More

    ದೀರ್ಘಾಯುಷ್ಯಕ್ಕಾಗಿ ಯೋಗ: ಯೋಗ ದಿನಾಚರಣೆಯಲ್ಲಿ ಡಾ.ಹೆಗ್ಗಡೆ ಸಂದೇಶ

    ಬೆಳ್ತಂಗಡಿ: ಆರೋಗ್ಯ ಭಾಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಎಲ್ಲ ಮನೆಯಲ್ಲಿ ಯೋಗಾಭ್ಯಾಸ ಮಾಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

    ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ವೆಬಿನಾರ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ಮನೆ, ಮನೆಗಳಲ್ಲಿ ಯೋಗಾಭ್ಯಾಸ ಎಂಬುದು ಈ ವರ್ಷದ ಯೋಗ ದಿನಾಚರಣೆಯ ಸಂದೇಶ. ಕುಟುಂಬದ ಸದಸ್ಯರೆಲ್ಲರೂ ಸೇರಿ ನಿತ್ಯವೂ ಯೋಗಾಭ್ಯಾಸ ಮಾಡಬೇಕು. ಮಿತವಾದ ಆಹಾರ ಸೇವನೆಯೊಂದಿಗೆ ಪ್ರಾರ್ಥನೆ, ಧ್ಯಾನ, ಉಪವಾಸ, ಉತ್ತಮ ಜೀವನ ಶೈಲಿಯಿಂದ ಮನಸ್ಸು ಹಾಗೂ ಪಂಚೇಂದ್ರಿಯಗಳ ನಿಯಂತ್ರಣ ಸಾಧ್ಯ. ಹಣ ಸಂಪಾದನೆ ಹಾಗೂ ಭೌತಿಕ ಸಂಪತ್ತಿನ ಸಂಗ್ರಹವಷ್ಟೇ ಜೀವನದ ಗುರಿ ಅಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಏಕಾಗ್ರತೆಯೊಂದಿಗೆ ಅವರವರ ಕಾರ್ಯಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಯೋಗಾಭ್ಯಾಸ ಸಹಕಾರಿಯಾಗಿದೆ ಎಂದರು.

    ದೈಹಿಕ ವ್ಯಾಯಾಮಕ್ಕಾಗಿ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಈಜು, ಕ್ರೀಡೆಗಳು ಮೊದಲಾದ ಪರ್ಯಾಯ ಚಟುವಟಿಕೆಗಳಿದ್ದರೂ, ಯೋಗಾಭ್ಯಾಸದಿಂದ ಮಾತ್ರ ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ ಪಡೆದು, ಜೀವನದಲ್ಲಿ ಉನ್ನತ ಸಾಧಕರಾಗಬಹುದು ಎಂದು ಹೇಳಿದರು.

    ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ ಡಾ.ಜಯಕರ ಉಪಸ್ಥಿತರಿದ್ದರು. ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಯೋಗ ವಿಭಾಗದ ಡೀನ್ ಡಾ.ಶಿವಪ್ರಸಾದ ಶೆಟ್ಟಿ ವಂದಿಸಿದರು. ಡಾ.ಜ್ಯೋಸ್ನಾ ಮತ್ತು ಡಾ.ಮಂಜುಶ್ರೀ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts