ಸಿನಿಮಾ

ಪರಿಚಯಸ್ಥರಿಂದಲೇ ಕೃತ್ಯ ಅಸಹನೀಯ

ದೇವನಹಳ್ಳಿ: ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು ಮನೋ ವಿಕೃತಿಗಳು. ಅಷ್ಟೇ ಅಲ್ಲದೆ, ಬಹುತೇಕ ಮಗುವಿನ ಪರಿಚಯಸ್ಥರಿಂದಲೇ ಇಂಥ ಕೃತ್ಯಗಳು ನಡೆಯುತ್ತವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಅಧಿಕಾರಿ ರವಿರಾಜ್ ನಾಯಕ್ ಬೇಸರ ವ್ಯಕ್ತಪಡಿಸಿದರು.
ದೇವನಹಳ್ಳಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೌರ್ಜನ್ಯ ತಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೌರ್ಜನ್ಯ, ಅತ್ಯಾಚಾರ ಅಪಹರಣಗಳಂಥಹ ಸಂಗತಿಗಳು ಪ್ರತಿ ಕ್ಷಣ ನಡೆಯುತ್ತಿವೆ. ಇದು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಸಂಗತಿ. ದೌರ್ಜನ್ಯಗಳು ಕೇವಲ ದೇಹ ಮಾತ್ರವಲ್ಲ, ಮಾನಸಿಕ ಆಘಾತವನ್ನೂ ಉಂಟುಮಾಡುತ್ತವೆ.
ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ಹೆಚ್ಚುವುದರೊಂದಿಗೆ ಆ ಭಾಗದ ಮಣ್ಣು ಚಿನ್ನವಾಗಿ ಪರಿವರ್ತನೆಯಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ, ಪತ್ರಕರ್ತ ಶಾಂತಮೂರ್ತಿ ಮಾತನಾಡಿ, ಆಧುನಿಕತೆಯ ಹೆಸರಿನಲ್ಲಿ ಮನುಷ್ಯನ ಬೇಡಿಕೆ ಪೂರೈಸಲು ಪರಿಸರ ವಿನಾಶದಂಚಿಗೆ ತಲುಪಿದೆ. ಪರಿಸರ ನಾಶದಿಂದ ದಿನಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಮನುಷ್ಯನ ಸ್ವಾರ್ಥ ಬದುಕಿಗಾಗಿ ಅಕ್ರಮ ಮರುಳುಗಾರಿಕೆ, ಗಣಿಕಾರಿಕೆಯಿಂದ ನೀರಿನ ಮೂಲಗಳು ಬತ್ತಿ ಹೋಗುತ್ತಿವೆೆ ಎಂದು ಕಳವಳ ವ್ಯಕ್ತಪಡಿಸಿದರು. ಎಸ್‌ಕೆಡಿಆರ್‌ಡಿಪಿ ಪದಾಧಿಕಾರಿಗಳು ಇದ್ದರು.

Latest Posts

ಲೈಫ್‌ಸ್ಟೈಲ್