾವಿರಾರು ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಭಾಗವಹಿಸಲಿರುವ ಸಂಘ ಸಂಸ್ಥೆಗಳು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳುತ್ತಿದ್ದು, ಜೈನ್ ವಿಶ್ವವಿದ್ಯಾಲಯದ ಎಲ್ಲ್ಲ ಶಾಖೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಪಿಇಎಸ್ ಸಮೂಹ ಶಿಕ್ಷಣ ಸಂಸ್ಥೆ, ವಾಸವಿ ವಿದ್ಯಾನಿಕೇತನ್ ಟ್ರಸ್ಟ್, ಆದರ್ಶ ಸಮೂಹ ಶಿಕ್ಷಣ ಸಂಸ್ಥೆ, ನ್ಯಾಷನಲ್ ಪಿಯು ಕಾಲೇಜು, ಸಂಯುಕ್ತ ಪದವಿ ಪೂರ್ವ ಕಾಲೇಜು, ಸ್ನೇಹ ಮಹಿಳಾ ಟ್ರಸ್ಟ್ ಸೇರಿ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ಥಳ: ನ್ಯಾಷನಲ್ ಕಾಲೇಜು ಆಟದ ಮೈದಾನ, ಜೂ.21,ಬೆಳಗ್ಗೆ 8ಕ್ಕೆ, ಹೆಚ್ಚಿನ ಮಾಹಿತಿಗೆ 8884432481.

ಯೋಗ ಗುರು ನೇತೃತ್ವ

ಯೋಗ ಮಂದಿರ ಮುಖ್ಯಸ್ಥ, ಯೋಗ ವ್ಯೆದ್ಯಗುರು ಡಾ.ಎಸ್.ಎನ್.ಓಂಕಾರ್ ಮಾರ್ಗದರ್ಶನದಲ್ಲಿ ಬೆಳಗ್ಗೆ 8ರಿಂದ 9.30 ವರೆಗೆ ಸೂರ್ಯನಮಸ್ಕಾರ, ಪದ್ಮಾಸನ, ಭುಜಂಗಾಸನ, ಹಸ್ತಪಾದಾಸನ, ಮೇರುದಂಡಾಸನ ಮುಂತಾದ ಆಸನಗಳ ಪ್ರದರ್ಶನ ಹಾಗೂ ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಯೋಗ ಮ್ಯಾಟ್​ಗಳೊಂದಿಗೆ ಹಾಜರಾಗಬೇಕೆಂದು ಮನವಿ ಮಾಡಲಾಗಿದೆ.

ಗುಣಪಡಿಸಲು ಸಾಧ್ಯವಾಗದ ಹಲವು ರೋಗ ರುಜಿನಗಳು ಯೋಗಾಭ್ಯಾಸದಿಂದ ಗುಣಹೊಂದಿರುವ ನಿದರ್ಶನಗಳನ್ನು ಕಾಣಬಹುದು. ಯೋಗ ಕೇವಲ ವಿಶ್ವಯೋಗ ದಿನಾಚರಣೆ ಒಂದಕ್ಕೆ ಸೀಮಿತ ವಾಗಬಾರದು. ಯೋಗ ಎಂಬುದು ಮನುಕುಲದ ಅವಿಭಾಜ್ಯ ಅಂಗವಾಗಿದೆ. ಉತ್ತಮ ಆರೋಗ್ಯ ಜೀವನಕ್ಕೆ ಯೋಗಾಭ್ಯಾಸ ಉತ್ತಮ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

| ಡಾ. ಎಸ್.ಎನ್.ಓಂಕಾರ್ ವ್ಯೆದ್ಯಗುರು ಯೋಗ ಮಂದಿರ

Leave a Reply

Your email address will not be published. Required fields are marked *

Back To Top