VIDEO |3 ಎಸೆತಗಳಲ್ಲಿ 2 ಸ್ಟಂಪ್​ ಮಾಡಲು ಧೋನಿ ತೆಗೆದುಕೊಂಡಿದ್ದು ಮಾತ್ರ ಕೆಲವೇ ಸೆಕೆಂಡ್ಸ್​​​​​​

ಚೆನ್ನೈ: ಅತಿ ಕಡಿಮೆ ಸಮಯದಲ್ಲಿ ಸ್ಟಂಪ್​​​​​​​​ ಮಾಡುವ ವಿಶ್ವದ ಅಗ್ರ ವಿಕೆಟ್​​ ಕೀಪರ್​ ಮಹೇಂದ್ರ ಸಿಂಗ್​​ ಧೋನಿ ಅವರು 2019ನೇ ಇಂಡಿಯನ್​​ ಪ್ರಿಮೀಯರ್​​​​​​​​ ಲೀಗ್​​ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.

ಇಲ್ಲಿನ ಚೆಪಕ್​​ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್​​​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಎಲ್ಲಗ ಗಮನ ಸೆಳೆದಿದ್ದಾರೆ. ಟಾಸ್​​​ ಸೋತು ಬ್ಯಾಟಿಂಗ್​​ ಮಾಡಿದ ಚೆನ್ನೈ ಸೂಪರ್​​​​​​​ ಕಿಂಗ್ಸ್​​​​​​ 179 ರನ್​​ಗಳನ್ನು ದಾಖಲಿಸಿ ಡೆಲ್ಲಿಗೆ ಸ್ಪರ್ಧಾತ್ಮಕ ಗುರಿ ನೀಡಿತು.

ಸಿಎಸ್​​ಕೆ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಯಿತು. ಧೋನಿ ಪಡೆಯ ಅದ್ಭುತ ಬೌಲಿಂಗ್​​ ದಾಳಿಗೆ ಸರ್ವಪತನ ಕಂಡು 80 ರನ್​​ಗಳಿಂದ ಹೀನಾಯವಾಗಿ ಸೋತಿತು. ಡೆಲ್ಲಿಯನ್ನು ಸೋಲಿಸುವಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರವೀಂದ್ರ ಜಡೇಜಾ ಅವರ ಬೌಲಿಂಗ್​​ನಲ್ಲಿ ಕ್ರೀಸ್​​ನಲ್ಲಿದ್ದ ಕ್ರಿಸ್​​ ಮಾರಿಸ್​​​​​​ ಅವರ ವಿಕೆಟ್​​ನ್ನು 0.12 ಸೆಕೆಂಡುಗಳಲ್ಲಿ ಸ್ಟಂಪ್​​​​​​ ಮಾಡಿ ಔಟ್​​ ಮಾಡಿದರು. ಬಳಿಕ ಪ್ರಮುಖ ನಾಯಕ ಶ್ರೇಯಸ್​​ ಅಯ್ಯರ್​​ ಅವರನ್ನು 0.16 ಸೆಕೆಂಡುಗಳಲ್ಲಿ ಸ್ಟಂಪ್​​​​ ಮಾಡುವ ಮೂಲಕ ವಿಕೆಟ್​​ ಉರುಳಿಸಿದ್ದಾರೆ. ಇದರೊಂದಿಗೆ ಡೆಲ್ಲಿ 99 ರನ್​​ಗೆ ಎಲ್ಲ ವಿಕೆಟ್​​ ಕಳೆದುಕೊಂಡು ಸೋಲಿಗೆ ಶರಣಾಯಿತು. ಸಿಎಸ್​​ಕೆ ಈ ಗೆಲುವಿನ ಮೂಲಕ 18 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಡೆಲ್ಲಿ 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. (ಏಜನ್ಸೀಸ್​)

ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ  https://www.iplt20.com/video/184469/do-not-mess-with-msd-s-gloves