84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಪರಿಶೀಲಿಸಿದ ಸಚಿವ ಆರ್‌.ವಿ ದೇಶಪಾಂಡೆ

ಧಾರವಾಡ: 84ನೇ ಸಾಹಿತ್ಯ ಸಮ್ಮೇಳದನ ಸಿದ್ಧತೆ ಕುರಿತು ಸಚಿವ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಸಚಿವ ಆರ್.ವಿ. ದೇಶಪಾಂಡೆ ಪರಿಶೀಲಿಸಿದರು.

ಧಾರವಾಡ ಕೃಷಿ ವಿವಿ ಆವರಣದಲ್ಲಿ ಜ.4ರಿಂದ ಸಮ್ಮೇಳನ ನಡೆಯಲಿದ್ದು, ಪರಿಶೀಲನೆ ಬಳಿಕ ಮಾತನಾಡಿದ ಅವರು, ಸಮ್ಮೇಳನಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ಈಗಾಗಲೇ 8 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿ ಹಣ ಖರ್ಚಾದರೆ ಬಿಡುಗಡೆ ಮಾಡುವುದು ಸರ್ಕಾರದ ನೈತಿಕ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಆ ಬಗ್ಗೆ ಆತಂಕ ಬೇಡ ಎಂದಿದ್ದಾರೆ.

ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಮಾರ್ಗ ಪರಿಶೀಲನೆ ಮಾಡಿದ್ದೇನೆ. 4 ರಂದು ಬೆಳಗ್ಗೆ 8. 30ಕ್ಕೆ ಝೀರೋ ಟ್ರಾಪಿಕ್‌ನಲ್ಲಿ ಮೆರವಣಿಗೆ ಹೊರಡಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಧೂಳು ಮುಕ್ತ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಸಾಹಿತ್ಯ ಸಮ್ಮೇಳನಗಳಿಂದ ಜನಜಾಗೃತಿ ಮೂಡಿಸಲು ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಿರ್ಣಯ ಆಗಬೇಕಾಗಿದೆ. ನಿರ್ಣಯ ಅನುಷ್ಠಾನದ ಜವಾಬ್ದಾರಿ ಕೇವಲ ಪರಿಷತ್ತಿನದ್ದಲ್ಲ. ಸರ್ಕಾರದ ಜವಾಬ್ದಾರಿಯೂ ಹೌದು. ಅದಕ್ಕಾಗಿ ಸರ್ಕಾರ ಮುತುವರ್ಜಿ ವಹಿಸಲಿದೆ ಎಂದು ಹೇಳಿದರು.

ಉಮೇಶ್‌ ಕತ್ತಿ ಒಳ್ಳೆ ಮನುಷ್ಯ, ತಲೆಗೆ ಬಂದಿದ್ದನ್ನು ಹೇಳುತ್ತಾರೆ

ಉಮೇಶ ಕತ್ತಿ ನನ್ನ ಗರಡಿ ಮನೆಯಲ್ಲಿ ಬೆಳೆದವರು. ನಮ್ಮ ಗರಡಿ ಬಿಟ್ಟು ಹೋಗಿದ್ದಾರೆ. ಒಳ್ಳೆಯ ಮನುಷ್ಯರೇ ಆಗಿದ್ದಾರೆ. ಆದರೆ, ತಲೆಯಲ್ಲಿ ಏನು ಬರುತ್ತದೆಯೇ ಅದನ್ನೇ ಹೇಳುತ್ತಾರೆ. ಭವಿಷ್ಯವಾಣಿ ಹೇಳುತ್ತಾ ಹೋದರೆ ಬೇರೆನೇ ಆಗುತ್ತಿತ್ತು. ಅವರು ಕನಸು ಕಾಣುತ್ತಿದ್ದಾರೆ, ಕಾಣಲಿ. ಸರ್ಕಾರ ಭದ್ರವಾಗಿದ್ದು, ನಾಡಿನ ಜನರ ಆಶೀರ್ವಾದದಿಂದ 5 ವರ್ಷ ಪೂರೈಸುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್)