ಕೊಪ್ಪಳ: ಭಾರತಕ್ಕೆ ಜೈ ಹಿಂದ್ ಎಂಬ ಘೋಷವಾಕ್ಯ ನೀಡಿದ ನೇತಾಜಿ ಸುಭಾಷಚಂದ್ರ ಬೋಸ್ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು ಎಂದು ಹಿರಿಯ ವರದಿಗಾರ ಶರಣಪ್ಪ ಬಾಚಲಾಪುರ ಹೇಳಿದರು.
ನಗರದ ಸರಸ್ವತಿ ವಿದ್ಯಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಿಟಿಷರನ್ನು ಭಾರತದಿಂದ ಹೊಡೆದೊಡಿಸಿ ಭಾರತ ಮಾತೆಯನ್ನು ಬಂಧನದಿಂದ ಮುಕ್ತಗೊಳಿಸಬೇಕೆಂಬುದು ಬೋಸ್ ಕನಸಾಗಿತ್ತು. ಮಂದಗಾಮಿಗಳು, ತೀವ್ರಗಾಮಿಗಳು ಬಣದ ಹೋರಾಟ ಭಿನ್ನವಾಗಿದ್ದರೂ ಗುರಿ ಒಂದೇ ಆಗಿತ್ತು. ನೇತಾಜಿ ಜೀವನ ಸದಾ ನಮಗೆ ಸ್ಪೂರ್ತಿ. ಅವರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ಯಪಡಿಸಿದರು.
ವಿದ್ಯಾರ್ಥಿಗಳಾದ ಅರ್ಪಿತಾ, ಸಂಗೀತಾ, ಶಿವಪ್ರಸಾದ, ಪೃಥ್ವಿರಾಜ್ ನೇತಾಜಿ ಬಗ್ಗೆ ಮಾತನಾಡಿದರು. ಆಡಳಿತಾಧಿಕಾರಿ ಆರ್.ಎಚ್.ಅತ್ತನೂರು, ಮುಖ್ಯ ಶಿಕ್ಷಕಿ ರೇಣುಕಾ ಅತ್ತನೂರು, ಶಿಕ್ಷಕರಾದ ಅನೀಶ್, ಲಕ್ಷಿ$್ಮ, ತಮನ್ನಾ ಇತರರಿದ್ದರು.