ಬಿಗ್​ ಬಾಸ್ ಸೀಸನ್​ 6ರಲ್ಲಿ ಇವರೆಲ್ಲ ಇರ್ತಾರೆ… ಇದು ದಿಗ್ವಿಜಯ ನ್ಯೂಸ್‌ ಬಿಗ್‌ ಎಕ್ಸ್‌ಕ್ಲೂಸಿವ್‌!

ಬೆಂಗಳೂರು: ಟೆಲಿವಿಶನ್‌ ಇತಿಹಾಸದಲ್ಲೇ ಹೊಸ ಟ್ರೆಂಡ್‌ ಹುಟ್ಟುಹಾಕಿರುವ ಬಿಗ್‌ ಬಾಸ್‌ ಸೀಸನ್‌ 6ಕ್ಕೆ ಯಾರೆಲ್ಲ ಇರಬಹುದು ಎನ್ನುವತ್ತ ಸದ್ಯ ಎಲ್ಲರ ಚಿತ್ತ ನೆಟ್ಟಿದೆ.

ಪ್ರತಿಬಾರಿಯೂ ಅಭ್ಯರ್ಥಿಗಳು ಯಾರೆಲ್ಲ ಇರಲಿದ್ದಾರೆ ಎನ್ನುವ ಕುರಿತು ರಾಜ್ಯದ ಜನತೆಗಷ್ಟೇ ಅಲ್ಲದೆ ಸೆಲೆಬ್ರಿಟಿಗಳಿಗೂ ಅಚ್ಚರಿಯ ಗೂಡಾಗಿದೆ. ಬಿಗ್‌ ಬಾಸ್‌ ಸೀಸನ್‌ 6ರ ಕೌಂಟ್‌ಡೌನ್‌ ಶುರುವಾಗಿದ್ದು, ಈ ಬಾರಿ ಯಾರೆಲ್ಲ ಬಿಗ್​ ಹೌಸ್​ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿವರವನ್ನು ದಿಗ್ವಿಜಯ ನ್ಯೂಸ್​ ‘ಬಿಗ್’ ಎಕ್ಸ್​ಕ್ಲೂಸಿವ್​ ​ಸ್ಟೋರಿಯಲ್ಲಿ ನಿಮ್ಮ ಮುಂದೆ ನೀಡುತ್ತಿದೆ.

ನಟ ಸುದೀಪ್​ ಹೋಸ್ಟ್​ ಮಾಡುವ ಅತೀ ದೊಡ್ಡ ರಿಯಾಲಿಟಿ ಶೋನಲ್ಲಿ ಯಾವ ಸೆಲೆಬ್ರಿಟಿಗಳು, ಜನಸಾಮಾನ್ಯ ಸ್ಪರ್ಧಿಗಳು ಇರಲಿದ್ದಾರೆ ಎನ್ನುವ ಕುರಿತು ದಿಗ್ವಿಜಯ ನ್ಯೂಸ್​ ಬಳಿಯಿದೆ ‘ಬಿಗ್’​ ಹೌಸ್​ ಸ್ಪರ್ಧಿಗಳ ಪಟ್ಟಿ.

ಬಿಗ್​ ಬಾಸ್​ ಸೀಸನ್​ 6ರಲ್ಲಿ ಭಾಗಿಯಾಗುವ ಸ್ಪರ್ಧಿಗಳು ಇವರು…

1. ಹೇಮಲತಾ – ಖಾಸಗಿ ಟಿವಿ ನಿರೂಪಕಿಗೆ ಇಂಥದ್ದೊಂದು ಅದೃಷ್ಟ ಖುಲಾಯಿಸಿದ್ದು, ಇವರು ಹೋಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

2. ಮುರುಳಿ – ಒಗ್ಗರಣೆ ಡಬ್ಬಿ ನಿರೂಪಕನಾಗಿಯೇ ಸಖತ್‌ ಫೇಮಸ್‌ ಆಗಿರುವ ಇವರು ಬಿಗ್‌ ಬಾಸ್‌ ಸೀಸನ್‌ 6ರ ಸ್ಪರ್ಧಿಯಾಗಲಿದ್ದಾರೆ.

3. ರವಿಪ್ರಸಾದ್​​​ – ಡಬ್​​​ ಸ್ಮ್ಯಾಶ್​ ಸ್ಟಾರ್ ಎಂದೇ ಫೇಮಸ್ಸಾಗಿರುವ ರವಿಪ್ರಸಾದ್‌ ಕೂಡ ಈ ಬಾರಿ ಬಿಗ್‌ ಬಾಸ್‌ನಲ್ಲಿ ರಾಜ್ಯದ ಜನರಿಗೆ ಮನರಂಜನೆ ಒದಗಿಸೋ ಸಾಧ್ಯತೆ ಇದೆ.

4. ಸುಮನ್​ ರಂಗನಾಥ್​​ – ನಟಿ/ಬಹುಭಾಷಾ ತಾರೆ/ ಗ್ಲಾಮರಸ್​ ನಟಿ. ದಕ್ಷಿಣ ಭಾರತದ ಸಿನಿರಂಗದಲ್ಲಿ ಫೇಮಸ್ಸಾಗಿರೋ ನಟಿ ಬಿಗ್​ ಹೌಸ್​ಗೆ ಎಂಟ್ರಿ ಕೊಡಲಿದ್ದಾರೆ.

5. ಪ್ರೇಮಾ – ಸ್ಯಾಂಡಲ್​ವುಡ್​ ಕಂಡಿರೋ ಪ್ರತಿಭಾವಂತ ನಟಿ. ಸಾಕಷ್ಟು ಚಿತ್ರಗಳಲ್ಲಿ ಮಿಂಚಿರುವ ನಟಿ.

6. ಪ್ರೇಮಕುಮಾರಿ – ಮೈಸೂರು ನಿವಾಸಿಯಾಗಿರುವ ಇವರು ರಾಜಕಾರಣಿಯೊಬ್ಬರ ಜತೆ ಹೊಂದಿರೋ ನಂಟು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕ ಇವರು ರಾಜಕೀಯ ಪಕ್ಷವೊಂದರಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

7. ಗುರುಕಿರಣ್​​​ – ಸ್ಯಾಂಡಲ್‌ವುಡ್‌ ಕಂಡಿರುವ ಪ್ರತಿಭಾವಂತ ಸಂಗೀತ ನಿರ್ದೇಶಕನಾಗಿ ನೂರಾರು ಚಿತ್ರಗಳಿಗೆ ಸಂಗೀತ ನೀಡಿರುವ ಅಪ್ಪಟ ಕನ್ನಡದ ಕಲಾವಿದ.

8. ಇಂದ್ರಜಿತ್​​​ ಲಂಕೇಶ್​​ – ನಿರ್ದೇಶಕ, ಪತ್ರಕರ್ತ/ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋ ಮೂಲಕ ಫೇಮಸ್​ ಆದವರು ಇಂದ್ರಜಿತ್​ ಲಂಕೇಶ್​.

9. ನವೀನ್​​ ಕೃಷ್ಣ – ಸ್ಯಾಂಡಲ್​ವುಡ್​ನ ಕಲಾವಿದ ನವೀನ್​ ಕೃಷ್ಣ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

10. ಎಸ್​​​. ನಾರಾಯಣ್​​​ – ಕಲಾಸಾಮ್ರಾಟ್‌ ಎಂದೇ ಪರಿಚಿತವಾಗಿರುವ ಯಶಸ್ವಿ ಚಿತ್ರಗಳ ನಿರ್ದೇಶಕ ಎಸ್‌.ನಾರಾಯಣ್‌ ಈ ಭಾರಿ ಬಿಗ್‌ಬಾಸ್‌ ಬಾಗಿಲಿನಲ್ಲಿ ನಿಂತಿದ್ದಾರೆ.

11. ದಿಗಂತ್​ – ಸ್ಯಾಂಡಲ್​ವುಡ್​ ದೂದ್​ಪೇಡಾ ಎಂದೇ ಹೆಸರಾಗಿರುವ ನಟ ದಿಗಂತ್‌ ಬಾಲಿವುಡ್​ನ ಕೆಲ ಚಿತ್ರಗಳಲ್ಲಿಯೂ ಮಿಂಚಿದ್ದಾರೆ.

12. ಮೂವರು ಸಾಮಾನ್ಯ ಜನ – ಈ ಎಲ್ಲ ದಿಗ್ಗಜರ, ಸೆಲೆಬ್ರಿಟಿಗಳ ಜತೆ ಬಿಗ್​ ಹೌಸ್​ಗೆ ಮೂವರು ಸಾಮಾನ್ಯ ಜನರು ಎಂಟ್ರಿ ಕೊಡಲಿದ್ದಾರೆ.

ಕಳೆದ ವರ್ಷ ಅಂದರೆ ಸೀಸನ್​ ಐದರಲ್ಲಿಯೂ ಕಾಮನ್​ ಮ್ಯಾನ್​ಗಳು ಕೂಡ ಅಂತಿಮ ಹಂತದವರೆಗೂ ಸೆಲೆಬ್ರಿಟಿಗಳಿಗೆ ಸ್ಪರ್ಧೆಯೊಡ್ಡಿ ಹೈಲೈಟ್​ ಆಗಿದ್ದರು. ಈ ಬಾರಿಯೂ ಮೂವರು ಸಾಮಾನ್ಯ ವ್ಯಕ್ತಿಗಳು ಬಿಗ್​ ಹೌಸ್​ಗೆ ಎಂಟ್ರಿ ಕೊಡಲಿದ್ದು, ಆ ಅದೃಷ್ಟವಂತರು ಯಾರು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.