ಸಾವಿನಲ್ಲೂ ಸಾರ್ಥಕ್ಯ ಮೆರೆದ ದಿಗ್ವಿಜಯ ನ್ಯೂಸ್‌ ಉದ್ಯೋಗಿ ಅಮಿತ್‌

ಬೆಂಗಳೂರು: ತೀವ್ರ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ದಿಗ್ವಿಜಯ ನ್ಯೂಸ್‌ನ ಸಿಬ್ಬಂದಿ ಅಮಿತ್ ತುಬಾಚಿ​ (24) ಬುಧವಾರ ಮಧ್ಯಾಹ್ನ ನಿಧನರಾಗಿದ್ದು, ಪಾಲಕರು ಪುತ್ರನ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಒಂದೂವರೆ ವರ್ಷದಿಂದ ದಿಗ್ವಿಜಯ ನ್ಯೂಸ್ ಪ್ರೊಡಕ್ಷನ್ ವಿಭಾಗದಲ್ಲಿ ಪ್ರೊಡಕ್ಷನ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಅಮಿತ್. ನೆಚ್ಚಿನ ಸಹೋದ್ಯೋಗಿ ಮಿತ್ರನಿಗೆ ದಿಗ್ವಿಜಯ ನ್ಯೂಸ್‌ ಮತ್ತು ವಿಜಯವಾಣಿ ಸಿಬ್ಬಂದಿ ಸಂತಾಪ ಸೂಚಿಸಿ ಕಂಬಿನಿ ಮಿಡಿದಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿಯ ಅಮಿತ್ ಒಬ್ಬನೇ ಪುತ್ರ. ಸದಾ ಲವಲವಿಕೆಯಿಂದಲೇ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಮಿತ್‌ಗೆ ಮೊನ್ನೆ ಹೃದಯಾಘಾತವಾಗಿತ್ತು.

ಮೂರು ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಹುಟ್ಟೂರಿನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ. (ದಿಗ್ವಿಜಯ ನ್ಯೂಸ್)

One Reply to “ಸಾವಿನಲ್ಲೂ ಸಾರ್ಥಕ್ಯ ಮೆರೆದ ದಿಗ್ವಿಜಯ ನ್ಯೂಸ್‌ ಉದ್ಯೋಗಿ ಅಮಿತ್‌”

Comments are closed.