ಸಂಘದ ಧ್ಯೇಯ, ಉದ್ದೇಶದಿಂದ ಭವಿಷ್ಯ ಉಜ್ವಲ: ಡಿ.ಎಸ್.ಶಂಕರಮೂರ್ತಿ

ಕಾರ್ಕಳ: ಸ್ವಾತಂತ್ಯ ಬಳಿಕ ಜನರ ಮಾನಸಿಕ, ಸಾಮಾಜಿಕ, ಜೀವನ ಪದ್ಧತಿ ಹಾಗೂ ಮುಂದಿನ ಸ್ಥಿತಿಗತಿ ಬಗ್ಗೆ ಚಿಂತಿಸಿ ಡಾ.ಹೆಡಗೇವಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಟ್ಟುಹಾಕಿದರು. ಸಂಘದ ಧ್ಯೇಯ, ಉದ್ದೇಶವನ್ನು ಬಿಂಬಿಸಲು ಜನಸಂಘವೆಂಬ ರಾಜಕೀಯ ಪಕ್ಷ ಹುಟ್ಟು ಹಾಕಿದವರಲ್ಲಿ ಪ್ರಮುಖರಾಗಿದ್ದರು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಸ್.ಶಂಕರಮೂರ್ತಿ ಹೇಳಿದರು.

ನಗರದ ಮಂಜುನಾಥ ಪೈ ಸಭಾಂಗಣದಲ್ಲಿ ಸಂಘ ಪರಿವಾರದ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್ ಹಾಗೂ ಎಂ.ಕೆ ವಿಜಯಕುಮಾರ್ ಅವರಿಗೆ ಧ್ಯೇಯ ವಂದನಾ ಕಾರ್ಯಕ್ರಮದಲ್ಲಿ ವಂದನಾ ನುಡಿ ಸಲ್ಲಿಸಿದರು.

ತುರ್ತು ಪರಿಸ್ಥಿತಿ ಸಂದರ್ಭ ಬೋಲೋ ಭಾರತ್ ಮಾತಾಕೀ ಜೈ ಎಂಬ ಘೋಷ ವಾಕ್ಯ ಹೇಳಿದ ಒಂದೇ ಕಾರಣಕ್ಕಾಗಿ ವರ್ಷಾನುಗಟ್ಟಲೆ ಜೈಲಲ್ಲೇ ಇರಬೇಕಾದ ಪರಿಸ್ಥಿತಿ ಎದುರಿಸಬೇಕಾಯಿತು. ಅದೇ ಕಾಲಘಟ್ಟದಲ್ಲಿ ಸಮಾನ ಮನಸ್ಕರು ಹುಟ್ಟುಹಾಕಿದ ಚಳುವಳಿ ರೂಪದಲ್ಲಿ ಜನತಾ ಪಕ್ಷ ಉದಯವಾಯಿತು. ಅಗ ಅದರೊಂದಿಗೆ ಜನಸಂಘ ವೀಲಿನಗೊಂಡಿತು. ಅಧಿಕಾರ ನಡೆಸುವಲ್ಲಿ ಅದು ಸಫಲಗೊಂಡು ರಾಜಕೀಯ ಪರಿಸ್ಥಿತಿಯ ನಡುವೆ ಭಾರತೀಯ ಜನತಾ ಪಾರ್ಟಿ ಉದಯಗೊಂಡಿತು ಎಂದರು.

ವಿಜಯಲಕ್ಷ್ಮಿ ಕಿಣಿ ವಂದೇಮಾತರಂ ಹಾಡಿದರು. ವಕೀಲ ಮಣಿರಾಜ್ ಶೆಟ್ಟಿ ಸ್ವಾಗತಿಸಿದರು. ಅಭಿನಂದನಾ ಗೀತೆ ಬಳಿಕ ಶಾಸಕ ವಿ.ಸುನೀಲ್‌ಕುಮಾರ್ ಸಾರಥ್ಯದಲ್ಲಿ ಬೋಳ ಪ್ರಭಾಕರ ಕಾಮತ್ ಹಾಗೂ ವಕೀಲ ಎಂ.ಕೆ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಖಿಲ ಭಾರತೀಯ ಕುಟುಂಬ ಪ್ರಭೋಧಿನಿಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ವಂದನಾ ನುಡಿ ಸಲ್ಲಿಸಿದರು. ಸಂಗೀತಾ ಕುಲಾಲ್ ನಿರೂಪಿಸಿದರು. ಉದ್ಯಮಿ ಅನಂತಕೃಷ್ಣ ಶೆಣೈ ವಂದನಾರ್ಪಣೆ ಸಲ್ಲಿಸಿದರು.

ಹಿಂದುತ್ವದ ನೆಲೆಗಟ್ಟು ಕರಾವಳಿ: ರಾಷ್ಟ್ರೀಯತೆ-ಪಕ್ಷ-ವೈಚಾರಿಕ ದೃಷ್ಟಿಯಿಂದ ಸಂಘ ಪರಿವಾರ ಹಾಗೂ ಬಿಜೆಪಿಯ ಜಿಲ್ಲೆ ಕರಾವಳಿ. ಇಲ್ಲಿನ ಜನರಲ್ಲಿ ಇರುವ ನಂಬಿಕೆ, ವಿಶ್ವಾಸ, ಸಿದ್ಧಾಂತಗಳು ದೇಶಕ್ಕೆ ಮಾದರಿ. ಬೋಳ ಪ್ರಭಾಕರ ಕಾಮತ್ ಹಾಗೂ ಎಂ.ಕೆ.ವಿಜಯಕುಮಾರ್ ಅವರಂತಹ ಅದೆಷ್ಟೋ ಮಹಾನ್ ವ್ಯಕ್ತಿಗಳು ದೇಶದ ಉದ್ದಗಲದಲ್ಲಿ ಇದ್ದು, ಪಕ್ಷದ ಬೆಳವಣಿಗೆಗೆ ಕಾರಣೀಕರ್ತರಾಗಿದ್ದಾರೆ ಎಂದು ಶಂಕರಮೂರ್ತಿ ಶ್ಲಾಘಿಸಿದರು.

ರಾಷ್ಟ್ರೀಯ ವಿಚಾರಧಾರೆ ಹಾಗೂ ಧ್ಯೇಯೋದ್ದೇಶ ಇಟ್ಟುಕೊಂಡು ಹಳ್ಳಿಹಳ್ಳಿಗಳಲ್ಲಿ ಕೆಲಸ ಮಾಡಿದವರು ಬೋಳ ಪ್ರಭಾಕರ ಕಾಮತ್ ಹಾಗೂ ಎಂ.ಕೆ.ವಿಜಯಕುಮಾರ್. ನಮ್ಮ ವಿಚಾರಧಾರೆ ಮತ್ತೆ ಮತ್ತೆ ಹೇಳುವ ಹಾಗೂ ಮುಂದಿನ ಜನಾಂಗಕ್ಕೆ ಗೊತ್ತು ಪಡಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
– ಸುನೀಲ್‌ಕುಮಾರ್, ಕಾರ್ಕಳ ಶಾಸಕ

Leave a Reply

Your email address will not be published. Required fields are marked *