More

    ಮಧುಮೇಹ, ರಕ್ತದೊತ್ತಡ ತಪಾಸಣೆ, ಜಾಗೃತಿ ಜಾಥಾ


    ವಿಜಯಪುರ: ಬಿಎಲ್‌ಡಿಇ ಸಂಸ್ಥೆ ಆಯುರ್ವೇದ ಮಹಾವಿದ್ಯಾಲಯದ ರೋಗ ನಿಧಾನ, ವಿಕೃತಿ ವಿಜ್ಞಾನ, ವಿಜಯಪುರ ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್‌ಸಿಡಿ ಘಟಕಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಧುಮೇಹ ಹಾಗೂ ರಕ್ತದೊತ್ತಡ ಉಚಿತ ತಪಾಸಣೆ ಶಿಬಿರ, ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

    ಮುರಾಣಕೇರಿ, ವಿದ್ಯಾನಗರ, ತೇಕಡೆಗಲ್ಲಿ, ಕಮಾನಗಲ್ಲಿ ಮುಂತಾದ ಕಡೆಗಳಲ್ಲಿ ಜಾಥ ಸಂಚರಿಸಿತು. ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ಡಾ. ಶಶಿಧರ ನಾಯಕ, ಡಾ. ಸತೀಶ ಪಾಟೀಲ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಮಧುಮೇಹ ತಡೆಗಟ್ಟುವ ಹಾಗೂ ಪೂರ್ವ ನಿಯಂತ್ರಣದ ಬಗ್ಗೆ ವೈದ್ಯರು, ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ನಂತರ 100ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಲಾಯಿತು.

    ಡಾ. ಸೀತಾ ಬಿರಾದಾರ, ಡಾ. ಸುಮಾ ಕಗ್ಗೋಡ, ಡಾ. ಪ್ರತಿಮಾ ಡಾ. ಪ್ರಿಯದರ್ಶಿನಿ, ಜಿಲ್ಲಾ ಆರೋಗ್ಯ ಎನ್.ಸಿ.ಡಿ. ಸೆಲ್ನ ಸಂಯೋಜಕರು, ಪ್ರಶಾಂತ ಕುಂಬಾರ, ಸಿದ್ರಾಮ ಖಾನಾಪುರ, ಶಾರದಾ ಲಿಂಗರೆಡ್ಡಿ ಮತ್ತು ಅನೀಲ ಆಳಗುಂಡಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts