ವಿಜಯವಾಣಿ ಸುದ್ದಿಜಾಲ ಧಾರವಾಡ
ಹೆಗಡೆ ಗ್ರುಪ್, ವಿಜನ್ ಪ್ರತಿಷ್ಠಾನ ಹಾಗೂ ನ್ಯೂಸ್ ಟೈಮ್ ವತಿಯಿಂದ ಫೆ. 21ರಿಂದ 23ರವರೆಗೆ ನಗರದಲ್ಲಿ ಧಾರವಾಡ ಹಬ್ಬ ಆಯೋಜಿಸಲಾಗಿದೆ ಎಂದು ಹೆಗಡೆ ಗ್ರುಪ್ ಮುಖ್ಯಸ್ಥ ಗಿರೀಶ ಹೆಗಡೆ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾಲೇಜು ಮೈದಾನದಲ್ಲಿ ಫೆ. 21ರಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಲಿದ್ದಾರೆ. ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಗೀತೆ ರಚನೆಕಾರ ವಿ.ನಾಗೇಂದ್ರ ಪ್ರಸಾದ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಇತರರು ಪಾಲ್ಗೊಳ್ಳುವರು. ನವೀನ ಸಜ್ಜು ಗಾಯನ ಪ್ರಸ್ತುತಪಡಿಸುವರು ಎಂದರು.
ಫೆ. 22ರಂದು ಸಂಜೆ 6 ಗಂಟೆಗೆ ವೈಶಾಲಿ ಕುಲಕರ್ಣಿಗೆ ಯುವ ನಾಯಕಿ ಹಾಗೂ ನವೀನ ಕೋನರಡ್ಡಿಗೆ ಯುವ ನಾಯಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕಿ ಶಿವಲೀಲಾ ಕುಲಕರ್ಣಿ, ವಸಂತ ಹೊರಟ್ಟಿ, ಶಾಕೀರ ಸನದಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಇತರರು ಪಾಲ್ಗೊಳ್ಳುವರು. ನಂತರ ಕಾಮಿಡಿ ಕಿಲಾಡಿ ಕಲಾವಿದರಾದ ಅಪ್ಪಣ್ಣ ರಾಮದುರ್ಗ, ಸೂರಜ್ ಮಂಗಳೂರು, ಸೂರ್ಯಾ ಕುಂದಾಪುರ ಹಾಗೂ ದೀಪಿಕಾ ಮಂಡ್ಯ ಹಾಸ್ಯ ಕಾರ್ಯಕ್ರಮ ನೀಡುವರು. ವಿಶ್ವನಾಥ ಹಾವೇರಿ ಸಂಗೀತ ಪ್ರಸ್ತುತಪಡಿಸುವರು ಎಂದರು.
ಫೆ. 23ರಂದು ಸಂಜೆ 6 ಗಂಟೆಗೆ ಸಮಾರೋಪ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ಅಮೃತ ದೇಸಾಯಿ, ಈರೇಶ ಅಂಚಟಗೇರಿ, ದೀಪಕ ಚಿಂಚೋರೆ ಭಾಗವಹಿಸುವರು. ಉದ್ಯಮಿ ಮೊಯಿನ್ ಶೇಖ್ ಅವರಿಗೆ ಧಾರವಾಡದ ಹೆಮ್ಮೆಯ ನಾಗರಿಕ ಪ್ರಶಸಿ ಪ್ರದಾನ ಮಾಡಲಾಗುವುದು ಎಂದರು.
ನಂತರ ಹಾಸ್ಯ ಕಲಾವಿದ ಪ್ರಾಣೇಶ, ನರಸಿಂಹ ಜೋಶಿ ಮಹಾಮನೆ ತಂಡದಿಂದ ಹಾಸ್ಯ ಕಾರ್ಯಕ್ರಮ, ಗಾಯಕಿ ಸಿಂಚನ್ ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಸತೀಶ ಹೆಗಡೆ, ಪ್ರಶಾಂತ ಗೊರವರ, ಮುಸ್ತಾ ಕುನ್ನಿಬಾವಿ, ಇತರರು ಇದ್ದರು.
ಧಾರವಾಡ ಹಬ್ಬ ನಾಳೆಯಿಂದ

You Might Also Like
ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips
ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…
ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips
ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…
ವೇಜ್, ನಾನ್ವೆಜ್ ಖಾದ್ಯ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!
Tomato : ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು ಕರಿ, ಗ್ರೇವಿ, ಸೂಪ್…