Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ವಿಜಯವಾಣಿ ಎಕ್ಸ್​ಪೋದಲ್ಲಿ ರೇರಾ ನೋಂದಾಯಿತ ಸಂಸ್ಥೆಗಳು

Saturday, 13.10.2018, 3:07 AM       No Comments

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತ ವಾಸಯೋಗ್ಯ ಮನೆ, ಹೂಡಿಕೆಗೆ ನಿವೇಶನ, ಬದುಕು ಕಟ್ಟಿಕೊಳ್ಳಲು ಫ್ಲ್ಯಾಟ್​ಗಳನ್ನು ಹೊಂದುವ ಕನಸು ನಿಮ್ಮದಾಗಿದ್ದರೆ ಅದನ್ನು ಸಾಕಾರಗೊಳಿಸಲು ವಿಜಯವಾಣಿ ಮತ್ತು ದಿಗ್ವಿಜಯ 24×7 ನ್ಯೂಸ್ ವೇದಿಕೆ ಒದಗಿಸಿವೆ. ಅ.12, 13 ಮತ್ತು 14ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ‘ರಿಯಲ್​ಎಸ್ಟೇಟ್ ಎಕ್ಸ್​ಪೋ’ಗೆ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 7 ಗಂಟೆವರೆಗೆ ಭೇಟಿ ನೀಡಬಹುದು. ನಗರದ ಪ್ರತಿಷ್ಠಿತ ಬಿಲ್ಡರ್​ಗಳು, ಡೆವಲಪರ್ ಸಂಸ್ಥೆಗಳು ಮತ್ತು ಬ್ಯಾಂಕ್ ಪ್ರತಿನಿಧಿಗಳು ಎಕ್ಸ್​ಪೋದಲ್ಲಿ ಭಾಗವಹಿಸಿದ್ದು, ನಿಮ್ಮಿಷ್ಟದ ಸೂರು ಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಿವೆ.

ಬೆಂಗಳೂರು: ಸಾರ್ವಜನಿಕರ ಕನಸಿನ ಮನೆಯನ್ನು ನನಸು ಮಾಡುವ ಉದ್ದೇಶದಿಂದ ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್ ಬಸವನಗುಡಿ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ ‘ಪ್ರಾಪರ್ಟಿ ಎಕ್ಸ್​ಪೋ -2018’ಗೆ ಶುಕ್ರವಾರ ಚಾಲನೆ ದೊರೆಯಿತು.

ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಚಾಲನೆ ನೀಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಚಿಕ್ಕಪೇಟೆ ಶಾಸಕ ಡಾ. ಉದಯ್ ಗರುಡಾಚಾರ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ, ನಟ ಸತೀಶ್ ನೀನಾಸಂ ಭಾಗವಹಿಸಿದ್ದರು.

ಭಾನುವಾರದವರೆಗೆ ನಡೆಯಲಿರುವ ಎಕ್ಸ್​ಪೋದಲ್ಲಿ 50ಕ್ಕೂ ಹೆಚ್ಚಿನ ಮಳಿಗೆಗಳಿದ್ದು, ರಿಯಲ್​ಎಸ್ಟೇಟ್ ಕ್ಷೇತ್ರದ ದಿಗ್ಗಜ ಸಂಸ್ಥೆಗಳು ಭಾಗವಹಿಸಿವೆ. ನಿವೇಶನ ಮತ್ತು ವಸತಿ ಯೋಜನೆಗಳ ಹೂಡಿಕೆಗಳಿಗೆ ಸುವರ್ಣ ಅವಕಾಶವಾಗಿ ಎಕ್ಸ್​ಪೋ ಮಾರ್ಪಟ್ಟಿದ್ದು, ಮೊದಲ ದಿನವೇ ಸಾವಿರಾರು ಗ್ರಾಹಕರು ಎಕ್ಸ್​ಪೋಗೆ ಭೇಟಿ ನೀಡಿದ್ದರು. ಕೆಲವರು ನಿವೇಶನಗಳಿಗೆ ಮುಂಗಡ ಪಾವತಿ ಕೂಡ ಮಾಡಿದರು ಎಂಬುದು ವಿಶೇಷ.

ಎಕ್ಸ್​ಪೋಗೆ ಚಾಲನೆ ನೀಡಿದ ಸದಾನಂದ ಗೌಡ ಮಾತನಾಡಿ, ಪ್ರತಿಯೊಬ್ಬರಿಗೂ ಸೂರು ಬೇಕು. ಆದರೆ, ಇದು ಸ್ವಂತವಾದರೆ ಉತ್ತಮ ಎಂಬುದು ಬಹುತೇಕ ಎಲ್ಲರ ಕನಸಾಗಿರುತ್ತದೆ. ಈ ಕನಸನ್ನು ನನಸು ಮಾಡುವ ಉದ್ದೇಶದಿಂದ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಎಕ್ಸ್​ಪೋ ಆಯೋಜನೆ ಮಾಡಿದೆ. ದಾಖಲೆ ತಿರುಚಿ, ನಕಲಿ ದಾಖಲೆ ಸೃಷ್ಟಿಸಿ ಗ್ರಾಹಕರಿಗೆ ಮೋಸ ಮಾಡುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ರೇರಾ ಅನುಮತಿ ಪಡೆದಿರುವ ಕಂಪನಿಗಳನ್ನು ಆಹ್ವಾನಿಸಿ ಭಯವಿಲ್ಲದೆ ಸೈಟ್ ಮತ್ತು ವಸತಿಗಳನ್ನು ಖರೀದಿಸಲು ಈ ಎಕ್ಸ್​ಪೋ ಅನುಕೂಲ ಮಾಡಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಹಕರು ಈ ಎಕ್ಸ್​ಪೋನಲ್ಲಿ ಭಾಗವಹಿಸುವ ಮೂಲಕ ಸ್ವಂತ ಮನೆ ಮಾಡಲು ಸ್ಪಷ್ಟ ಚಿತ್ರಣ ಪಡೆದುಕೊಳ್ಳಬಹುದು ಎಂದರು.

ಮೋದಿ ಕನಸು

ಪ್ರಧಾನಿ ನರೇಂದ್ರ ಮೋದಿ 2020ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕೆಂದು ಪಣ ತೊಟ್ಟಿದ್ದಾರೆ. ರಿಯಲ್​ಎಸ್ಟೇಟ್ ಯೋಜನೆಗಳಲ್ಲಿನ ಅಕ್ರಮಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ರೇರಾ ಜಾರಿಗೆ ತಂದಿದ್ದಾರೆ. ಆಯುಷ್ಮಾನ್ ಭಾರತ್ ಎಂಬ ಯೋಜನೆ ಮೂಲಕ 50 ಕೋಟಿ ಜನರಿಗೆ ಆರೋಗ್ಯ ವಿಮೆ ತಂದಿದ್ದಾರೆ ಎಂದು ಸದಾನಂದಗೌಡ ಹೇಳಿದರು.

ಸಮಗ್ರ ಮಾಹಿತಿ

ದೇಶದಲ್ಲಿ ಬಡವರು, ಮಧ್ಯಮ ಮತ್ತು ಶ್ರೀಮಂತರು ಎಂಬ ಮೂರು ವರ್ಗದ ಜನರಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಮಾಡುವುದು ಬಹಳ ಕಷ್ಟ. ಅಲ್ಪಸ್ವಲ್ಪ ಕೂಡಿಟ್ಟ ಹಣದಲ್ಲಿ ನಿವೇಶನ ಖರೀದಿಗೆ ಮುಂದಾಗುವ ಜನ, ಆತುರದಲ್ಲಿ ಮೋಸಗಾರರ ಜಾಲಕ್ಕೆ ಬಲಿಯಾಗುತ್ತಾರೆ. ಈ ರೀತಿ ಮೋಸ ಹೋಗಬಾರದು ಎಂದಾದರೆ ನಿವೇಶನ ಮತ್ತು ವಸತಿ ಖರೀದಿಸುವ ಮೊದಲು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ಹೀಗಾಗಿ ಎಲ್ಲ ಸಲಹೆ ಮತ್ತು ಮಾರ್ಗದರ್ಶನ ನೀಡಲು ಎಕ್ಸ್​ಪೋ ಆಯೋಜಿಸಿದ್ದೇವೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು. ರಿಯಲ್ ಎಸ್ಟೇಟ್ ಉದ್ಯಮಿಗಳು ಅಲ್ಲದೆ, ಒಳಾಂಗಣ ವಿನ್ಯಾಸದ ಕಂಪನಿಗಳು, ಬಾತ್​ರೂಂ ಫಿಟ್ಟಿಂಗ್ ಕಂಪನಿಗಳು, ಬ್ಯಾಂಕ್​ಗಳೂ ಎಕ್ಸ್​ಪೋನಲ್ಲಿ ಭಾಗವಹಿಸಿವೆ. ಗ್ರಾಹಕರು ಎಕ್ಸ್​ಪೋಗೆ ಆಗಮಿಸುವ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ಇನ್ನೂ 2 ದಿನ ಎಕ್ಸ್​ಪೋ

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಆರಂಭಗೊಂಡಿರುವ ಪ್ರಾಪರ್ಟಿ ಎಕ್ಸ್​ಪೋಗೆ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ. ಎಕ್ಸ್​ಪೋಗೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10ರಿಂದ ರಾತ್ರಿ 7 ಗಂಟೆವರೆಗೆ ಭೇಟಿ ನೀಡಬಹುದು.

ಅಭೂತಪೂರ್ವ ಸ್ಪಂದನೆ

ಬೆಂಗಳೂರು: ಕನಸಿನ ಮನೆ ಕಟ್ಟಿಕೊಳ್ಳುವವರಿಗಾಗಿ ಒಂದೇ ಸ್ಥಳದಲ್ಲಿ ಹಲವು ಬಿಲ್ಡರ್​ಗಳು ಮತ್ತು ಪ್ರಾಜೆಕ್ಟ್ ಪರಿಚಯಿಸುವ ನಿಟ್ಟಿನಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಪ್ರಾಪರ್ಟಿ ಎಕ್ಸ್​ಪೋದ ಮೊದಲ ದಿನ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಶುಕ್ರವಾರ ಬೆಳಗ್ಗೆ ಎಕ್ಸ್​ಪೋ ಉದ್ಘಾಟನೆಗೂ ಮುನ್ನವೇ ನೂರಾರು ಸಂಖ್ಯೆಯಲ್ಲಿ ಜನ ಆಗಮಿಸಿ ಮಾಹಿತಿ ಪಡೆದರು. ಜನ ನಿವೇಶನ, ಅಪಾರ್ಟ್​ವೆುಂಟ್ ಖರೀದಿಗೆ ಒಲವು ತೋರಿದ್ದಾರೆ. ಶನಿವಾರ ಮತ್ತು ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆಯಿದ್ದು, ಎಕ್ಸ್​ಪೋದಲ್ಲಿ ಪಾಲ್ಗೊಂಡಿರುವ ಬಿಲ್ಡರ್​ಗಳು ಸಾರ್ವಜನಿಕರ ಉತ್ತಮ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

400ಕ್ಕೂ ಅಧಿಕ ಪ್ರಾಜೆಕ್ಟ್​ಗಳು: ಪ್ರಾಪರ್ಟಿ ಎಕ್ಸ್​ಪೋದಲ್ಲಿ 45ಕ್ಕೂ ಅಧಿಕ ಬಿಲ್ಡರ್​ಗಳು ಪಾಲ್ಗೊಂಡಿದ್ದು, 400ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿ, ಚಿಕ್ಕಬಳ್ಳಾಪುರ, ಬಿಡದಿ, ನೆಲಮಂಗಲ, ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ ಮತ್ತಿತರೆಡೆ ಅಭಿವೃದ್ಧಿಪಡಿಸಲಾಗಿರುವ ಬಡಾವಣೆಗಳನ್ನು ಪ್ರದರ್ಶಿಸಲಾಗುತ್ತಿದೆ. ಬೆಂಗಳೂರಿನ ದೊಡ್ಡ ಆಲದ ಮರ, ಅಂಜನಾಪುರ, ಗುಬ್ಬಲಾಳ, ತಾವರೆಕೆರೆ, ಎಲೆಕ್ಟ್ರಾನಿಕ್ಸ್ ಸಿಟಿ, ವೈಟ್​ಫೀಲ್ಡ್, ಸರ್ಜಾಪುರ, ಕೆಂಗೇರಿ ಮುಂತಾದೆಡೆ ನಿರ್ವಿುಸಲಾಗಿರುವ ಅಪಾರ್ಟ್​ವೆುಂಟ್, ಬಡಾವಣೆಗಳನ್ನು ವಿವಿಧ ಬಿಲ್ಡರ್​ಗಳು ಪ್ರದರ್ಶಿಸುತ್ತಿದ್ದು, ಅನೇಕರು ಖರೀದಿಗೆ ಆಸಕ್ತಿ ತೋರಿದ್ದಾರೆ. ಒಂದೇ ಸೂರಿನಡಿ ಬಹುದೊಡ್ಡ ಪ್ರಮಾಣದ, ಮಹತ್ವದ ಪ್ರಾಜೆಕ್ ್ಟಗಳನ್ನು ಪ್ರದರ್ಶಿಸುತ್ತಿರುವ ಅತಿದೊಡ್ಡ ಕಾರ್ಯಕ್ರಮವಿದು ಎಂದು ಕೆಎನ್​ಎಸ್ ಇನ್​ಫ್ರಾಸ್ಟ್ರಕ್ಚರ್​ನ ಜಗನ್ನಾಥ ಜಕ್ಕ ಹೇಳಿದರು. ಟಿ.ವಿ. ಡಿಸ್​ಪ್ಲೇಗಳ ಮೂಲಕವೂ ವಿವಿಧ ಪ್ರಾಜೆಕ್ಟ್​ಗಳ ಮಾಹಿತಿ ಪ್ರದರ್ಶಿಸಲಾಗುತ್ತಿದೆ. ಪ್ರಾಜೆಕ್ಟ್​ಗಳ ಕುರಿತಾಗಿ ವಿವರವಾದ ಮಾಹಿತಿ ಲಭ್ಯವಾಗುತ್ತಿದೆ. ಜನರಿಂದಲೂ ಮೆಚ್ಚುಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

400ಕ್ಕೂ ಅಧಿಕ ಪ್ರಾಜೆಕ್ಟ್​ಗಳು

ಎಕ್ಸ್​ಪೋದಲ್ಲಿ ಆಸ್ಥಾ ಪ್ರಾಪರ್ಟೀಸ್, ಸ್ವಮಿತ್ವಾ ಇನ್​ಫ್ರಾ, ಗೋಪಾಲನ್ ಎಂಟರ್​ಪ್ರೖೆಸಸ್, ದುರ್ಗಶ್ರೀ ವೆಂಚರ್ಸ್, ಡಿಎಸ್ ಮ್ಯಾಕ್ಸ್, ಎಕೆ ಮ್ಯಾಕ್ಸ್, ಟ್ರಿಂಕೊ, ಕೆಎನ್​ಎಸ್ ಇನ್​ಫ್ರಾ, ರಾಜೇಶ್ವರಿ ಆಶೀರ್ವಾದ್, ಬೃಂದಾವನ, ಬೆಳ್ಳಿ ಭೂಮಿ ಪ್ರಾಪರ್ಟೀಸ್, ಗೋಲ್ಡನ್ ಪಾಮ್ ಸ್ಯಾನ್​ಸಿಟಿ ಇನ್​ಫ್ರಾಸ್ಟ್ರಕ್ಚರ್, ಎಎಸ್​ಬಿ ಡೆವಲಪರ್ಸ್ ಆಂಡ್ ಪ್ರಮೋಟರ್ಸ್, ಶಿವಾ ಡೆವಲಪರ್ಸ್, ಯುಆರ್​ಐ, ಸಮೃದ್ಧಿ, ಕರ್ನಾಟಕ ಹೌಸಿಂಗ್ ಬೋರ್ಡ್, ಎಬಿ ಪ್ರಾಜೆಕ್ಟ್ ್ಸ ವಿಬಿಎಚ್​ಸಿ, ಅನುಗ್ರಹ, ಕಾನ್​ಕಾರ್ಡ್ ಗ್ರೂಪ್, ಸಿಟ್ರಸ್ ಪ್ರಾಜೆಕ್ಟ್ ್ಸ ಮಹಾವೀರ್, ಭಗಿನಿ ಡೆವಲಪರ್ಸ್, ಸ್ಟೇಟಸ್ ಪ್ರಾಪರ್ಟೀಸ್, ಉಪಕಾರ ಡೆವಲ್ಪರ್ಸ್, ಮಂಗಲ ಪ್ರಾಪರ್ಟೀಸ್, ವಿಜಯ ಎಂಟರ್​ಪ್ರೖೆಸಸ್- ಹೀಗೆ 45ಕ್ಕೂ ಅಧಿಕ ಕಂಪನಿಗಳು 400ಕ್ಕೂ ಅಧಿಕ ರೇರಾ ಅನುಮೋದಿತ ಪ್ರಾಜೆಕ್ಟ್​ಗಳನ್ನು ಪ್ರದರ್ಶಿಸುತ್ತಿವೆ. ಜ್ಯೂಪಿಟರ್ ಆವುವಾ ಲೈನ್ಸ್ (ಜಲ್) ಕಂಪನಿಯು ಬಾತ್​ರೂಂಗೆ ಅಗತ್ಯವಾಗುವ ವಸ್ತುಗಳನ್ನು ಪ್ರದರ್ಶಿಸುತ್ತಿದೆ. 4 ಲಕ್ಷ ರೂ.ಗಳಿಂದ ನಿವೇಶನಗಳು, 17 ಲಕ್ಷ ರೂ.ಗಳಿಂದ ಫ್ಲ್ಯಾಟ್​ಗಳು ಮತ್ತು ಕರ್ನಾಟಕ ಗೃಹ ಮಂಡಳಿಯ ನಿವೇಶನಗಳು ಕೈಗೆಟುಕುವ ದರದಲ್ಲಿ ಲಭ್ಯವಿವೆ.

ಜನವೋ ಜನ!

ಎಕ್ಸ್​ಪೋ ವೀಕ್ಷಣೆಗೆ ಬೆಳಗ್ಗೆ ಯಿಂದಲೇ ಭಾರಿ ಸಂಖ್ಯೆಯಲ್ಲಿ ಜನರಿದ್ದರು. ಮಧ್ಯಾಹ್ನದ ವೇಳೆಯೂ ಸಂಖ್ಯೆ ಕಡಿಮೆ ಆಗಿರಲಿಲ್ಲ. ಸಂಜೆ ನಂತರ ಮತ್ತಷ್ಟು ಹೆಚ್ಚಳಗೊಂಡಿತು.

ಬೆಂಗಳೂರು ಮತ್ತು ಹೊರಭಾಗದಲ್ಲಿ ಲಭ್ಯವಿರುವ ನಿವೇಶನ, ಫ್ಲ್ಯಾಟ್, ವಿಲ್ಲಾಗಳ ಮಾಹಿತಿ ನೀಡಲು ಎಕ್ಸ್​ಪೋ ಉತ್ತಮ ವೇದಿಕೆಯಾಗಿದೆ. ಬ್ಯಾಂಕ್​ಗಳು ಸಹ ಭಾಗವಹಿಸಿರುವುದರಿಂದ ಸ್ಥಳದಲ್ಲೇ ಎಲ್ಲ ಮಾಹಿತಿ ಪಡೆಯಬಹುದು.

| ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್

ನಮ್ಮ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 2.4 ಲಕ್ಷ ಜನರಿದ್ದಾರೆ. ಪ್ರತಿಯೊಬ್ಬರೂ ಎಕ್ಸ್​ಪೋಗೆ ಆಗಮಿಸುವ ಮೂಲಕ ನಿಮ್ಮ ಕನಸಿನ ಮನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

| ಡಾ. ಉದಯ್ ಗರುಡಾಚಾರ್ ಶಾಸಕ

ನಾನು ಈ ಎಕ್ಸ್​ಪೋಗೆ ಮೊದಲ ಬಾರಿಗೆ ಬಂದಿದ್ದೇನೆ. ತುಂಬ ಖುಷಿಯಾಗುತ್ತಿದೆ. ಸ್ವಂತ ಮನೆ ಮಾಡುವ ಕನಸು ಇರುವವರು ಎಕ್ಸ್​ಪೋಗೆ ಬರಲೇಬೇಕು. ಇಲ್ಲಿ ಸಮಗ್ರ ಮಾಹಿತಿ ದೊರೆಯಲಿದೆ.

| ಪ್ರಿಯಾಂಕಾ ಉಪೇಂದ್ರ ನಟಿ

ಎಲ್ಲರಿಗೂ ಮನೆ ಮಾಡಬೇಕೆಂಬ ಕನಸು ಇರುತ್ತದೆ. ಆದರೆ, ಎಲ್ಲಿ ಖರೀದಿ ಮಾಡಬೇಕು, ಬೆಲೆ ಎಷ್ಟು ಎಂಬ ಮಾಹಿತಿ ಇರುವುದಿಲ್ಲ. ಈ ಎಲ್ಲ ಮಾಹಿತಿ ಪಡೆಯಬೇಕಾದಲ್ಲಿ ಎಕ್ಸ್​ಪೋಗೆ ಆಗಮಿಸುವುದು ಉತ್ತಮ.

| ಸತೀಶ್ ನೀನಾಸಂ ನಟ

ಬೆಂಗಳೂರಿನಲ್ಲಿ ಮನೆ ಮಾಡುವುದು ಸುಲಭದ ಮಾತಲ್ಲ. ಆದರೆ, ಸೂಕ್ತ ಮಾಹಿತಿ ಪಡೆದು ಹಣ ಉಳಿಸಿದರೆ ಮನೆ ಕಟ್ಟುವುದು ಕಷ್ಟ ಕೂಡ ಅಲ್ಲ. ಎಕ್ಸ್​ಪೋನಲ್ಲಿ ಎಲ್ಲ ರೀತಿಯ ಮಾಹಿತಿ ದೊರೆಯುತ್ತಿರುವುದು ಖುಷಿಯ ವಿಚಾರ.

| ಕಾವ್ಯಾ ಶಾ ನಟಿ

ವಿಜಯವಾಣಿ ಪತ್ರಿಕೆಯನ್ನು ನೋಡಿ ಎಕ್ಸ್​ಪೋಗೆ ಬಂದಿದ್ದೇನೆ. ಬೆಂಗಳೂರು ಸೇರಿ ಮಹಾ ನಗರಗಳಲ್ಲಿ ನಿವೇಶನ ಗಳನ್ನು ಪಡೆಯು ವಾಗ ಜಾಗ್ರತೆ ವಹಿಸಬೇಕು. ಆದರೆ, ವಿಜಯವಾಣಿ ಪತ್ರಿಕೆ ಎಕ್ಸ್​ಪೋ ಆಯೋಜಿಸಿರು ವುದರಿಂದ ಪ್ರಾಪರ್ಟಿ ಖರೀದಿಗೆ ವಿಶ್ವಾಸ ಬಂದಿದೆ. ಅದಕ್ಕಾಗಿ ಆಗಮಿಸಿದ್ದೇನೆ.

| ತರಂಗ ವಿಶ್ವ ನಟ


ಎಎಸ್​ಬಿ ಬಸವ ಹಿಲ್​ವ್ಯೂಗೆ ಹೆಚ್ಚಿದ ಬೇಡಿಕೆ

ಬೆಂಗಳೂರು: ಬಿಡದಿ -ರಾಮನಗರ ನಡುವೆ 100 ಎಕರೆ ಪ್ರದೇಶದಲ್ಲಿ ಎಎಸ್​ಬಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಸಿದ್ಧಪಡಿಸಿರುವ ಎಎಸ್​ಬಿ ಬಸವ ಹಿಲ್​ವ್ಯೂ ರೆಸಿಡೆನ್ಸಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಸುಸಜ್ಜಿತ ಬಡಾವಣೆಯೂ ಹೂಡಿಕೆ ಮತ್ತು ವಾಸಕ್ಕೆ ಯೋಗ್ಯವಾಗಿದೆ. ಎಎಸ್​ಬಿಯ ಇತರ ಬಡಾವಣೆಗಳಂತೆ ಹೆಚ್ಚು ಒತ್ತನ್ನು ನೀಡಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಕಂಪನಿ ಚೇರ್ಮನ್ ಎಸ್. ಭಗೀರಥ ತಿಳಿಸಿದ್ದಾರೆ.

ಎಎಸ್​ಬಿ ನಿವೇಶನ ಈಗಾಗಲೇ ಖರೀದಿಸಿರುವ ಗ್ರಾಹಕರು ಇಂದಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ರಚನಾತ್ಮಕ ಯೋಜನೆ ಹಮ್ಮಿಕೊಳ್ಳುವುದಾಗಿ ಕಂಪನಿ ಹೇಳಿದೆ.

ವಿವಿಧ ಯೋಜನೆಗಳು: ದೊಡ್ಡ ಆಲದ ಮರದ ಬಳಿ 15 ಎಕರೆ ಪ್ರದೇಶದಲ್ಲಿ ಎಎಸ್​ಬಿ ಭರತ್ ಎನ್​ಕ್ಲೇವ್ ಬಡಾವಣೆಯನ್ನು ಕಂಪನಿ ಅಭಿವೃದ್ಧಿಪಡಿಸಿದ್ದು, 300ಕ್ಕೂ ಅಧಿಕ ನಿವೇಶನಗಳಿವೆ.

ಮಡಿಕೇರಿಯ ಕುಶಾಲನಗರದ ಗೋಲ್ಡನ್ ಟೆಂಪಲ್ ಬಳಿ 14.30 ಎಕರೆ ಪ್ರದೇಶದಲ್ಲಿ ಎಎಸ್​ಬಿ ಗೋಲ್ಡನ್ ರೆಸಿಡೆನ್ಸಿ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ಕಂಪನಿ ಅಭಿವೃದ್ಧಿಪಡಿಸಿರುವ ಎಲ್ಲ ಪ್ರಾಜೆಕ್ಟ್ ಗಳಿಗೂ ಉತ್ತಮ ಬೇಡಿಕೆಯಿದೆ. ಸದಾ ಹೊಸತನಕ್ಕೆ ಒತ್ತು ನೀಡಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಭವಿಷ್ಯವನ್ನು ಗಮನದಲ್ಲಿಸಿರಿಕೊಂಡು ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಎಸ್. ಭಗೀರಥ ವಿವರಿಸಿದ್ದಾರೆ. ಬಿಡದಿ ರಾಮನಗರ ನಡುವೆ ನಿರ್ವಣಗೊಂಡಿರುವ ಹಿಲ್​ವ್ಯೂ ಬಡಾವಣೆ ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯಿಂದ

400 ಮೀಟರ್ ದೂರದಲ್ಲಿದೆ. ವಿವರಕ್ಕೆ ಮೊ: 9535819999, ವೆಬ್​ಸೈಟ್: www.asbgroups.com ಸಂಪರ್ಕಿಸಿ.


ಟ್ರಿಂಕೋ ಇನ್​ಫ್ರಾ ಪ್ರಾಜೆಕ್ಟ್​ಗಳು

ಬೆಂಗಳೂರು: ರಿಯಲ್​ಎಸ್ಟೇಟ್ ಕ್ಷೇತ್ರದಲ್ಲಿ 18 ವರ್ಷಗಳ ಅನುಭವ ಹೊಂದಿರುವ ಜೆ.ಪಿ. ನಗರದ ಟ್ರಿಂಕೋ ಇನ್​ಫ್ರಾ ಪ್ರೖೆ.ಲಿ. ಕಂಪನಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಪ್ರಮುಖ ಪ್ರಾಜೆಕ್ಟ್ಗಳನ್ನು ನಿರ್ವಹಿಸುತ್ತಿದೆ.

ಅಂಜನಾಪುರದಲ್ಲಿ ಟ್ರಿಂಕೋ ತಪಸ್ವಿ, ಗುಬ್ಬಲಾಳ ದಲ್ಲಿ ಶಾಂತಿವನ ಹಾಗೂ ಕೆಎಸ್​ಐಟಿ ಕಾಲೇಜು ಬಳಿ ಟ್ರಿಂಕೋ ಹಿಲ್ ವ್ಯೂಸ್ ಪ್ರಾಜೆಕ್ಟ್​ಗಳನ್ನು ನಿರ್ವಹಿಸುತ್ತಿದೆ. ಅಂಜನಾಪುರದಲ್ಲಿ ನಿರ್ವಿುಸಿರುವ ತಪಸ್ವಿನಿ ಬಡಾವಣೆಯನ್ನು ವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎಲ್ಲ ಪ್ರಾಜೆಕ್ಟ್​ಗಳು ಎ ಖಾತಾ ನಿವೇಶನಗಳನ್ನು ಹೊಂದಿವೆ ಎಂದು ಟ್ರಿಂಕೋ ಪ್ರಾಪರ್ಟೀಸ್ ತಿಳಿಸಿದೆ. ಎಂ.ಎಸ್. ದಿವ್ಯಾ, ಎಂ.ಎಸ್. ಪ್ರಸಾದ್ ನೇತೃತ್ವದಲ್ಲಿ ಕಂಪನಿ ಅತ್ಯುತ್ತಮವಾಗಿ ಕಾರ್ಯನಿರ್ವ ಹಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಸಾಧಿಸುತ್ತಿದೆ.

ಪ್ರಾಜೆಕ್ಟ್​ಗಳಲ್ಲಿ ವಿಶೇಷತೆ: ಟ್ರಿಂಕೋ ತಪಸ್ವಿ ಬಡಾವಣೆಯಲ್ಲಿ 3040, 3050 ಹಾಗೂ ಇತರ ಅಳತೆಯ ನಿವೇಶನಗಳು ಮಾರಾಟಕ್ಕೆ ಲಭ್ಯವಿವೆ. 247 ಭದ್ರತೆಯನ್ನು ಬಡಾವಣೆ ಹೊಂದಿದ್ದು, ಅಂಡರ್​ಗ್ರೌಂಡ್ ಎಲೆಕ್ಟ್ರಿಸಿಟಿ, ಒಳಚರಂಡಿ ವ್ಯವಸ್ಥೆಯೂ ಇದೆ. ಉತ್ತಮ ಗುಣಮಟ್ಟದ ರಸ್ತೆ, ಪಾದಚಾರಿ ಮಾರ್ಗ, ಮಳೆ ನೀರು ಕೊಯ್ಲು, ಕುಡಿಯುವ ನೀರಿನ ಸಂಪರ್ಕ, ಬೀದಿದೀಪ, ಕಾಂಪೌಂಡ್ ಇದೆ. ಟ್ರಿಂಕೋ ಶಾಂತಿವನವೂ ಈ ಎಲ್ಲ ವ್ಯವಸ್ಥೆಗಳನ್ನು ಹೊಂದಿದ್ದು, 2 ಎಕರೆ ಪ್ರದೇಶದಲ್ಲಿ 45 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಇದಲ್ಲದೆ ದೊಡ್ಡ ಆಲದಮರದ ಬಳಿ ಟ್ರಿಂಕೋ ಟ್ರಾ್ಯಂಕ್ವಿಲ್ ಸೇರಿ ಇನ್ನಿತರ ಪ್ರಾಜೆಕ್ಟ್​ಗಳನ್ನೂ ಕಂಪನಿ ನಿರ್ವಹಿಸುತ್ತಿದೆ. ಮಾಹಿತಿಗೆ ಟ್ರಿಂಕೋ ಪ್ರಾಪರ್ಟಿ‘ ಮೊ: 90191 84184

ವೆಬ್​ಸೈಟ್:

ಡಿಡಿಡಿ.www.trincoproperty.com

Leave a Reply

Your email address will not be published. Required fields are marked *

Back To Top