ಮೊದಲ ಏಕದಿನ ಪಂದ್ಯದಲ್ಲಿ ದಾಖಲೆ ಬರೆದ ಮಹೇಂದ್ರ ಸಿಂಗ್​ ಧೋನಿ

ಸಿಡ್ನಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ 10 ಸಾವಿರ ರನ್​ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ 9,999 ರನ್​ ಗಳಿಸಿದ್ದ ಧೋನಿ ಒಂದು ರನ್​ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಗಡಿ ದಾಟಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಐದನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. 333ನೇ ಪಂದ್ಯವನ್ನಾಡಿದ ಧೋನಿ 279 ಇನಿಂಗ್ಸ್​ಗಳಲ್ಲಿ 10,050 ರನ್​ ಗಳಿಸಿದ್ದಾರೆ.

ಭಾರತದ ಪರ ಸಚಿನ್​ ತೆಂಡುಲ್ಕರ್​ (18,426), ಸೌರವ್​ ಗಂಗೂಲಿ (11,221), ರಾಹುಲ್​ ದ್ರಾವಿಡ್​ (10,768), ವಿರಾಟ್​ ಕೊಹ್ಲಿ (10,235) 10 ಸಾವಿರಕ್ಕೂ ಹೆಚ್ಚು ರನ್​ ಗಳಿಸಿದ್ದಾರೆ.
ಒಟ್ಟಾರೆಯಾಗಿ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್​ ಗಳಿಸಿದ 13ನೇ ಆಟಗಾರ ಎಂಬ ಗೌರವಕ್ಕೆ ಧೋನಿ ಪಾತ್ರರಾಗಿದ್ದಾರೆ. (ಏಜೆನ್ಸೀಸ್​)