22.5 C
Bengaluru
Sunday, January 19, 2020

ಭಕ್ತರಿಗೆ ಉಪಾಹಾರದ ಆತಿಥ್ಯ

Latest News

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

< ಧರ್ಮಸ್ಥಳ ಮಹಾಮಸ್ತಕಾಭಿಷೇಕ ಅನ್ನದಾನ ವಿಶೇಷ * 100ಕ್ಕೂ ಅಧಿಕ ಬಾಣಸಿಗರಿಂದ ತಯಾರಿ>

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಪ್ರಯುಕ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಇವರಿಗೆ ಕ್ಷೇತ್ರದ ಅನ್ನಛತ್ರದ ಹೊರತಾಗಿಯೂಂ ಹಿಂಭಾಗದ ವಿಶಾಲ ಮೈದಾನದಲ್ಲಿ ಪ್ರತ್ಯೇಕ ಪಾಕಶಾಲೆ ಹಾಗೂ ಅನ್ನಛತ್ರ ನಿರ್ಮಿಸಲಾಗಿದೆ. ಬೆಳಗ್ಗೆ ಹಾಗೂ ರಾತ್ರಿ ಫಲಾಹಾರ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಫೆ.9ರಿಂದಲೇ ಪ್ರಾರಂಭಗೊಂಡಿದೆ. ಸಿದ್ಧತೆಗಾಗಿ 9 ಬೃಹತ್ ಒಲೆಗಳು, ಉಗಿ ವ್ಯವಸ್ಥೆ, ಗ್ಯಾಸ್ ಒಲೆ, ದಾಸ್ತಾನು ಕೊಠಡಿ ನಿರ್ಮಿಸಲಾಗಿದೆ.

ರತ್ನರಾಜ ತೆಳ್ಳಾರ್, ರತ್ನರಾಜ ವಗ್ಗ, ಸುನೀಲ್ ಕುಮಾರ್ ಅಳದಂಗಡಿ, ಸಂತೋಷ ಕುಮಾರ್ ಜೈನ್ ಬೆಳ್ತಂಗಡಿ, ಪಾರ್ಶ್ವನಾಥ ಜೈನ್ ಅಳಿಯೂರು ಮತ್ತು ಅಮಿತ್ ಕುಮಾರ್ ಹೊಸ್ಮಾರು ಅಡುಗೆ ತಯಾರಿ ಜವಾಬ್ದಾರಿಯಲ್ಲಿದ್ದು, 100 ಸಹಾಯಕರು ನೆರವಾಗುತ್ತಿದ್ದಾರೆ. ಬಫೆ ಮತ್ತು ಟೇಬಲ್‌ಗಳಲ್ಲಿ ಪ್ರತ್ಯೇಕ ಪೆಂಡಾಲ್‌ಗಳಲ್ಲಿ ಊಟೋಪಚಾರ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಫೆ.9, 10ರಂದು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ತಲಾ 5000 ಮಂದಿಗೆ ಊಟ ಉಪಾಹಾರ ವ್ಯವಸ್ಥೆಯಾಗಿದ್ದರೆ, 13ರಂದು 8ರಿಂದ 10 ಸಾವಿರ ಮಂದಿ ಹಾಗೂ 16ರಿಂದ 18ರ ವರೆಗೆ ತಲಾ 10ರಿಂದ 15000 ಮಂದಿಗೆ ಊಟೋಪಹಾರದ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿನಿತ್ಯ ಕ್ಷೇತ್ರದ 50 ಸ್ವಯಂಸೇವಕರ ಜತೆಗೆ ಹೊರಗಿನಿಂದ ಬರುವ ಸಂಘ ಸಂಸ್ಥೆಗಳ 100-150 ಸ್ವಯಂ ಸೇವಕರು ಬಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಧರ್ಮಸ್ಥಳದ ವ್ಯಾಪಾರಸ್ಥರೂ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಸ್ತು, ಸ್ವಚ್ಛತೆಗೆ ವಿಶೇಷ ಗಮನ: ಅನ್ನಛತ್ರ ಹಾಗೂ ಉಗ್ರಾಣದ ಉಸ್ತುವಾರಿಯಲ್ಲಿ ಸಂಚಾಲಕರಾಗಿ ಮಹಾವೀರ ಜೈನ್ ನಲ್ಲೂರು ಮತ್ತು ಪ್ರೇಮ ಕುಮಾರ್ ಹೊಸ್ಮಾರು ಹಾಗೂ ಸಂಯೋಜಕರಾಗಿ ಭರತ್‌ರಾಜ್ ಜೈನ್, ಧನಕೀರ್ತಿ ಅರಿಗ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 7ರಿಂದ 9ರವರೆಗೆ ಹಾಗೂ ಸಾಯಂಕಾಲ 5ರಿಂದ 7ರವರೆಗೆ ಫಲಾಹಾರ ಹಾಗೂ ಮಧ್ಯಾಹ್ನ 12ರಿಂದ 2.30ರವರೆಗೆ ಊಟದ ವ್ಯವಸ್ಥೆಗೆ ಸಮಯ ನಿಗದಿಪಡಿಸಲಾಗಿದೆ. ಶಿಸ್ತು ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾಥಮಿಕ ಶಾಲೆಯಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮ ಕಲಾವಿದರಿಗೆ ಮಹೋತ್ಸವ ಸಭಾಭವನದಲ್ಲಿ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಮೃಷ್ಟಾನ್ನ ಭೋಜನ: ಊಟ ಉಪಾಹಾರಗಳಿಗೆ ಎಂದಿನ ಐಟಂಗಳೊಂದಿಗೆ ಥವಾ ಮಿಠಾಯಿ, ಮ್ಯಾಂಗೋ ಬರ್ಫಿ, ಡ್ರೈ ಜಾಮೂನು, ಜೋಧ್‌ಪುರಿ ಕೇಕ್, ಹೋಳಿಗೆ, ಕಾಯಿಹೋಳಿಗೆ, ಬೂಂದಿ-ರವಾ ಲಾಡು, ನೇಂದ್ರ ಹಲ್ವ, ಚಾಕಲೇಟ್ ಬರ್ಫಿ, ಮೋಹನ ಲಾಡು, ಪಪ್ಪಾಯಿ ಹಲ್ವ, ಕೂರ್ಮ ಲಡ್ಡು, ಜಹಾಂಗೀರ್, ಎಳ್ಳು ಹೋಳಿಗೆ, ಪಂಚರತ್ನ ಖಡಿ, ಬೇಸನ್ ಲಾಡು ಅಲ್ಲದೆ ಉತ್ತರ ಭಾರತದ ತಿಂಡಿಗಳು, ವೆಜ್ ಹರಿಯಾಲಿ, ವೆಜ್ ಕಡಾಯಿ, ಕೋಫ್ತಕರಿ, ಮೇತಿ ಪರೋಟ, ಚಿಲ್ಲಿಮಿಲ್ಲಿ, ವೆಜ್ ಮಕನ್‌ವಾಲ, ವೆಜ್ ಹೈದ್ರಾಬಾದಿ, ರಾಜ್‌ಮಾ, ದೋಸೆ, ಸೆಟ್ ಮಸಾಲ, ರಾಗಿ ಹಲ್ವ ಮುಂತಾದವನ್ನು ಬೇರೆ ಬೇರೆ ದಿನ ಊಣಬಡಿಸಲಾಗುತ್ತದೆ. ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರಿಗೆ ಹಸಿವು ನೀಗಿಸಲು ಬಗೆಬಗೆ ತಿಂಡಿ ತಿನಿಸು, ಮೃಷ್ಟಾನ್ನ ಭೋಜನ ಒದಗಿಸಲಾಗುತ್ತದೆ.
ವ್ರತದಿಂದ ಮಾತ್ರ ಪುಣ್ಯ ಫಲ ಪ್ರಾಪ್ತಿ: ಮಹಾಮಸ್ತಕಾಭಿಷೇಕ ಪ್ರಯುಕ್ತ ಸಿಂಹನಗದ್ದೆ ಬಸ್ತಿ ಮಠದ ಶ್ರೀ ಲಕ್ಷ್ಮ್ಮೀಸೇನಾ ಭಟ್ಟಾರಕ ಮಹಾಸ್ವಾಮೀಜಿ ಮಂಗಲ ಪ್ರವಚನ ನೀಡಿದರು. ಜೈನ ಕುಲದಲ್ಲಿ ಜನ್ಮ ಪಡೆದರೆ ಜೈನರಾಗಲು ಸಾಧ್ಯವಿಲ್ಲ. ಜಿನೇಂದ್ರ ಭಗವಂತ ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ಮಾತ್ರ ಜೈನರಾಗಲು ಸಾಧ್ಯ. ಎಂಟು ವರ್ಷದ ಅನಂತರ ಪ್ರತಿಯೊಬ್ಬರೂ ವ್ರತ ಸ್ವೀಕಾರಕ್ಕೆ ಅರ್ಹರು. ವ್ರತ ಸ್ವೀಕಾರ ಮಾಡದೆ ಬಸದಿ ಗರ್ಭಗುಡಿ ಪ್ರವೇಶಿಸಿದರೆ, ಜೈನೇಶ್ವರಿ ದೀಕ್ಷೆ ಇಲ್ಲದೆ ವಿವಾಹವಾದರೆ ಪಿಂಡ ಶುದ್ಧಿ ಕಳೆದುಕೊಳ್ಳಬೇಕಾದೀತು. ಪುಣ್ಯ ಫಲ ಪ್ರಾಪ್ತವಾಗಬೇಕಾದರೆ ವ್ರತದಿಂದ ಮಾತ್ರ ಸಾಧ್ಯ. ಉಪವಾಸ ಮಾಡುವುದೇ ಜೈನರ ಹಬ್ಬ. ಕಠಿಣ ವ್ರತ ಮಾಡಿದಷ್ಟು ಬೇಗ ಉತ್ತಮ ಫಲ ಪ್ರಾಪ್ತವಾಗುತ್ತದೆ ಎಂದು ಹೇಳಿದರು.

ಅಹಿಂಸಾ, ಸತ್ಯ ಮಾರ್ಗದಲ್ಲಿ ನಡೆಯಬೇಕು ಎಂದು ಎಚ್ಚರಿಕೆ ನೀಡುವುದೇ ವ್ರತ ಸ್ವೀಕಾರದ ಉದ್ದೇಶ. ಮದ್ಯ, ಮಾಂಸ, ಮಧು ಸೇವನೆ ನಿಷಿದ್ಧ. ಜತೆಗೆ ಹಾಲು ಬರುವ ಮರದ ತೊಗಟೆಯ ಹಣ್ಣುಗಳ ಸೇವನೆ(ಅತ್ತಿ, ಆಳ, ಗೋಳಿ, ಅಶ್ವಥ ಇತ್ಯಾದಿ) ಮಾಡುವಂತಿಲ್ಲ. ಮಕ್ಕಳು ತಪ್ಪಿದರೆ ಹೆತ್ತವರು ಬುದ್ಧಿ ಹೇಳಬೇಕು ಎಂದು ಶ್ರೀ ಕ್ಷೇತ್ರ ಹೊಂಬುಜ ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮಂಗಲ ಪ್ರವಚನದಲ್ಲಿ ಉಪದೇಶ ನೀಡಿದರು.

ಜೈನರಲ್ಲಿ ವ್ರತೋಪದೇಶ-ಉಪನಯದಂಥ ಆಚರಣೆ ಕಡಿಮೆಯಾಗುತ್ತಿದೆ. ಸೋಸಿದ ನೀರಿನ ಬದಲು ಫಿಲ್ಟರ್ ನೀರು ಬಂದಿದೆ. ರಾತ್ರಿಗೆ ವಿದ್ಯುದ್ದೀಪ ಬಂದಿದೆ. ಊಟಕ್ಕೆ ಟೇಬಲ್ ಸಿಸ್ಟಂ ಬಂದಿದೆ. ಮೊಬೈಲ್ ಬಂದ ಬಳಿಕ ಅದಕ್ಕೆ ಮೊದಲ ಸ್ಥಾನ, ದೇವರಿಗೆ ಅನಂತರದ ಸ್ಥಾನ. ಆದರೆ 60 ವರ್ಷದವರೆಗೆ ದೇವರು ನಮ್ಮನ್ನು ಪರೀಕ್ಷಿಸುತ್ತಾರೆ.
ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
ಕಾರ್ಕಳ ದಾನ ಶಾಲೆಯ ಧ್ಯಾನಯೋಗಿ

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...