ಅತಿಥಿ ಉಪನ್ಯಾಸಕರ ಬದುಕಿಗೆ ತೊಂದರೆ, ಕೆ-ಸೆಟ್​ನಲ್ಲಿ ಅರ್ಹತೆ ಪಡೆದವರಿಗೆ ಅವಕಾಶ ನೀಡಲು ಒತ್ತಾಯ

blank

ನರೇಗಲ್ಲ: ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರೆಯಲಾಗಿರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಜನವರಿ 4ರಂದು ಕೆಇಎ ವತಿಯಿಂದ ಪ್ರಕಟಗೊಂಡ ಕರ್ನಾಟಕ ಅರ್ಹತಾ ಪರೀಕ್ಷೆ (ಕೆ-ಸೆಟ್) ಫಲಿತಾಂಶದಲ್ಲಿ ಅರ್ಹತೆ ಪಡೆದ ಅತಿಥಿ ಉಪನ್ಯಾಸಕರಿಗೆ ಅವಕಾಶ ನೀಡಬೇಕು ಎಂದು ಅತಿಥಿ ಉಪನ್ಯಾಸಕ ಶ್ರೀಕಾಂತ ನಾಯ್ಕ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಕೆ- ಸೆಟ್ ಫಲಿತಾಂಶ ಪ್ರಕಟವಾಗಿದೆ. ಆದರೆ, ಕೆಇಎಯಿಂದ ಅರ್ಹತಾ ಪ್ರಮಾಣ ಪತ್ರ ನೀಡಲು ಸಮಯ ಬೇಕಾಗುತ್ತದೆ. ಆದರೆ, ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಜನವರಿ 8 ಕೊನೆಯ ದಿನಾಂಕವಾಗಿದೆ. ಆದಕಾರಣ ಉನ್ನತ ಶಿಕ್ಷಣ ಸಚಿವರು, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಈಚೆಗೆ ಪ್ರಕಟವಾದ ಫಲಿತಾಂಶದಲ್ಲಿ ಅರ್ಹತೆ ಪಡೆದವರಿಗೂ ಅವಕಾಶ ಮಾಡಿಕೊಡಬೇಕು ಎಂದರು.

 

ಇಲಾಖೆಯಿಂದ 3 ವರ್ಷದಲ್ಲಿ ಅರ್ಹತಾ ಪರೀಕ್ಷೆ ಪಾಸಾಗಬೇಕು ಎನ್ನುವ ಷರತ್ತು ಹಾಕಲಾಗಿತ್ತು. ಅದರಂತೆ ಪಾಸಾದರೂ ಅವಕಾಶ ನೀಡದೆ ಹೋದರೆ ಕಷ್ಟಪಟ್ಟು ಓದಿಯೂ ಅವಕಾಶ ಕಳೆದುಕೊಂಡು ಪರದಾಡಬೇಕಾದ ಪರಿಸ್ಥಿತಿಯನ್ನು ಅತಿಥಿ ಉಪನ್ಯಾಸಕರು ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವಕಾಶ ಮಾಡಿಕೊಡಬೇಕು ಎಂದರು.

 

ಅತಿಥಿ ಉಪನ್ಯಾಸಕಿ ತಾಜಿನಾಬಾನು ಹುಲ್ಲೂರು ಮಾತನಾಡಿ, ಕೆ-ಸೆಟ್ ಫಲಿತಾಂಶದ ಅರ್ಹತಾ ಪಟ್ಟಿಯಲ್ಲಿ ಹೆಸರಿದ್ದರೂ ಅದನ್ನು ಅರ್ಜಿಯಲ್ಲಿ ಕಾಣಿಸಲು ಅವಕಾಶ ಇಲ್ಲದಂತಾಗಿದೆ. ಅನೇಕ ವರ್ಷಗಳಿಂದ ಕಡಿಮೆ ವೇತನದಲ್ಲಿ ಅತಿಥಿ ಉಪನ್ಯಾಸಕರಾಗಿ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದೇವೆ. ಆದರೆ ಕೆ- ಸೆಟ್ ಅರ್ಹತೆ ಕಾಣಿಸಲು ಇಲಾಖೆಯಿಂದ ಅವಕಾಶ ನೀಡದೆ ಹೋದರೆ ಅರ್ಹರಾಗಿಯೂ ಅವಕಾಶ ವಂಚಿತರಾಗುತ್ತೇವೆ. ಆದ್ದರಿಂದ ಅರ್ಹತೆಯನ್ನು ಪರಿಗಣನೆಗೆ ತೆಗೆದುಕೊಂಡು ಕಾಲೇಜು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಬೇಕು ಎಂದರು.

 

ಅತಿಥಿ ಉಪನ್ಯಾಸಕ ಚಂದ್ರು ಎಂ. ರಾಥೋಡ್ ಮಾತನಾಡಿ, ಕೆ-ಸೆಟ್ ನಲ್ಲಿ ಅರ್ಹತೆ ಪಡೆದವರಿಗೆ ಅರ್ಹತಾ ಪ್ರಮಾಣ ಪತ್ರದ ಕಾರಣದಿಂದ ಅವಕಾಶ ನೀಡದೆ ಇದ್ದರೆ ಅನೇಕ ಅತಿಥಿ ಉಪನ್ಯಾಸಕರ ಬದುಕಿಗೆ ತೊಂದರೆ ಆಗಲಿದೆ. ಆದ್ದರಿಂದ ಈ ಬಾರಿ ಅರ್ಹತೆ ಪಡೆದವರಿಗೆ ಅವಕಾಶ ನೀಡಬೇಕು ಎಂದರು.

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…