17.8 C
Bengaluru
Wednesday, January 22, 2020

ಗ್ರಾಹಕ, ಬಿಲ್ಡರ್​ಗಳಿಗೆ ಸದವಕಾಶ ಕಲ್ಪಿಸಿದ ಎಕ್ಸ್​ಪೋ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ವಾಸಯೋಗ್ಯ ಮನೆ, ಹೂಡಿಕೆಗೆ ನಿವೇಶನ, ಫ್ಲ್ಯಾಟ್​ಗಳನ್ನು ಹೊಂದುವ ಕನಸು ಸಾಕಾರಗೊಳಿಸಲು ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್ ವೇದಿಕೆ ಒದಗಿಸಿದ್ದವು. ಅ.12ರಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೂರು ದಿನ ನಡೆದ ‘ರಿಯಲ್​ಎಸ್ಟೇಟ್ ಎಕ್ಸ್​ಪೋ’ಗೆ ಭಾನುವಾರ ತೆರೆಬಿದ್ದಿತು. ಮೂರೂ ದಿನ ಬೆಳಗ್ಗೆ 10ರಿಂದ ರಾತ್ರಿ 7 ಗಂಟೆವರೆಗೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡಿ ನಗರದ ಪ್ರತಿಷ್ಠಿತ ಬಿಲ್ಡರ್​ಗಳು, ಡೆವಲಪರ್ ಸಂಸ್ಥೆಗಳಿಂದ ಮಾಹಿತಿ ಪಡೆದರು. ಬಹುತೇಕರು ತಮ್ಮ ಸ್ವಂತದ ಸೂರು, ನಿವೇಶನ ಹೊಂದುವ ಕನಸನ್ನು ಸಾಕಾರಗೊಳಿಸಿಕೊಂಡರು.

ಬೆಂಗಳೂರು: ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ 24×7 ನ್ಯೂಸ್ ಹಮ್ಮಿಕೊಂಡಿದ್ದ ಪ್ರಾಪರ್ಟಿ ಎಕ್ಸ್​ಪೋಗೆ ಭಾನುವಾರ ಸಂಜೆ ತೆರೆಬಿದ್ದಿದೆ. ಮೂರು ದಿನಗಳ ಎಕ್ಸ್​ಪೋಗೆ ಸಾವಿರಾರು ಜನ ಭೇಟಿ ನೀಡುವುದರ ಮೂಲಕ ಎಕ್ಸ್​ಪೋ ಯಶಸ್ವಿಯಾಗಿದೆ. ಎಕ್ಸ್​ಪೋದಲ್ಲಿ ಸಾವಿರಾರು ನಿವೇಶನ, ಫ್ಲ್ಯಾಟ್, ವಿಲ್ಲಾಗಳು ಮಾರಾಟಗೊಂಡಿವೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೂರು ದಿನ ನಡೆದ ಎಕ್ಸ್​ಪೋಗೆ ಮೊದಲ ದಿನದಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕೊನೆಯ ದಿನವಾದ ಭಾನುವಾರ ದಾಖಲೆ ಪ್ರಮಾಣದ ಜನ ಭೇಟಿ ನೀಡಿದರು.

ಭಾನುವಾರ ಹೆಚ್ಚು ಪ್ರಮಾಣದಲ್ಲಿ ನಿವೇಶನ, ಫ್ಲ್ಯಾಟ್ ಹಾಗೂ ವಿಲ್ಲಾಗಳು ಮಾರಾಟಗೊಂಡಿದ್ದು, ನಿರೀಕ್ಷೆ ಮೀರಿದ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಲ್ಡರ್​ಗಳು ಸಹ ಖುಷಿಯಾಗಿದ್ದಾರೆ.

ಜನವೋ ಜನ: ಮೇಳ ಆರಂಭದಿಂದಲೂ ನಿರಂತರವಾಗಿ ಜನರ ಆಗಮನವಿತ್ತು. ಅನೇಕರು ಕುಟುಂಬಸ್ಥರೊಂದಿಗೆ ಆಗಮಿಸಿ ವಿವಿಧ ಪ್ರಾಜೆಕ್ಟ್​ಗಳ ಕುರಿತಾಗಿ ಮಾಹಿತಿ ಪಡೆದರಲ್ಲದೆ, ಸ್ಥಳದಲ್ಲಿಯೇ ತಮ್ಮ ಇಷ್ಟದ ನಿವೇಶನಗಳನ್ನು ಬುಕ್ ಮಾಡಿದರು. ಕೆಲವು ಬಿಲ್ಡರ್​ಗಳು ಅತ್ಯಾಕರ್ಷಕ ಆಫರ್​ಗಳನ್ನೂ ಸಹ ಇರಿಸಿದ್ದರಿಂದ ನಿವೇಶನ ಪಡೆಯುವುದರೊಂದಿಗೆ ಹಲವು ಲಾಭಗಳನ್ನೂ ಗ್ರಾಹಕರು ಎಕ್ಸ್​ಪೋ ಮೂಲಕ ಪಡೆದರು.

ಶುಕ್ರವಾರ ಮತ್ತು ಶನಿವಾರ ಎಕ್ಸ್​ಪೋಗೆ ಭೇಟಿ ನೀಡಿ ವಿವಿಧ ಪ್ರಾಜೆಕ್ಟ್​ಗಳ ಬಗ್ಗೆ ಮಾಹಿತಿ ಪಡೆದಿದ್ದ ಅನೇಕರು ಭಾನುವಾರ ಮತ್ತೊಮ್ಮೆ ಎಕ್ಸ್​ಪೋಗೆ ಭೇಟಿ ನೀಡಿ ತಾವು ಅಂತಿಮಗೊಳಿಸಿದ ನಿವೇಶನ, ಫ್ಲ್ಯಾಟ್, ವಿಲ್ಲಾಗಳ ಖರೀದಿ ಪ್ರಕ್ರಿಯೆ ನಡೆಸಿದರು.

ವಿವಿಧ ಬಿಲ್ಡರ್​ಗಳು ಸ್ಥಾಪಿಸಿದ ಮಳಿಗೆಗಳಲ್ಲಿ ಮೊದಲೆರಡು ದಿನಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಮಾರಾಟ ಪ್ರತಿನಿಧಿಗಳಿದ್ದರು. ಬೆಳಗ್ಗೆಯಿಂದಲೂ ನಿರಂತರವಾಗಿ ಜನರ ಆಗಮನ ಇದ್ದಿದ್ದರಿಂದ ತಮ್ಮ ಪ್ರಾಜೆಕ್ಟ್​ಗಳ ಬಗ್ಗೆ ಉತ್ಸುಕತೆಯಿಂದ ಮಾಹಿತಿ ಒದಗಿಸಿದರು. ಹೆಚ್ಚು ಆಸಕ್ತಿ ವಹಿಸಿ ಖರೀದಿಗೆ ಮುಂದಾದ ಗ್ರಾಹಕರನ್ನು ಪ್ರಾಜೆಕ್ಟ್​ಗಳ ಸ್ಥಳಕ್ಕೆ ಕರೆದೊಯ್ಯಲು ವಾಹನದ ವ್ಯವಸ್ಥೆ ಕಲ್ಪಿಸಿದ್ದರು. ಅನೇಕ ಗ್ರಾಹಕರು ತಾವು ಖರೀದಿಸಲು ಇಚ್ಛಿಸಿದ ನಿವೇಶನ ವೀಕ್ಷಿಸಲು ಕುಟುಂಬಸ್ಥರೊಂದಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು.

ಭರ್ಜರಿ ಖರೀದಿ: ಪ್ರಾಪರ್ಟಿ ಎಕ್ಸ್​ಪೋದಲ್ಲಿ ಸಾವಿರಾರು ನಿವೇಶನ, ವಿಲ್ಲಾ ಹಾಗೂ ಫ್ಲ್ಯಾಟ್​ಗಳು ಮಾರಾಟಗೊಂಡವು. ವಾಸಯೋಗ್ಯ ಮತ್ತು ಹೂಡಿಕೆ ಕಾರಣಗಳಿಗೆ ನಿವೇಶನ ಹುಡುಕುವವರ ಸಂಖ್ಯೆ ಹೆಚ್ಚಾಗಿತ್ತು. ಕೇವಲ ಶ್ರೀಮಂತ ವರ್ಗಕ್ಕೆ ಸೀಮಿತವಾಗದೆ ಎಲ್ಲ ವರ್ಗದವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕಡಿಮೆ ಬೆಲೆಯ ಆದರೆ, ಹೆಚ್ಚು ಗುಣಮಟ್ಟದ ಪ್ರಾಜೆಕ್ಟ್​ಗಳಿಗೂ ಆದ್ಯತೆ ದೊರೆಯಿತು. ಹಲವು ಪ್ರಾಜೆಕ್ಟ್ ಗಳಿಗೆ ಸಾರ್ವಜನಿಕರು ಮುಗಿಬಿದ್ದಿದ್ದರು. ಒಟ್ಟಾರೆ ಭರ್ಜರಿ ವ್ಯಾಪಾರದ ಖುಷಿಯಲ್ಲಿ ಬಿಲ್ಡರ್​ಗಳು ಮರಳಿದರು. ಸಂಜೆ ತೆರೆಬೀಳುವ ವೇಳೆಯಲ್ಲಿಯೂ ಜನಜಂಗುಳಿ ಇದ್ದಿದ್ದರಿಂದ ನಿಗದಿತ 7 ಗಂಟೆಗೂ ತಡವಾಗಿ ಎಕ್ಸ್​ಪೋಗೆ ತೆರೆಬಿದ್ದಿತು.

ವಿಜಯವಾಣಿ, ದಿಗ್ವಿಜಯಕ್ಕೆ ಮೆಚ್ಚುಗೆ

ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್​ನಿಂದ ಹಮ್ಮಿಕೊಂಡಿದ್ದ ಎಕ್ಸ್​ಪೋಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಪ್ರಾಜೆಕ್ಟ್​ಗಳ ಬಗ್ಗೆ ನಮಗೆ ವಿಶ್ವಾಸ ಮೂಡಿತು. ಅದೇ ಕಾರಣಕ್ಕಾಗಿ ಎಕ್ಸ್​ಪೋ ವೀಕ್ಷಿಸಲು ಬಂದೆವು. ಎಲ್ಲ ಪ್ರಾಜೆಕ್ಟ್​ಗಳು ಕಾನೂನುಬದ್ಧವಾಗಿದ್ದವು. ಅದರಿಂದಲೇ ಭಯಬಿಟ್ಟು ನಿವೇಶನಗಳನ್ನು ಖರೀದಿಸಿದ್ದಾಗಿ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು. ಹಿಂದಿನ ಎಕ್ಸ್​ಪೋಗಳಲ್ಲಿ ನಿವೇಶನ, ಮನೆಗಳನ್ನು ಖರೀದಿಸಿ ನೆಮ್ಮದಿ ಜೀವನ ಸಾಗಿಸುತ್ತಿರುವ ಅನೇಕರು ಈ ಬಾರಿಯ ಎಕ್ಸ್​ಪೋಗೂ ಭೇಟಿ ನೀಡಿದ್ದರು. ಹಲವರು ಸಂಬಂಧಿಕರು, ಕುಟುಂಬಸ್ಥರನ್ನು ಕರೆತಂದು ಪ್ರಾಪರ್ಟೀಸ್ ಖರೀದಿಸುವಂತೆ ಉತ್ತೇಜಿಸಿದ್ದು ವಿಶೇಷವಾಗಿತ್ತು.

ಸೆಲಬ್ರಿಟಿಗಳ ಭೇಟಿ

ಮೂರು ದಿನದ ಎಕ್ಸ್​ಪೋಗೆ ನಟಿ ಪ್ರಿಯಾಂಕಾ ಉಪೇಂದ್ರ, ನೀನಾಸಂ ಸತೀಶ್, ಅನಿತಾ ಭಟ್, ಕಾವ್ಯ ಶಾ, ಸಂಜನಾ ಪ್ರಕಾಶ್, ಸಂಚಾರಿ ವಿಜಯ್, ಅದ್ವಿತಿ, ಅಶ್ವಿತಿ, ಬಿಗ್​ಬಾಸ್ ಖ್ಯಾತಿಯ ಪ್ರಥಮ್ ಸೋನಿಕಾ ಗೌಡ, ಐಶಾನಿ ಶೆಟ್ಟಿ ಸೇರಿ ಅನೇಕ ಸೆಲಬ್ರಿಟಿಗಳು ಭೇಟಿ ನೀಡಿದರು. ಎಕ್ಸ್​ಪೋದಲ್ಲಿದ್ದ ಪಾಜೆಕ್ಟ್ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಂತಕ್ಕೆ ಸೂರು ಖರೀದಿಸುವವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ಪ್ರಾಪರ್ಟಿ ಎಕ್ಸ್​ಪೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜಯವಾಣಿ ಹಮ್ಮಿಕೊಂಡಿರುವ ಎಕ್ಸ್​ಪೋ ಆಗಿರುವುದರಿಂದ ಸಾರ್ವಜನಿಕರು ನಿಶ್ಚಿಂತೆಯಿಂದ ಪ್ರಾಪರ್ಟಿ ಖರೀದಿಸಬಹುದಾದು ಎಂದು ಎಕ್ಸ್ ಪೋಗೆ ಬಂದಿದ್ದ ಸಾರ್ವಜನಿಕರನ್ನು ಹುರಿದುಂಬಿಸಿದರು.

ಸೋಲ್ಡ್ ಔಟ್…!

ಮೂರು ದಿನದ ಎಕ್ಸ್​ಪೋದಲ್ಲಿ 400ಕ್ಕೂ ಅಧಿಕ ಪ್ರಾಜೆಕ್ಟ್​ಗಳನ್ನು ಪ್ರದರ್ಶಿಸಲಾಯಿತು. ಹೊಸದಾಗಿ ಘೋಷಣೆಗೊಂಡಿದ್ದ ಹಲವು ಪ್ರಾಜೆಕ್ಟ್

ಗಳಿಗೆ ಭಾರಿ ಬೇಡಿಕೆ ವ್ಯಕ್ತವಾದವು. ಅನೇಕ ಪ್ರಾಜೆಕ್ಟ್​ಗಳು ಸಂಪೂರ್ಣ ಮಾರಾಟವಾಗುವುದಕ್ಕೂ ಈ ಬಾರಿಯ ಎಕ್ಸ್​ಪೋ ಸಾಕ್ಷಿಯಾಯಿತು. ನಿರೀಕ್ಷೆ ಮೀರಿದ ಮಾರಾಟ ಭಾನುವಾರ ನಡೆದಿದ್ದರಿಂದ ಅನೇಕ ಬಿಲ್ಡರ್​ಗಳು ಸಂತಸ ವ್ಯಕ್ತಪಡಿಸಿದರು. 45ಕ್ಕೂ ಅಧಿಕ ಬಿಲ್ಡರ್​ಗಳು ಬಿಬಿಎಂಪಿ ವ್ಯಾಪ್ತಿ ಮತ್ತು ಬೆಂಗಳೂರು ಸುತ್ತಮುತ್ತಲಿನ ಪ್ರಾಜೆಕ್ಟ್​ಗಳನ್ನು ಪ್ರದರ್ಶಿಸಿದರು. ಅನೇಕ ಪ್ರಾಜೆಕ್ಟ್​ಗಳು ಭರ್ತಿ ಬುಕಿಂಗ್ ಆಗಿರುವುದರಿಂದ ಉತ್ಸುಕರಾಗಿರುವ ಬಿಲ್ಡರ್​ಗಳು ಮತ್ತಷ್ಟು ಹೊಸ ಪ್ರಾಜೆಕ್ಟ್​ಗಳನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಎಕ್ಸ್​ಪೋ ಶ್ಲಾಘಿಸಿದ ಸೆಲಬ್ರಿಟಿಗಳು

ಬೆಂಗಳೂರು: ಒಂದೇ ಸೂರಿನಲ್ಲಿ ಡೆವಲಪರ್ಸ್ ಮತ್ತು ಬಿಲ್ಡರ್​ಗಳನ್ನು ಒಗ್ಗೂಡಿಸಿ ಕನಸಿನ ಮನೆಯನ್ನು ಸಾಕಾರಗೊಳಿಸುವ ಸಲುವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪ್ರಾಪರ್ಟಿ ಎಕ್ಸ್​ಪೋದ ಕೊನೆಯ ದಿನ ನಟಿಯರಾದ ಅನಿತಾ ಭಟ್, ಐಶಾನಿ ಶೆಟ್ಟಿ, ಸಂಜನಾ ಪ್ರಕಾಶ್ ಮತ್ತು ನಟ ಸಂಚಾರಿ ವಿಜಯ್ ಭೇಟಿ ನೀಡಿದರು.

ರಿಯಲ್ ಎಸ್ಟೇಟ್ ಎಕ್ಸ್​ಪೋದಲ್ಲಿ ಜನಜಂಗುಳಿ ನೋಡಿ ತುಂಬಾ ಖುಷಿಯಾಗುತ್ತಿದೆ. ಮಧ್ಯಮ ವರ್ಗದ ಜನರಿಗೆ ಇದೊಂದು ಅತ್ಯುತ್ತಮ ಎಕ್ಸ್​ಪೋ ಆಗಿದೆ. ಇಲ್ಲಿ ನೂರಾರು ಆಯ್ಕೆಗಳು ಸಿಗುವುದರಿಂದ ನಮಗೆ ಇಷ್ಟವಾದ ಕಡೆ ಫ್ಲ್ಯಾಟ್, ಸೈಟ್ ಮತ್ತು ವಿಲ್ಲಾ ಖರೀದಿಸಲು ಅನುಕೂಲವಾಗುತ್ತದೆ. ಭವಿಷ್ಯದಲ್ಲಿ ನಾನು ಕೂಡ ಪ್ರಾಪರ್ಟಿ ಮಾಡಬೇಕೆಂಬ ಆಸಕ್ತಿ ಇದೆ ಎಂದು ಅನಿತಾ ಭಟ್ ಇಚ್ಛೆ ವ್ಯಕ್ತಪಡಿಸಿದರು. ಐಶಾನಿ ಶೆಟ್ಟಿ ಮಾತನಾಡಿ, ರೇರಾ ಅನುಮೋದಿತ ಬಹುತೇಕ ಪ್ರಾಜೆಕ್ಟ್​ಗಳು ಮತ್ತು ಬಿಲ್ಡರ್​ಗಳೇ ಎಕ್ಸ್​ಪೋದಲ್ಲಿ ಭಾಗಿ ಆಗಿರುವುದರಿಂದ ಖರೀದಿದಾರರು ಯಾವುದೇ ಆತಂಕವಿಲ್ಲದೆ ಪ್ರಾಪರ್ಟಿ ಖರೀದಿಸಬಹುದು. ವಿಶೇಷವಾಗಿ ಬ್ಯಾಂಕ್ ಸಾಲ ಸೌಲಭ್ಯ ಇರುವುದರಿಂದ ಮಧ್ಯಮ ವರ್ಗದ ಜನರಿಗೆ ಸಾಲ ತೆಗೆದುಕೊಳ್ಳುವುದಕ್ಕೆ ಸಹಾಯವಾಗುತ್ತದೆ ಎಂದು ತಿಳಿಸಿದರು. ಕನಸಿನ ಮನೆ ಕಟ್ಟಿಕೊಳ್ಳಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದ್ದರಿಂದ ಇಂತಹ ಎಕ್ಸ್​ಪೋದಲ್ಲಿ ಸೈಟ್ ಖರೀದಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಎಕ್ಸ್​ಪೋದಲ್ಲಿ ಭಾರಿ ಜನಸಂಖ್ಯೆ ಸೇರಿದ್ದು, ಇದನ್ನು ನೋಡಿ ತುಂಬ ಖುಷಿಯಾಗಿದೆ ಎಂದು ಸಂಜನಾ ಪ್ರಕಾಶ್ ಹೇಳಿದರು. ಬೆಂಗಳೂರು ಸುತ್ತಮುತ್ತ ಪ್ರದೇಶಗಳಾದ ತುಮಕೂರು, ಮಾಗಡಿ, ಮೈಸೂರು, ದೇವನಹಳ್ಳಿ ರಸ್ತೆ ಮತ್ತು ಗೌರಿಬಿದನೂರು ಕಡೆ ಜಾಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಬಡವರಿಗೆ ಕೈಗೆಟಕುವ ದರದಲ್ಲೇ ಸೈಟ್​ಗಳು ಸಿಗುತ್ತಿವೆ. ಬೇಡಿಕೆಯ ಪ್ರದೇಶದಲ್ಲಿ ಸೈಟ್ ತೆಗೆದುಕೊಳ್ಳಬೇಕೆಂಬ ಆಸೆ ಇದೆ ಎಂದು ನಟ ಸಂಚಾರಿ ವಿಜಯ್ ಹೇಳಿದರು.

5 ಸಾವಿರಕ್ಕೂ ಅಧಿಕ ಜನ ಭೇಟಿ

ಮೂರು ದಿನದ ಎಕ್ಸ್ ಪೋಗೆ 5 ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ. ಭೇಟಿ ನೀಡಿದವರಲ್ಲಿ ಬಹುಪಾಲು ಜನ ಪ್ರಾಪರ್ಟಿ ಖರೀದಿ ಪ್ರಕ್ರಿಯೆ ನಡೆಸಿದ್ದಾರೆ. ಹಲವರು ಪ್ರಾಜೆಕ್ಟ್​ಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ವೀಕ್ಷಿಸಿ ಖರೀದಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಎಕ್ಸ್​ಪೋದಲ್ಲಿ ತೆರೆದಿದ್ದ ಎಸ್​ಬಿಐ, ಕರ್ಣಾಟಕ, ಇಂಡಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್​ನ ಮಳಿಗೆಗಳಿಗೂ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರತಿದಿನ ಸಾವಿರಕ್ಕೂ ಹೆಚ್ಚು ಜನ ಸಾಲ ಪಡೆಯುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಲವರು ದಾಖಲೆಗಳನ್ನು ಒದಗಿಸಿ ಸಾಲ ಮಂಜೂರು ಪ್ರಕ್ರಿಯೆಗೆ ಎಕ್ಸ್​ಪೋದ ಮೂಲಕವೇ ಚಾಲನೆ ನೀಡಿದ್ದಾರೆ.

ರಿಯಾಯ್ತಿ ದರದಲ್ಲಿ ಸುಪ್ರೀಂ ಫರ್ನಿಚರ್

ದೇಶದಲ್ಲೇ ಗೃಹ ಪೀಠೋಪಕರಣ ತಯಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ದಿ ಸುಪ್ರೀಂ ಇಂಡಸ್ಟ್ರಿ ಕಂಪನಿ’ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಪೀಠೋಪಕರಣ ಮಾರಾಟ ಮಾಡಿತು. ಚೇರ್​ಗಳು, ಡೈನಿಂಗ್ ಟೇಬಲ್, ಬೇಬಿ ಚೇರ್ ಸೇರಿ ವಿವಿಧ ರೀತಿಯ ವಸ್ತುಗಳನ್ನು ಎಕ್ಸ್​ಪೋಗೆ ಬಂದಿದ್ದವರು ಖರೀದಿಸಿದರು. 390 ರೂ.ಗಳಿಂದ 2,200 ರೂ.ವರೆಗೆ ಪೀಠೋಪಕರಣಗಳು ಸಿಗಲಿವೆ. 1 ವರ್ಷ ವಾರಂಟಿ ಇರಲಿದೆ. ಸುಧಾಮನಗರದ 4ನೇ ಹಂತ ಮತ್ತು ಲಾಲ್​ಬಾಗ್ ರಸ್ತೆಯಲ್ಲಿರುವ ಸುಪ್ರೀಂ ಫರ್ನಿಚರ್ ಮಳಿಗೆಗಳಿಗೆ ಭೇಟಿ ನೀಡಬಹುದು ಎಂದು ಸುಪ್ರೀಂ ಸಂಸ್ಥೆಯ ಕರ್ನಾಟಕ ವಿಭಾಗದ ಮುಖ್ಯಸ್ಥ ಎಲ್. ಕಾಂತರಾಜು ತಿಳಿಸಿದ್ದಾರೆ

ಪುರವಂಕರದಿಂದ ಯೋಜನೆ

ಕನಕಪುರ ರಸ್ತೆಯಲ್ಲಿ ಪ್ರಾವಿಡೆಂಟ್ ಪಾರ್ಕ್ ಸ್ಕೆ್ವೕರ್, ಮಾನ್ಯತಾ ಟೆಕ್ ಪಾರ್ಕ್ ಬಳಿ ಪ್ರಾವಿಡೆಂಟ್ ನಿಯೋರ, ಮಾಗಡಿ ರಸ್ತೆಯಲ್ಲಿ ವೃಕ್ಷ, ನೈಸ್ ಜಂಕ್ಷನ್ ಬಳಿ ಸನ್​ವರ್ಥ್, ಕನಕಪುರ ರಸ್ತೆಯಲ್ಲಿ ಪೂರ್ವ ಹೈಲ್ಯಾಂಡ್, ಪೂರ್ವ ಸನ್​ಫ್ಲವರ್, ಸರ್ಜಾಪುರ ಬಳಿಯ ಪೂರ್ವ ಸ್ಕೈಡೇಲ್ ಯೋಜನೆಗಳನ್ನು ಪುರವಂಕರ ಕಂಪನಿ ನಿರ್ವಹಿಸುತ್ತಿದ್ದು, ಎಲ್ಲ ಪ್ರಾಜೆಕ್ಟ್​ಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಕಂಪನಿಯ ವ್ಯವಸ್ಥಾಪಕ ಹರೀಶ್ ತಿಳಿಸಿದ್ದಾರೆ. ಮಾಹಿತಿಗೆ ದೂ: 1860 258 4444

10 ಸಾವಿರ ರೂ. ನೀಡಿ ಚಂದಾದಾರರಾಗಿ

ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ಸ್ಯಾನ್​ಸಿಟಿ ಕಂಪನಿ ವಿವಿಧ ಪ್ರಾಜೆಕ್ಟ್​ಗಳನ್ನು ನಿರ್ವಹಿಸುತ್ತಿದೆ. ಮೈಸೂರಿನಿಂದ ಕುಶಾಲನಗರ ದಾರಿಯಲ್ಲಿ ಹಲವು ಪ್ರಾಜೆಕ್ಟ್​ಗಳಿದ್ದು, ಗೌರಿಬಿದನೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಗಳಲ್ಲಿಯೂ ಯೋಜನೆಗಳು ನಡೆಯುತ್ತಿವೆ. ಒಟ್ಟು 29 ಯೋಜನೆಗಳನ್ನು ಸ್ಯಾನ್​ಸಿಟಿ ಅಭಿವೃದ್ಧಿಪಡಿಸಿದ್ದು, ಹಲವು ಪೂರ್ಣಗೊಂಡಿವೆ. ಕೇವಲ 10 ಸಾವಿರ ರೂಪಾಯಿ ಪಾವತಿಸಿ ಗ್ರಾಹಕರು ಚಂದಾದಾರರಾಗಬಹುದು. ಪ್ರತಿ ತಿಂಗಳು 5 ಸಾವಿರ ರೂ.ಗಳನ್ನು ಪಾವತಿಸಿ ನಿವೇಶನವನ್ನು ಸ್ವಂತದಾಗಿಸಿಕೊಳ್ಳುವ ಅವಕಾಶವನ್ನು ಕಂಪನಿ ನೀಡಿದೆ. ಹೆಚ್ಚಿನ ಮಾಹಿತಿಗೆ ಮೊ: 92430 02424, ವೆಬ್​ಸೈಟ್: sancity1.com ಸಂರ್ಪಸಬಹುದು.

ಮಹಾವೀರ್​ನಿಂದ ಲಕ್ಸುರಿ ಪ್ರಾಜೆಕ್ಟ್​ಗಳು

ರಿಯಲ್​ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಹಾವೀರ್ ಕಂಪನಿ ಹೊಸೂರು ರಸ್ತೆಯಲ್ಲಿ ಮಹಾವೀರ್ ಟರ್ಕ್​ವೈಸ್, ರ್ಯಾಂಚಸ್, ಪಾಲಾಟಿಯಂ ಸೇರಿ ಹಲವು ಯೋಜನೆಗಳನ್ನು ನಿರ್ವಹಿಸುತ್ತಿದೆ. ಮಹಾವೀರ್ ಟರ್ಕ್ ವೈಸ್​ನಲ್ಲಿ 150 ಫ್ಲ್ಯಾಟ್​ಗಳಿದ್ದು, 1 ಬಿಎಚ್​ಕೆ, 1.5 ಹಾಗೂ 2 ಬಿಎಚ್​ಕೆ ಫ್ಲ್ಯಾಟ್​ಗಳು ಮಾರಾಟಕ್ಕೆ ಲಭ್ಯವಿವೆ. ಸರ್ಜಾಪುರ ರಸ್ತೆಯಲ್ಲಿನ ಮಹಾವೀರ್ ರ್ಯಾಂಚಸ್​ನ್ನು 50 ಎಕರೆಯಲ್ಲಿ ನಿರ್ವಿುಸಲಾಗಿದ್ದು, 1090 ಫ್ಲ್ಯಾಟ್​ಗಳಿವೆ ಎಂದು ಕಂಪನಿ ಮಾರಾಟ ವಿಭಾಗದ ಸಹಾಯಕ ವ್ಯವಸ್ಥಾಪಕ ಕೆ.ಎಸ್. ಬೋಪಣ್ಣ ತಿಳಿಸಿದ್ದಾರೆ. ಜೆ.ಪಿ. ನಗರ 7ನೇ ಹಂತದಲ್ಲಿ ಮಹಾವೀರ್ ಜಾಸ್ಪೆರ್ ಅಪಾರ್ಟ್​ವೆುಂಟ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಬಡಾವಣೆ ನಿರ್ವಿುಸಿದೆ. ಒಟ್ಟು 121 ಎಕರೆಯಲ್ಲಿ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮಾಹಿತಿಗೆ ಮೊ: 80887 74400. ಇಮೇಲ್: [email protected]

ಬಿಬಿಎಂಪಿ ವ್ಯಾಪ್ತಿಯಲ್ಲಿ ಟ್ರಿಂಕೋ ಪ್ರಾಜೆಕ್ಟ್​ಗಳು

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದಶಕದ ಅನುಭವ ಹೊಂದಿರುವ ಟ್ರಿಂಕೋ ಪ್ರಾಪರ್ಟೀಸ್ ವಿಭಿನ್ನ ಮಾದರಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಕನಕಪುರ ರಸ್ತೆಯ ನೈಸ್ ಜಂಕ್ಷ್​ನ್​ನಲ್ಲಿ 10 ಎಕರೆಯಲ್ಲಿ ಹೊಸ ಯೋಜನೆ ರೂಪಿಸುತ್ತಿದೆ. ಈ ರಸ್ತೆಯಲ್ಲಿ ಭೂಮಿಗೆ ಚಿನ್ನದ ಬೆಲೆಯಿದ್ದು, ಭವಿಷ್ಯದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಲಿದೆ. ಅಪಾರ್ಟ್​ವೆುಂಟ್​ಗಿಂತಲೂ ನಿವೇಶನಗಳಿಗೆ ಬೇಡಿಕೆ ಇರುವುದರಿಂದ ಅಂಥದ್ದೇ ಬಡಾವಣೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಕಂಪನಿಯ ಎಂಡಿ ದಿವ್ಯಪ್ರಸಾದ್ ತಿಳಿಸಿದ್ದಾರೆ. ಅಂಜನಾಪುರದಲ್ಲಿ ಟ್ರಿಂಕೋ ತಪಸ್ವಿ, ಗುಬ್ಬಲಾಳದಲ್ಲಿ ಟ್ರಿಂಕೋ ಶಾಂತಿವನ ಬಡಾವಣೆಗಳನ್ನೂ ಕಂಪನಿ ನಿರ್ವಿುಸಿದೆ. 247 ಭದ್ರತಾ ಸಿಬ್ಬಂದಿಯೂ ಇರುತ್ತಾರೆ. ನಿವೇಶನ ಖರೀದಿಸಿದರೆ ವರ್ಷದಿಂದ ವರ್ಷಕ್ಕೆ ಮೌಲ್ಯ ಹೆಚ್ಚುತ್ತದೆ. ಫ್ಲ್ಯಾಟ್​ಗಳ ಮೌಲ್ಯ ಕುಸಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿವೇಶನಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಮೊ: 90191 84184 ವೆಬ್​ಸೈಟ್: www.trincoproperty.com ಸಂರ್ಪಸಿ.

ಸಮೃದ್ಧಿ ಪ್ರಾಪರ್ಟೀಸ್

ಗೌರಿಬಿದನೂರಿನಲ್ಲಿ ನಿತ್ಯೋತ್ಸವ, ನಂದನವನ ಯೋಜನೆಗಳನ್ನು 60 ಎಕರೆಯಲ್ಲಿ ಅನುಷ್ಠಾನ ಗೊಳಿಸಿರುವ ಸಮೃದ್ಧಿ ಪ್ರಾಪರ್ಟೀಸ್ ಕೈಗೆಟುಕುವ ದರದಲ್ಲಿ 689 ನಿವೇಶನಗಳನ್ನು ರಚಿಸಿದೆ. ದೊಡ್ಡಆಲದ ಮರದ ಬಳಿ ಜ್ಞಾನಾಕ್ಷಿ ಬಡಾವಣೆಯಲ್ಲಿ 60 ನಿವೇಶನಗಳು ಲಭ್ಯವಿವೆ. ತಾವರೆಕೆರೆಯಲ್ಲಿ 10 ಎಕರೆಯಲ್ಲಿ ಶ್ರೀಸಾಯಿಬಾಬಾ ಬಡಾವಣೆ ನಿರ್ವಿುಸಿದ್ದು, 50 ಸೈಟ್​ಗಳಿವೆಂದು ಕಂಪನಿ ಎಂಡಿ ವಿಜಯಕುಮಾರ್ ತಿಳಿಸಿದ್ದಾರೆ. ವಿವರಗಳಿಗೆ ಮೊ: 90196 21962. ವೆಬ್​ಸೈಟ್:ww.samrudipropertis.com ಸಂರ್ಪಸಬಹುದು.

ಕೆಎನ್​ಎಸ್ ಇನ್​ಫ್ರಾದ ಯೋಜನೆಗಳಿಗೆ ಹೆಚ್ಚಿದ ಬೇಡಿಕೆ

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ತೆರಳುವ ಮಾರ್ಗದಲ್ಲಿ ಕೆಎನ್​ಎಸ್ ಒಟ್ಟು ಮೂರು ಯೋಜನೆಗಳನ್ನು ರೂಪಿಸಿದ್ದು, ಭಾರಿ ಬೇಡಿಕೆ ವ್ಯಕ್ತವಾಗಿದೆ. ಎರಡು ಪ್ರಾಜೆಕ್ಟ್​ಗಳಲ್ಲಿ ಬಹುತೇಕ ನಿವೇಶನಗಳು ಮಾರಾಟವಾಗಿದ್ದು, ಅವುಗಳಿಗೆ ಹೊಂದಿಕೊಂಡಂತೆ ‘ಕೆಎನ್​ಎಸ್ ಓಜಾಸ್’ ಕೂಡ ಅಭಿವೃದ್ಧಿಗೊಂಡು ಅಲ್ಲಿಯೂ ನಿವೇಶನಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಜಗನ್ನಾಥ್ ಜಕ್ಕ ತಿಳಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಕೆಎನ್​ಎಸ್ ಸಿದ್ಧತೆ ನಡೆಸಿದೆ. ನೈಸ್ ರಸ್ತೆ, ಸರ್ಜಾಪುರದ ಚಿಕ್ಕತಿರುಪತಿ ರಸ್ತೆಯಲ್ಲಿ ಹೊಸ ಯೋಜನೆಗಳ ಅಭಿವೃದ್ಧಿಗೆ ಚಾಲನೆ ಸಿಗಲಿದೆ. ಈ ಪ್ರದೇಶಗಳಲ್ಲಿ ಭೂಮಿಗೆ ಹೆಚ್ಚಿನ ಬೇಡಿಕೆಯಿದ್ದು, ಅಂಥದೇ ಸ್ಥಳದಲ್ಲಿ ಕೆಎನ್​ಎಸ್​ನ ಹಲವು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ವಿವರಕ್ಕೆ ಮೊ: 88806 62233, ವೆಬ್​ಸೈಟ್: www.knsgroup.in

ಚಿನ್ನ, ಟಿವಿ ಗೆದ್ದ ಗ್ರಾಹಕರು

ಎಕ್ಸ್​ಪೋದಲ್ಲಿ ನಿವೇಶನ ಬುಕ್ ಮಾಡಿದ ಇಬ್ಬರು ಅದೃಷ್ಟಶಾಲಿಗಳು ಎಲ್​ಇಡಿ ಟಿವಿಗಳನ್ನು ಗೆದ್ದರೆ, ಇನ್ನೂ ಕೆಲವರು ಚಿನ್ನದ ನಾಣ್ಯ ಗೆದ್ದ ಖುಷಿಯಲ್ಲಿ ಮರಳಿದರು. ಆಸ್ಥಾ ಪ್ರಾಪರ್ಟೀಸ್​ನಲ್ಲಿ ನಿವೇಶನ ಖರೀದಿಸಿದ ಚಿಕ್ಕಬಳ್ಳಾಪುರದ ನರಸಿಂಹಮೂರ್ತಿ ಶನಿವಾರದ ಲಕ್ಕಿ ಡಿಪ್​ನ ವಿಜೇತರಾಗಿ ಎಲ್​ಇಡಿ ಟಿವಿ ಗೆದ್ದರು. ಭಾನುವಾರದ ವಿಜೇತರಾಗಿ ಕುಮಾರಸ್ವಾಮಿ ಲೇಔಟ್​ನ ಶ್ರೀನಿವಾಸ್ ಎಲ್​ಇಡಿ ಟಿವಿ ವಿಜೇತರಾದರು. ಹೆಬ್ಬಾಳದ ವೆಂಕಟರಾಮುಲು ಚಿನ್ನದ ನಾಣ್ಯದ ವಿಜೇತರಾದರು. ವಿಜೇತರಿಗೆ ಆಸ್ಥಾ ಪ್ರಾಪರ್ಟೀಸ್ ಸಿಇಒ ಕಲಾವತಿ, ಪ್ರಧಾನ ವ್ಯವಸ್ಥಾಪಕ ವಿಶ್ವನಾಥ್ ಬಹುಮಾನ ವಿತರಿಸಿದರು.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...