ಭರ್ಜರಿ ‘ಧ್ರುವ’ ತಾರೆಗೆ ಬಾಲ್ಯದ ಗೆಳತಿ ‘ಪ್ರೇರಣಾ’ ಸಂಗಾತಿ?

ಬೆಂಗಳೂರು: ಬಹದ್ದೂರ್​ ಗಂಡು, ಸ್ಯಾಂಡಲ್​ವುಡ್​ ಪ್ರಿನ್ಸ್​ ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಜತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ.

ಹೌದು, ಡಿಸೆಂಬರ್​​​ 9ಕ್ಕೆ ಬನಶಂಕರಿಯ ಲಕ್ಷ್ಮೀವೆಂಕಟೇಶ್ವರ​​​ ದೇವಸ್ಥಾನದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಧ್ರುವ ಸರ್ಜಾಗೆ ಪ್ರೇರಣಾ ಪಕ್ಕದ ಮನೆ ಹುಡುಗಿಯಂತೆ. ದಶಕಗಳ ಕಾಲದ ಸ್ನೇಹಕ್ಕೆ ಈಗ ಪ್ರೇಮದ ಉಂಗುರ ಬೀಳುತ್ತಿದ್ದು, ಸದ್ಯ ಪ್ರೇರಣಾ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಧ್ರುವ ಸರ್ಜಾ ತಮ್ಮ ಹುಟ್ಟು ಹಬ್ಬದ ದಿನ ಮದುವೆ ಬಗ್ಗೆ ಮಾತನಾಡಿ, ಆದಷ್ಟು ಬೇಗ ಮದುವೆ ಸುದ್ದಿ ಹೇಳುವುದಾಗಿ ತಿಳಿಸಿದ್ದರು. ಧ್ರುವ ಅವರ ಮುಂದಿನ ಚಿತ್ರ ಪೊಗರು ಬಿಡುಗಡೆಯಾದ ನಂತರ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಧ್ರುವ ಆಗಲೀ, ಅವರ ಕುಟುಂಬವಾಗಲೀ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. (ದಿಗ್ವಿಜಯ ನ್ಯೂಸ್)