ಢವಳೇಶ್ವರ ಗ್ರಾಮ ವ್ಯಸನಮುಕ್ತ ಘೊಷಣೆ

ಮಹಾಲಿಂಗಪುರ: ಸಮೀಪದ ಢವಳೇಶ್ವರ ಗ್ರಾಮವನ್ನು ನ.1 ರಿಂದ ತಂಬಾಕುಮುಕ್ತ ಹಾಗೂ ವ್ಯಸನಮುಕ್ತ ಗ್ರಾಮವನ್ನಾಗಿ ಢವಳೇಶ್ವರ ಗ್ರಾಪಂ ಘೊಷಿಸಿದ್ದು, ಗ್ರಾಮದಲ್ಲಿನ ಎಲ್ಲ ಪಾನ್​ಬೀಡಾ, ಕಿರಾಣಿ ಅಂಗಡಿಗಳಿಗೆ ತೆರಳಿ ತಂಬಾಕು ಹಾಗೂ ಸಾರಾಯಿ ಮಾರದಂತೆ ತಿಳಿವಳಿಕೆ ನೀಡಲಾಯಿತು.

ವ್ಯಾಪಾರಸ್ಥರು ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಪದಾರ್ಥಗಳನ್ನು ಮಾರುವುದು ಕಂಡುಬಂದರೆ ಅಂಥವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಯಿತು. ಢವಳೇಶ್ವರ ಗ್ರಾಪಂ ಅಧ್ಯಕ್ಷ ಬನಪ್ಪಗೌಡ ಪಾಟೀಲ, ಉಪಾಧ್ಯಕ್ಷೆ ಶಾಂತಾ ಕಡಬಲ್ಲವರ, ಸದಸ್ಯರಾದ ಆರ್.ಟಿ. ಬ್ಯಾಳಿ, ಶಿದ್ರಾಮ ಯರಗಟ್ಟಿ, ದಯಾನಂದ ಪಟ್ಟೇದ, ಬಂದು ಮುಧೋಳ, ಚನ್ನಪ್ಪ ಶಿವಾಪುರ, ಢವಳೇಶ್ವರ ಪಿಕೆಪಿಎಸ್ ಅಧ್ಯಕ್ಷ ಎಸ್.ಎಂ. ಪಾಟೀಲ, ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್. ಪಟ್ಟಣಶೆಟ್ಟಿ, ತಾಪಂ ಸದಸ್ಯ ಶ್ರೀಶೈಲ ಪಟ್ಟಣಶೆಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಶೋಕ ಹವಾಲ್ದಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮಾರುತಿ ಹವಾಲ್ದಾರ, ಪೊಲೀಸ್ ಪೇದೆ ವಿ.ಬಿ ಚೊಂಗನವರ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.