
ಅಳವಂಡಿ: ಮಹಿಳೆಯರು ಸಂಕೋಚ ಬಿಟ್ಟು ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಶ್ರೀ ಮರುಳಾರಾದ್ಯ ಶಿವಾಚಾರ್ಯ ತಿಳಿಸಿದರು.
ಇದನ್ನೂ ಓದಿ: ವಿವಿಧ ಕ್ಷೇತ್ರಗಳ 10 ಸಾಧಕ ಮಹಿಳೆಯರಿಗೆ ಪಿಆರ್ಸಿಐ ಪ್ರಶಸ್ತಿ; ಸ್ತ್ರೀಯರ ಸಾಧನೆಗೆ ಶ್ಲಾಘನೆ
ಗ್ರಾಮದಲ್ಲಿ ನೆಹರು ಯುವ ಕೇಂದ್ರ ಕೊಪ್ಪಳ, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ ಕೊಪ್ಪಳದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಮಹಿಳೆಯರು ಬಳಸಿಕೊಂಡು ಮುಂದೆ ಬರಬೇಕು. ಹಿಂದಿನ ದಿನಮಾನದಲ್ಲಿ ಪ್ರತಿಯೊಬ್ಬ ಸಾಧಕನ ಹಿಂದೆ ಪ್ರೇರಣಾ ಶಕ್ತಿಯಾಗಿ ಮಹಿಳೆ ಇದ್ದಾಳೆ. ಜೀವನದಲ್ಲಿ ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ವಕಿಲೆ ಪ್ರೇಮಾ ಮಾತನಾಡಿ, ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗದೆ ಅದರ ವಿರುದ್ಧ ಧ್ವನಿ ಎತ್ತಿ ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ ಇದು ನಿಮ್ಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮಹಿಳೆಯರು ಉದ್ಧಾರ ಆಗಬೇಕಾದರೆ ಶಿಕ್ಷಣವೇ ಬ್ರಹ್ಮಾಸ್ತ್ರ, ಈಗಾಗಿ ಉತ್ತಮ ಶಿಕ್ಷಣ ಪಡೆದುಕೊಳ್ಳಿ ಇದು ನಿಮ್ಮ ಹಕ್ಕಾಗಿದೆ. ಹೆಣ್ಣು ಮನೆಯ ಕಣ್ಣು, ಕಷ್ಟವನ್ನು ನಿಭಾಯಿಸುವ ಗುಣ ಹೆಣ್ಣಿಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಇತರೆ ಮಹಿಳೆ ಸಾಧಕರನ್ನು ಸನ್ಮಾನಿಸಲಾಯಿತು. ಕೊಪ್ಪಳದ ಮಹಿಳಾ ಧ್ವನಿ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ, ವಕೀಲ ಗುರುಬಸವರಾಜ ಹಳ್ಳಿಕೇರಿ, ಪ್ರಮುಖರಾದ ಅನ್ವರ ಗಡಾದ, ಶಶಿಕಲಾ, ಬಿ.ಎನ್.ಹೊರಪೇಟಿ, ಪೂಜಾ, ಮಲ್ಲಮ್ಮ, ಬಸಮ್ಮ ಇತರರಿದ್ದರು.