29 ದಿನದಲ್ಲಿ 7.29 ರೂ. ಇಳಿದ ಪೆಟ್ರೋಲ್ ಬೆಲೆ

ನವದೆಹಲಿ: ಕಳೆದ 29 ದಿನಗಳಿಂದ ದಿನಂಪ್ರತಿ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ ಭಾನುವಾರ ಲೀಟರ್​ಗೆ 20 ಪೈಸೆ ಕಡಿಮೆಯಾಗಿದೆ. ಆ ಮೂಲಕ ಒಟ್ಟಾರೆ -ಠಿ;7.29 ಇಳಿಕೆಯೊಂದಿಗೆ ಆ.16ರಂದು ಇದ್ದ ದರದ ಮಟ್ಟ ತಲುಪಿದೆ. ಡೀಸೆಲ್ ಬೆಲೆ ಕೂಡ ಲೀಟರ್​ಗೆ 18 ಪೈಸೆ ಕುಸಿತದೊಂದಿಗೆ ಒಟ್ಟಾರೆ 29 ದಿನಗಳಲ್ಲಿ -ಠಿ;3.89 ಇಳಿಕೆಯಾಗಿದೆ.

ಆ.15ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ -ಠಿ;77.14 ಮತ್ತು ಮುಂಬೈನಲ್ಲಿ -ಠಿ;84.58 ಇತ್ತು. ಬಳಿಕ ಆ.16ರಿಂದ ನಿರಂತರವಾಗಿ ಏರಿಕೆ ಕಂಡಿತ್ತು. ಅ.4ರ ವೇಳೆಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಏರಿಕೆ ದಾಖಲೆಯೊಂದಿಗೆ -ಠಿ;84 ಮತ್ತು ಮುಂಬೈನಲ್ಲಿ -ಠಿ;91.34 ತಲುಪಿತ್ತು. ಜನಾಕ್ರೋಶದ ಬಳಿಕ ಎಚ್ಚೆತ್ತ ಕೇಂದ್ರ ಇಂಧನದ ಮೇಲಿನ ಅಬಕಾರಿ ಸುಂಕವನ್ನು -ಠಿ;1.50 ಇಳಿಕೆ ಮಾಡಿದ್ದಲ್ಲದೆ ತಮ್ಮ ಪಾಲಿನ 1 ರೂ.ಕಮಿಷನ್ ಕಡಿಮೆ ಮಾಡಿ ಒಟ್ಟಾರೆ ಲೀಟರ್​ಗೆ -ಠಿ;2.50 ಕಡಿಮೆ ಮಾಡುವಂತೆ ತೈಲ ಕಂಪನಿಗಳಿಗೂ ಸೂಚಿಸಿತ್ತು. ಅಲ್ಲದೆ, ಇಂಧನದ ಮೇಲಿನ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿಮೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಕೆಲವು ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಿದ್ದವು.

ಇದರಿಂದಾಗಿ ಪೆಟ್ರೋಲ್ ದರ ದೆಹಲಿ ಮತ್ತು ಮುಂಬೈನಲ್ಲಿ ಲೀ.ಗೆ -ಠಿ;81.50 ಮತ್ತು -ಠಿ;86.97 ಮತ್ತು ಡೀಸೆಲ್ ದರಗಳು ಕ್ರಮವಾಗಿ -ಠಿ;72.95 ಮತ್ತು -ಠಿ;77.45ಕ್ಕೆ ಇಳಿಕೆಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದವು. ಅ.17ರ ವೇಳೆಗೆ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ -ಠಿ;82.83 ಮತ್ತು -ಠಿ;75.69 ಇತ್ತು. ಜಾಗತಿಕವಾಗಿ ತೈಲ ಬೆಲೆ ಇಳಿಕೆ, ರೂಪಾಯಿ ಸ್ಥಿರತೆಯಿಂದಾಗಿ ತೈಲ ಬೆಲೆ ಇಳಿಕೆ ಪರ್ವ ಮುಂದುವರಿದಿದೆ.