ರಾಹುಲ್​ ದ್ರಾವಿಡ್​ರನ್ನು ಓವರ್​ಟೇಕ್​ ಮಾಡಿ ದಾಖಲೆ ಬರೆದ ಮಹೇಂದ್ರ ಸಿಂಗ್​ ಧೋನಿ

ದೆಹಲಿ: ಭಾರತದ ಪರ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯ ಆಡಿದ ಆಟಗಾರರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್​ ಧೋನಿ ರಾಹುಲ್​ ದ್ರಾವಿಡ್ ಅವರನ್ನು ಓವರ್​ಟೇಕ್​ ಮಾಡಿ ಎರಡನೇ ಸ್ಥಾನಕ್ಕೇರಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಆಗಿರುವ ರಾಹುಲ್​ ದ್ರಾವಿಡ್​ ಅವರು 504 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಹೀಗಾಗಿ ಅವರು, ಅತಿ ಹೆಚ್ಚು ಪಂದ್ಯವಾಡಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ, ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಆಡುವ ಮೂಲಕ ಮಹೇಂದ್ರ ಸಿಂಗ್​ ಧೋನಿ ಅವರು ದ್ರಾವಿಡ್​​ ದಾಖಲೆ ಮುರಿದಿದರು.

ಸದ್ಯ ಮಹೇಂದ್ರ ಸಿಂಗ್​ ಧೋನಿ ಅವರು 505 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಇನ್ನು ಪ್ರಥಮ ಸ್ಥಾನದಲ್ಲಿರುವವರು ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​. ಭಾರತೀಯ ಕ್ರಿಕೆಟ್​ ರಂಗದ ದಂತಕತೆ ಸಚಿನ್​ ತೆಂಡೂಲ್ಕರ್​ ಅವರು 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ಹೆಚ್ಚು ಪಂದ್ಯವಾಡಿದವರ ಪಟ್ಟಿಯಲ್ಲಿ ಅಗ್ರಮಾನ್ಯರೆನಿಸಿಕೊಂಡಿದ್ದಾರೆ.