ತಾಲೂಕು ಅಭಿವೃದ್ಧಿಗೆ ಧ್ರುವನಾರಾಯಣ ಕೊಡುಗೆ ಅಪಾರ

ಎಚ್.ಡಿ.ಕೋಟೆ:ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರು ಕ್ಷೇತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಿದ್ದರಿಂದ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದು ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಹೇಳಿದರು.

ತಾಲೂಕಿನ ಕಳಸೂರು ಗ್ರಾಮದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಭಾನುವಾರ ಆರ್.ಧ್ರುವನಾರಾಯಣ ಅಭಿಮಾನಿ ಬಳಗದ ವತಿಯಿಂದ ಧನ ಸಹಾಯ ಮಾಡಿ ಮಾತನಾಡಿದರು.

ಆರ್.ಧ್ರುವನಾರಾಯಣ ಅವರು ಎರಡು ಅವಧಿಯಲ್ಲಿ ಸಂಸದರಾಗಿ ಆಯ್ಕೆಯಾದ ನಂತರ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಶ್ರಮ ಹಾಕಿದರು.

ಹೆಗ್ಗಡದೇವನಕೋಟೆ ಪಟ್ಟಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಏಕಲವ್ಯ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಕಾರಣರಾದರು. ಸರಗೂರು ಹೋಬಳಿ ಕೇಂದ್ರ ಇದ್ದದ್ದನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಶ್ರಮಿಸಿದ ಕೀರ್ತಿ ಧೃವನಾರಾಯಣ ಅವರಿಗೆ ಸಲ್ಲುತ್ತದೆ ಎಂದರು.

ಕಳೆದ ಹತ್ತು ವರ್ಷಗಳ ಹಿಂದೆ ಧ್ರುವನಾರಾಯಣ ಅವರ ಹೆಸರಿನಲ್ಲಿ ಅಭಿಮಾನಿ ಬಳಗವನ್ನು ಕಟ್ಟಿ ಹಲವಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಿಲು ಕಾಲೇಜು ಶುಲ್ಕವನ್ನು ಕಟ್ಟಲು ಧನ ಸಹಾಯ, ಅನಾರೋಗ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಔಷಧ ವೆಚ್ಚಕ್ಕೆ ಧನ ಸಹಾಯ, ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ, ಅಂಗವಿಕಲರಿಗೆ ಉಚಿತ ಸಲಕರಣೆಗಳು, ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಟ್ಟು ಅವರ ಜೀವನ ನಿರ್ವಹಣೆಗೆ ಸಹಕಾರ ಸೇರಿದಂತೆ ಪ್ರತಿ ವರ್ಷ ಹತ್ತು ಹಲವು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ ಎಂದರು.

ಗ್ರಾಮದ ಅನಿಲ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬದವರು ಕಷ್ಟ ಪಡುತ್ತಿರುವ ವಿಚಾರ ಬಳಗದ ಸದಸ್ಯರ ಗಮನಕ್ಕೆ ಬಂದ ನಂತರ ಧನಸಹಾಯ ಹಾಗೂ ಆಹಾರ ಕಿಟ್ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.

ಬಳಗದ ಕಾರ್ಯದರ್ಶಿ ಮಂಜು ಮುಳ್ಳೂರು, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್, ಮುಖಂಡ ನಾಗರಾಜ್ ಉಯ್ಯಂಬಳ್ಳಿ, ಮಣಿ ನಂದಿನಾಥಪುರ, ಮಾರ್ಕಂಡೇಯ, ಕಲ್ಲಟ್ಟಿ ನಾಗೇಶ್, ಕಳಸೂರು ಬಸವರಾಜು, ಕಾಳಸ್ವಾಮಿ, ಗ್ರಾಮದ ಯಜಮಾನರು ಇದ್ದರು.

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…