PHOTOS| ಧರ್ಮಸ್ಥಳ ಮಹಾಮಸ್ತಕಾಭಿಷೇಕದ ಕಡೇ ದಿನದ ದೃಶ್ಯ ವೈಭವ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಮಹಾಮಜ್ಜನದ ವೈಭವಕ್ಕೆ ಇಂದು ತೆರೆ ಬೀಳಲಿದೆ. ಕ್ಷೇತ್ರದ ಪರವಾಗಿ ಅಂತಿಮ ಮಜ್ಜನ ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಆರಂಭವಾಗಿದ್ದು, ದೇಶದ 16 ನದಿಗಳಿಂದ ಸಂಗ್ರಹಿಸಿದ ನೀರಿನ ಕಲಶಗಳಿಂದ ಬಾಹುಬಲಿಗೆ ಅಭಿಷೇಕ ಸಲ್ಲಿಸಲಾಗುತ್ತಿದೆ. ಹಾಗೇ ಹಾಲು, ಅಕ್ಕಿಹಿಟ್ಟು, ಕಬ್ಬಿನ ಹಾಲು ಸೇರಿದಂತೆ ಅಷ್ಟ ದ್ರವ್ಯಗಳಿಂದ ಅಭಿಷೇಕ ನೇರವೇರಿಸಲಾಗುತ್ತಿದೆ. ಜೈನ ಮುನಿಗಳ ಹಾಗೂ ಸಾಧು-ಸಂತರ ಸಮ್ಮುಖದಲ್ಲಿ ಮಹಾ ವಿರಾಗಿಗೆ ಅಭಿಷೇಕ ನಡೆಯುತ್ತಿದೆ. ಇದಕ್ಕೂ ಮುನ್ನ ಮಹಾಮಸ್ತಕಾಭಿಷೇಕದ ಅಂಗವಾಗಿ ಅಗ್ರೋದಕ ಮೆರವಣಿಗೆಯಿತು. ಈ ಎಲ್ಲ ದೃಶ್ಯ ವೈಭವವನ್ನು ಈ ಕೆಳಗಿನ ಫೋಟೋಗಳಲ್ಲಿ ಕಾಣಬಹುದಾಗಿದೆ.