20 C
Bengaluru
Saturday, January 18, 2020

ಸ್ವಸ್ಥ ಸಮಾಜಕ್ಕೆ ಬೇಕು ಸಹನೆಯೆಂಬ ದಿವ್ಯೌಷಧ

Latest News

ತಲೆಯಲ್ಲಿ ಮೂರು, ಮುಖಕ್ಕೆ ಒಂದು ಬುಲೆಟ್​ ಹೊಕ್ಕಿ ಗಾಯಗೊಂಡರೂ 7 ಕಿ.ಮೀ. ಚಲಿಸಿ ದೂರು ದಾಖಲಿಸಿದ ಮಹಿಳೆ!

ಚಂಡೀಗಢ: ತಲೆಯಲ್ಲಿ ಮೂರು ಹಾಗೂ ಮುಖಕ್ಕೆ ಒಂದು ಬುಲೆಟ್​ ಹೊಕ್ಕು ಗಾಯಗೊಂಡರೂ ಸುಮಾರು 7 ಕಿ.ಮೀ. ಚಲಿಸಿ ಮಹಿಳೆಯೊಬ್ಬಳು ಜಮೀನು ಕಸಿದ ಪ್ರಕರಣದಡಿಯಲ್ಲಿ...

ಮನೆಗೆ ಮರಳುವಾಗ ನಾಪತ್ತೆಯಾಗಿದ್ದ ಭಾರತೀಯ ಮೂಲದ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲೇ ಶವವಾಗಿ ಪತ್ತೆ

ವಾಷಿಂಗ್ಟನ್​: ಕಳೆದ ತಿಂಗಳು ಮನೆಗೆ ಮರಳುತ್ತಿದ್ದವಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬದವರು ದೂರು ದಾಖಲಿಸಿದ್ದ ಭಾರತೀಯ ಮೂಲದ ಅಮೆರಿಕ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲಿ...

ಡಿ.14ರಿಂದ ತಲಕಾಡು ಪಂಚಲಿಂಗ ದರ್ಶನ

ತಲಕಾಡು: ಡಿಸೆಂಬರ್ 14ರಿಂದ ಹತ್ತು ದಿನಗಳ ಕಾಲ ತಲಕಾಡಿನಲ್ಲಿ ನಡೆಯಲಿರುವ ವಿಶ್ವಪ್ರಸಿದ್ಧ ಪಂಚಲಿಂಗ ದರ್ಶನ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಜಿಲ್ಲಾಡಳಿತ ವತಿಯಿಂದ ಅಗತ್ಯ...

ಕಿಡ್ನಿ ಕಸಿಗೆ ನೆರವು ನೀಡಲು ಯುವಕನ ಮನವಿ

ವಿಜಯವಾಣಿ ಸುದ್ದಿಜಾಲ ಮಂಡ್ಯ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಯುವಕ ನೆರವಿಗೆ ಮನವಿ ಮಾಡಿದ್ದಾನೆ.ತಾಲೂಕಿನ ಕೊತ್ತತ್ತಿ ಗ್ರಾಮದ ವಿನೋದ್‌ಕುಮಾರ್(28) ಎರಡೂ ಕಿಡ್ನಿ ವೈಫಲ್ಯದಿಂದ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ ಮಿಸ್​ ಮಾಡಿಕೊಂಡ್ರೆ ನಿಮಗೆ ನಷ್ಟ!

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ...

ಗುರಿಮುಟ್ಟಲೆಂದು ದುಡುಕುವ ಬದಲು, ಸಹನೆಯನ್ನು ರೂಢಿಸಿಕೊಳ್ಳಲು ಮುಂದಾಗಬೇಕಿದೆ. ಜತೆಗೆ ಕಾನೂನು-ವ್ಯವಸ್ಥೆಯನ್ನು ಗೌರವಿಸುವ ಪರಿಪಾಠವನ್ನೂ ನಾವು ರೂಢಿಸಿಕೊಳ್ಳಬೇಕಿದೆ. ಇದರಿಂದ ಗೊಂದಲ ತಪ್ಪುವುದಲ್ಲದೆ ಎಲ್ಲರಿಗೂ ನೆಮ್ಮದಿ ದಕ್ಕುವುದರಲ್ಲಿ ಎರಡು ಮಾತಿಲ್ಲ.

| ಡಾ. ಡಿ. ವೀರೇಂದ್ರ ಹೆಗ್ಗಡೆ

ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರಲ್ಲಿ ಪ್ರಯಾಣಿಸುವಾಗ ಕಂಡ ಘಟನೆಯಿದು. ರಸ್ತೆಯಲ್ಲಿ ನಮ್ಮ ಮುಂದಿದ್ದ ಕಾರಿನ ಚಾಲಕ ಇಂಡಿಕೇಟರ್ ಹಾಕಿ ಬಲಗಡೆ ಕಾರು ತಿರುಗಿಸಿದ. ಆದರೆ ಬಲಕ್ಕೆ ತಿರುಗಲಾಗದೆ ಕಾರನ್ನು ಪುನಃ ಎಡಕ್ಕೆ ತಿರುಗಿಸಲು ಯತ್ನಿಸಿದ. ಆತ ಬಲಗಡೆಯ ಇಂಡಿಕೇಟರ್ ಹಾಕಿದ್ದರಿಂದ ಹಿಂದಿದ್ದ ವಾಹನಗಳು ಸಾಲಾಗಿ ಆ ಕಾರಿನ ಎಡಭಾಗದಿಂದ ಚಲಿಸಲಾರಂಭಿಸಿದವು. ಆ ಚಾಲಕ ಕಾರನ್ನು ಪುನಃ ಎಡಗಡೆ ತಿರುಗಿಸಲು ಯತ್ನಿಸಿದರೂ, ಅವನ ಎಡಗಡೆಯಿಂದ ಚಲಿಸುವ ವಾಹನಗಳು ತಮ್ಮ ಮಧ್ಯೆ ಸೇರಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಅಲ್ಲದೆ, ಎದುರುಗಡೆಯಿಂದ ಬರುತ್ತಿದ್ದ ವಾಹನಗಳೂ ಈ ಕಾರಿನ ಎದುರು ಬಂದು ನಿಂತವು. ರಸ್ತೆ ಬ್ಲಾಕ್ ಆಯಿತು. ನಮ್ಮ ಹಿಂದಿನ-ಮುಂದಿನ ಎಲ್ಲರೂ ಹಾರ್ನ್ ರಂಪಾಟವನ್ನೇ ಮಾಡಿದರು. ಆದರೆ ಆ ಕಾರಿನ ಹಿಂದಿದ್ದ ನಾವು ಅಸಹಾಯಕರಾಗಿದ್ದೆವು. ಏಕೆಂದರೆ ನಮಗೆ ಆ ಕಾರು ಅಡ್ಡವಾಗಿತ್ತು. ಕೊನೆಗೆ ಬಲವಂತವಾಗಿ ಕಾರನ್ನು ಮುಂದಿನ ಸಾಲಿನಲ್ಲಿ ಸೇರಿಸಬೇಕಾಯಿತು. ಅಷ್ಟರಲ್ಲಿ ಹಲವು ವಾಹನದವರು ಆ ಕಾರಿನ ಡ್ರೈವರ್​ನನ್ನು ದುರುಗುಟ್ಟಿ ನೋಡಿ ಬೈಗುಳದ ಅಶೀರ್ವಾದ ನೀಡಿ ಚಲಿಸಿದರು. ಇಷ್ಟೆಲ್ಲ ಅವಾಂತರ ನಡೆದದ್ದು ಕೇವಲ 3-4 ಸೆಕೆಂಡಿನ ಸಹನೆಯ ಕೊರತೆಯಿಂದಾಗಿ. ಒಂದೊಮ್ಮೆ ಆ ಕಾರಿಗೆ ತಾಳ್ಮೆಯಿಂದ ಒಂದೆರಡು ಸೆಕೆಂಡಿನ ಅವಕಾಶ ನೀಡಿದ್ದರೆ ಇಷ್ಟೆಲ್ಲ ಗೊಂದಲ, ಶಬ್ದಮಾಲಿನ್ಯ ಆಗುತ್ತಿರಲಿಲ್ಲ.

ಅಲ್ಲಿಂದ ಸ್ವಲ್ಪ ಮುಂದೆ ಬಂದಾಗ, ಒಂದು ಸರ್ಕಲ್​ನಲ್ಲಿ ಕೆಂಪುದೀಪವಿದ್ದುದರಿಂದ, ವಾಹನವನ್ನು ನಿಲ್ಲಿಸಿದ್ದೆವು. ನಮ್ಮ ಮುಂದೆ ಎಡಗಡೆಯಿಂದ ಬಲಗಡೆಗೆ ಹೋಗುವವರಿಗೆ ಹಸಿರುದೀಪ ಅನುಮತಿಸಿದ್ದರಿಂದ ವಾಹನಗಳು ವೇಗವಾಗಿ ಚಲಿಸುತ್ತಿದ್ದವು. ಕೆಲ ಸಮಯದ ನಂತರ, ನಮಗೆ ಹಸಿರು ನಿಶಾನೆ ದಕ್ಕಿತು. ನಮ್ಮ ಎಡಗಡೆಯಿಂದ ಬಲಗಡೆಗೆ ಹೋಗುತ್ತಿರುವವರಿಗೆ ‘ಕೆಂಪುದೀಪ’ ಬಿತ್ತು. ಅದನ್ನು ಧಿಕ್ಕರಿಸಿಯೋ ಅಥವಾ ಗಮನಿಸದೆಯೋ ಕೆಲವರು ವೇಗವಾಗಿ ತೆರಳಲು ಯತ್ನಿಸಿದರು. ಕೆಲವರು ನಿಧಾನವಾಗಿ ಬಂದು ಸಿಕ್ಕಿಕೊಂಡರು. ಅಂದರೆ ಅವರು ನಮ್ಮ ಎಡಗಡೆಯಿಂದ ಬಲಗಡೆಗೆ ಹೋಗಬೇಕಿತ್ತು. ಆದರೆ ಮುಂದಿದ್ದ ಯಾವುದೋ ವಾಹನ ಕಾರಣಾಂತರದಿಂದ ಚಲಿಸದೆ ನಿಂತಾಗ ಅದರ ಹಿಂದಿನ ವಾಹನಗಳೆಲ್ಲ ನಿಂತುಬಿಟ್ಟವು. ಸಿಗ್ನಲ್ ಹಸಿರುದೀಪ ತೋರಿಸಿದ್ದರಿಂದ, ನಮ್ಮ ರಸ್ತೆಯಲ್ಲಿದ್ದ ವಾಹನಗಳೂ ಚಲಿಸಿದವು. ಆ ಸರ್ಕಲ್​ನಲ್ಲಿ ನಾಲ್ಕೂ ಕಡೆಯಿಂದ ವಾಹನಗಳು ಸೇರಿದ್ದರಿಂದ, ಚಲಿಸಲಾಗದೆ ಗೊಂದಲವೋ ಗೊಂದಲವಾಯಿತು. ಎಲ್ಲ ಕಡೆಯಿಂದಲೂ ಕರ್ಣಕಠೋರ ಹಾರ್ನ್ ಸದ್ದುಮಾಡುತ್ತಿತ್ತು. ಇಷ್ಟೆಲ್ಲ ಗೊಂದಲಗಳ ನಡುವೆಯೂ ಯುವಕನೊಬ್ಬ ವೇಗವಾಗಿ ಬೈಕನ್ನು ದಾಟಿಸಲು ಸರ್ಕಸ್ ಮಾಡುತ್ತಿದ್ದ. ಹೀಗೆ ಎಲ್ಲರಿಗೂ ಗಡಿಬಿಡಿ. ಈ ಎಲ್ಲ ಅಧ್ವಾನ, ಅವಾಂತರಗಳಿಗೆ ಕಾರಣ ಸಹನೆಯ ಅಭಾವ.

ಇಂಥ ಸಾವಿರ ಘಟನೆಗಳನ್ನು ಕಂಡಿದ್ದೇವೆ, ನೋಡುತ್ತಿದ್ದೇವೆ. ಇಂಥ ವೇಳೆ ನಮಗೆ ಅನ್ನಿಸುವುದಿಷ್ಟೆ- ಕೆಲವೇ ಕ್ಷಣದ ತಾಳ್ಮೆಯನ್ನಾದರೂ ನಾವು ಅಭ್ಯಾಸ ಮಾಡಲೇಬೇಕು. ಏಕೆಂದರೆ, ಇಂದು ನಮ್ಮ ಮುಂದಿನ ಕಾರಿನಲ್ಲಿದ್ದವರ ಸ್ಥಿತಿ ನಾಳೆ ನಮ್ಮದೂ ಆಗಬಹುದು. ಇಂದು ಹಿಂದಿನಿಂದ ಹಾರ್ನ್ ಮಾಡುವ ನಾವೇ ನಾಳೆ ಸಿಕ್ಕಿಹಾಕಿಕೊಳ್ಳಬೇಕಾಗಬಹುದು. ಹಾಗಾಗಿ ವಿಶಾಲ ಚಿಂತನೆ ಮತ್ತು ಇನ್ನೊಬ್ಬರನ್ನು ನಮ್ಮಂತೆ ಕಾಣುವ ಪ್ರವೃತ್ತಿ ಬೆಳೆಯಬೇಕು. ಇದಕ್ಕೆ ಬೇಕಾದ ಗುಣವೇ ಸಹನೆ. ಇನ್ನೊಬ್ಬರಿಂದ ಸಹನೆ, ಸಹಕಾರವನ್ನು ಹೇಗೆ ಬಯಸುತ್ತೇವೋ, ಹಾಗೆಯೇ ಇನ್ನೊಬ್ಬರಿಗೂ ಸಹಾಯ, ಸಹಕಾರ ಮಾಡಲು ನಾವು ಸಿದ್ಧರಿರಬೇಕಾಗಿದೆ.

ಕೆಲವು ವರ್ಷಗಳ ಹಿಂದೆ ವಿದೇಶಪ್ರವಾಸ ಮಾಡಿದೆವು. ಅಲ್ಲಿನ ಹಳ್ಳಿಯೊಂದರ ಸುಮಾರು 15 ಅಡಿ ಅಗಲದ ರಸ್ತೆಯಲ್ಲಿ ವಾಹನಗಳ ಸಾಲಿತ್ತು. ಯಾರೂ ಹಾರ್ನ್ ಹೊಡೆಯುತ್ತಿರಲಿಲ್ಲ. ಕೆಲವರು ಇಳಿದು ಮುಂದೆ ನೋಡುತ್ತಿದ್ದರು. ಅಲ್ಲಿದ್ದ ನಮ್ಮ ಸಂಬಂಧಿಗಳಲ್ಲಿ ‘ಏನಾಯಿತು? ಏನಾದರೂ ಅಪಘಾತವಾಯಿತೆ?’ ಎಂದು ಕೇಳಿದೆ. ಆಗ ಅವರು ‘ಇಲ್ಲ, ಇದು ಹಸುಗಳನ್ನು ಮೇಯಲು ಬಿಡುವ ಸ್ಥಳ. ಇಲ್ಲಿ ಸುತ್ತಮುತ್ತ ಬೇಲಿ ಹಾಕಿದ್ದಾರಲ್ಲ, ಅದರೊಳಗೆ ಹಸುಗಳನ್ನು ಬಿಡುತ್ತಾರೆ. ಪ್ರಾಯಶಃ ಅವುಗಳಲ್ಲಿ ಯಾವುದೋ ಹಸು ತಪ್ಪಿಸಿಕೊಂಡು ರಸ್ತೆಗೆ ಬಂದಿರಬೇಕು. ಹಾಗಾಗಿ ಎಲ್ಲರೂ ವಾಹನ ನಿಲ್ಲಿಸಿ, ಅದು ರಸ್ತೆ ದಾಟಿ ಹೋಗಲು ಅನುವು ಮಾಡಿಕೊಡುತ್ತಿದ್ದಾರೆ’ಎಂದರು.

ಎರಡು ಕಾರಣಗಳಿಂದ ಇವರು ವಾಹನ ನಿಲ್ಲಿಸಿ ಸಹನೆಯಿಂದ ಕಾದಿದ್ದಾರೆ. ಒಂದೊಮ್ಮೆ ಯಾರಾದರೂ ವೇಗವಾಗಿ ಹೋದರೆ ಹಸು/ಕರುವಿಗೆ ತಾಗಿ ಅವು ಸಾಯಬಹುದು, ಇದು ಅಪರಾಧ. ಎರಡನೆಯದು, ಇಂಥ ನಿರ್ಜನ ಪ್ರದೇಶದಲ್ಲಿ ವೇಗವಾಗಿ ಹೋಗುವಾಗ ಪ್ರಾಣಿಗಳು ಅಡ್ಡಬಂದಾಗ ಅಪಘಾತಗಳಾಗಬಹುದು. ಸಹನೆಯಿಂದ ಕಾದು ಮುಂದೆಹೋಗುವ ಗುಣ ಇಲ್ಲಿನವರಿಗೆ ರಕ್ತಗತವಾಗಿದೆ ಎಂಬುದು ನಮಗೆ ಮನವರಿಕೆಯಾಯಿತು.

ವಿದೇಶದಲ್ಲಾದ ಇನ್ನೊಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ವಿಮಾನ ನಿಲ್ದಾಣದಿಂದ ನಮ್ಮ ವಾಸಸ್ಥಳಕ್ಕೆ ಹೋಗುವಾಗ ರಾತ್ರಿ 12 ಗಂಟೆ ಕಳೆದಿತ್ತು. ಹೋಗುವಾಗ ಒಂದು ಸಿಗ್ನಲ್ ಸಿಕ್ಕಿತು. ಅಲ್ಲಿ ಕೆಂಪುದೀಪವಿತ್ತು. ನೇರರಸ್ತೆ. ಸುಮಾರು 2-3 ಕಿ.ಮೀ.ವರೆಗೂ ರಸ್ತೆ ಕಾಣುತ್ತಿತ್ತು. ಯಾವ ಕಡೆಯಿಂದಲೂ ವಾಹನ ಬರುತ್ತಿರಲಿಲ್ಲ. ಆದರೂ ನಮ್ಮ ಡ್ರೈವರ್ ಸಿಗ್ನಲ್​ನಲ್ಲಿ ಗಾಡಿ ನಿಲ್ಲಿಸಿದ. ಆಗ ನಾನು ಭಾರತೀಯರ ಸ್ವಭಾವದಂತೆ ‘ಯಾಕೆ ವಾಹನ ನಿಲ್ಲಿಸಿದಿರಿ? ಇಡೀ ರಸ್ತೆ ಖಾಲಿಯಿದೆ, ಅದೂ ಮಧ್ಯರಾತ್ರಿ. ಸಿಗ್ನಲ್ ದಾಟಿ ಹೋಗಬಹುದಲ್ಲ!’ ಎಂದೆ. ಆಗ ಆತ ನೀಡಿದ ಉತ್ತರ ಮನಸ್ಸನ್ನು ತಟ್ಟಿತು- ‘ಈ ದೇಶದಲ್ಲಿ ನಾವು ಯಾವತ್ತೂ ಕಾನೂನನ್ನು ಉಲ್ಲಂಘಿಸಬಾರದು ಮತ್ತು ಉಲ್ಲಂಘಿಸುವುದೂ ಇಲ್ಲ. ಇಲ್ಲಿ ನೋಡಿ! ಒಂದು ಸಿ.ಸಿ. ಕ್ಯಾಮರಾ ಇದೆ. ಇದು ನೇರವಾಗಿ ಆರಕ್ಷಕ ಠಾಣೆಗೆ ಸಂಪರ್ಕ ಹೊಂದಿದೆ. ನಿಯಮಬಾಹಿರವಾಗಿ ವಾಹನ ಓಡಿಸಿದರೆ, ನಮಗೆ ನೋಟೀಸ್ ಬರುತ್ತದೆ. ಹಾಗಾಗಿ ಹಗಲು-ರಾತ್ರಿ ಎಂಬ ಭೇದವಿಲ್ಲದೆ, ವಾಹನ ಚಲಿಸುತ್ತಿರಲಿ ಅಥವಾ ಇಲ್ಲದಿರಲಿ, ಸಂಚಾರಿ ನಿಯಮಗಳನ್ನು ಪಾಲಿಸಲೇಬೇಕು’ ಎಂದ.

ನಿಯಮೋಲ್ಲಂಘನೆಗೆ ಕ್ಷಮೆಯಿಲ್ಲ: ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದೆ. ಒಂದು ದಿನ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದೆವು. ಅದರ ಬಲಗಡೆಯಿರುವ ಒಂದು ಹೂದೋಟಕ್ಕೆ ನಾವು ಹೋಗಬೇಕಾಗಿತ್ತು. ನಮ್ಮ ಕಾರು ಬಲಕ್ಕೆ ತಿರುಗಿ, ಇನ್ನೊಂದು ರಸ್ತೆಯಿಂದ ಹೂದೋಟವಿರುವ ಊರೊಳಗೆ ಹೋಯಿತು. ತತ್​ಕ್ಷಣ ಅಲ್ಲಿದ್ದ ಪೊಲೀಸ್ ಸಿಗ್ನಲ್ ಕೊಟ್ಟ. ರಸ್ತೆಯ ಪಕ್ಕಕ್ಕೆ ಕರೆದು ‘ಈ ರಸ್ತೆಯಲ್ಲಿ ವೇಗದ ಮಿತಿ 40ಕಿ.ಮೀ.; ನಿಮ್ಮ ಗಾಡಿ 60 ಕಿ.ಮೀ. ವೇಗದಲ್ಲಿತ್ತು’ ಎಂದು ತನ್ನ ಕೈಲಿದ್ದ ಯಂತ್ರದಲ್ಲಿ ಆ ಮಾಹಿತಿ ತೋರಿಸಿದ. ‘ಈ ಅಪರಾಧಕ್ಕೆ ನೀವು ದಂಡ ತೆರಬೇಕಾಗುತ್ತದೆ’ ಎಂದ ಆ ಪೊಲೀಸ್, ವಿನಯದಿಂದ ಮತ್ತು ಅಷ್ಟೇ ಗೌರವದಿಂದ ಅದನ್ನು ಹೇಳಿದ. ‘ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ನನಗೆ ಈ ಮಾಹಿತಿ ಇರಲಿಲ್ಲ. ಈ ಸಲ ನಮ್ಮನ್ನು ಕ್ಷಮಿಸಬಹುದೆ?’ ಎಂದು ನನ್ನ ಅಳಿಯ ಕೇಳಿದಾಗ, ‘ನಿಮ್ಮೊಬ್ಬರನ್ನು ಕ್ಷಮಿಸಿದರೆ, ಇಂಥದ್ದೇ ನೂರಾರು ತಪ್ಪುಗಳು ಪುನರಾವರ್ತನೆಯಾಗುತ್ತವೆ. ಆದ್ದರಿಂದ ಸಂಚಾರಿ ನಿಯಮ ಉಲ್ಲಂಘಿಸಿದಾಗ ಕ್ಷಮೆಯಿಲ್ಲ’ ಎಂದ ಪೊಲೀಸ್, ದಂಡರೂಪವಾಗಿ ಒಂದು ಸ್ಲಿಪ್ ನೀಡಿದ. ಆ ಯಂತ್ರದ ಮೇಲೆಯೇ ನಮ್ಮ ಚಾಲಕ ಸಹಿಮಾಡಿದ. ಅವನ ಬ್ಯಾಂಕ್ ಖಾತೆಯಿಂದ ಅಟೋಮ್ಯಾಟಿಕ್ ಆಗಿ ಹಣವು ಪೊಲೀಸ್ ವಿಭಾಗಕ್ಕೆ ವರ್ಗಾವಣೆಯಾಯಿತು. ಹೀಗೆ ಕಾನೂನಾತ್ಮಕವಾಗಿ ಎಲ್ಲ ವಿಷಯಗಳನ್ನು ವಿದೇಶದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಾರೆ.

ಶಿಸ್ತು ಮತ್ತು ಸಹನೆ ಸ್ವಭಾವವಾಗಲಿ: ಇಲ್ಲಿ 2-3 ಅಂಶಗಳಿವೆ. 1) ನಮ್ಮ ವರ್ತನೆಯನ್ನು ಹೇಗೆ ನಿಯಂತ್ರಿಸಿಕೊಳ್ಳಬೇಕು; 2) ನಾವು ಇನ್ನೊಬ್ಬರಿಗೆ ಗೌರವ ಕೊಡುವ ರೀತಿ; 3) ಕಾನೂನನ್ನು ಗೌರವಿಸುವ ಪರಿಪಾಠ. ವಿದೇಶದಲ್ಲಿ ಅವರು ಸ್ವಾಭಾವಿಕವಾಗಿ ಪರಸ್ಪರ ಗೌರವ ನೀಡುತ್ತಾರೋ ಸಹನೆ ಪ್ರದರ್ಶಿಸುತ್ತಾರೋ ಗೊತ್ತಿಲ್ಲ. ಸಿಸಿ ಟಿವಿಯೋ, ಪೊಲೀಸ್ ಕೈಲಿದ್ದ ಯಂತ್ರವೋ ನಿಖರವಾಗಿ ನಮ್ಮ ತಪ್ಪನ್ನು ತೋರಿಸುವುದರಿಂದ ಕಾನೂನಿಗೆ ಹೆದರಿಯಾದರೂ ಸಹನೆ ಪ್ರದರ್ಶಿಸುತ್ತಾರೆ, ಹಾಗೆಯೇ ಗೌರವ ನೀಡುತ್ತಾರೆ ಮತ್ತು ಸಂಚಾರದ ನಿಯಮವನ್ನು ತಪ್ಪದೆ ಪಾಲಿಸುತ್ತಾರೆ ಎಂಬುದು ಮುಖ್ಯ. ನಮ್ಮ ದೇಶದಲ್ಲೂ ಒಂದೋ ನಾವಾಗಿಯೇ ಶಿಸ್ತನ್ನು ಪಾಲಿಸಬೇಕು, ಸಹನೆ ಕಲಿಯಬೇಕು ಅಥವಾ ದಂಡನೆಯ ಭಯ ಬೇಕು. ಇಲ್ಲದಿದ್ದರೆ, ಈ ಮೊದಲು ತಿಳಿಸಿದಂತೆ ಗೊಂದಲ, ಅತಂತ್ರ ಸ್ಥಿತಿ ನಿರ್ವಣವಾಗುತ್ತದೆ.

ಕಾನೂನು ರಕ್ಷಣೆಯ ಹೊಣೆಹೊತ್ತ ಪೊಲೀಸರ ಬಗ್ಗೆಯೂ ಲಘುವಾಗಿ ವ್ಯವಹರಿಸಿಬಿಡುತ್ತೇವೆ. ನಾವು ಕಾನೂನು ಉಲ್ಲಂಘಿಸಿದಾಗ ಪೊಲೀಸರು ದಂಡ ವಿಧಿಸಿದರೂ, ಅವರ ಲಾಭಕ್ಕಾಗಿಯೇ ಹೀಗೆ ಮಾಡುತ್ತಿದ್ದಾರೆಂದು ಊಹಿಸುತ್ತೇವೆ. ನಮ್ಮದೇ ತಪ್ಪಿದ್ದರೂ ಅವರೊಂದಿಗೆ ಜಗಳವಂತೂ ಸರ್ವೆಸಾಮಾನ್ಯ. ನಮ್ಮ ಧರ್ಮಸ್ಥಳದಲ್ಲೂ, ಯಾರಾದರೂ ವಾಹನವನ್ನು ಅಡ್ಡಾದಿಡ್ಡಿ ನಿಲ್ಲಿಸಿದರೆ, ಘಟ ಕಚ್ಟkಜ್ಞಿಜ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದನ್ನು ನಮ್ಮ ಸಿಬ್ಬಂದಿ ಪ್ರಶ್ನಿಸಿದರೆ ಮೊದಲ ಪ್ರತಿಕ್ರಿಯೆಯೇ ಉದ್ಧಟತನ; ‘ನೀನ್ಯಾರು ಕೇಳಲಿಕ್ಕೆ, ಸ್ವಲ್ಪ ಸಮಯ ಮಾತ್ರ ವಾಹನವನ್ನು ಇಟ್ಟರೆ ಏನಾಗುತ್ತದೆ?’ ಎಂಬ ವಾದವನ್ನೇ ಮಾಡುತ್ತಾರೆ. ಏನೇನೋ ಕಾರಣ ಹೇಳಿ ತಮ್ಮ ವರ್ತನೆಯನ್ನೇ ಸಮರ್ಥಿಸಿಕೊಳ್ಳುತ್ತಾರೆಯೇ ಹೊರತು ಕಾನೂನನ್ನು ಗೌರವಿಸುವುದೇ ಇಲ್ಲ. ಕಾವಲುಗಾರನ, ಪೊಲೀಸರ ಕರ್ತವ್ಯಪ್ರಜ್ಞೆಯನ್ನು ಮೆಚ್ಚುವ ಬದಲಿಗೆ, ಅವರನ್ನು ದುರುಗುಟ್ಟುವ, ಬಯ್ಯುವ ಸ್ವಭಾವವನ್ನೇ ಹಲವರು ಪ್ರದರ್ಶಿಸುತ್ತಾರೆ. ಈ ಪ್ರವೃತ್ತಿ ಬದಲಾಗದೇ ಪರಿವರ್ತನೆ ಸಾಧ್ಯವಾಗದು.

ಸಂಚಾರಿ ನಿಯಮದ ಪರಿಪಾಲನೆ ಎಲ್ಲರಿಗೂ ಒಳ್ಳೆಯದು. ಕಾನೂನನ್ನು ಗೌರವಿಸುವ ಮೂಲಕ ವಿನಾಕಾರಣ ಗೊಂದಲ, ಅಯೋಮಯ ಸ್ಥಿತಿಯನ್ನು ದೂರಮಾಡಿಕೊಳ್ಳಬಹುದು. ಸುಮಾರು 10 ವರ್ಷದ ಹಿಂದೆ ಧರ್ಮಸ್ಥಳದಲ್ಲಿ ಮಹಾನಡಾವಳಿ ಮಹೋತ್ಸವ ನಡೆದಾಗ ಭಕ್ತರು ನೀಡಿದ ಹೊರೆಕಾಣೆಕೆ ಸಂಗ್ರಹಿಸಿಡಲು ಒಂದು ತಾತ್ಕಾಲಿಕ ಉಗ್ರಾಣವನ್ನು ಮಾಡಿದ್ದೆವು. ಕಾರಲ್ಲಿ ಕುಳಿತು ನಡಾವಳಿಗಾಗಿ ಮಾಡಿದ ವ್ಯವಸ್ಥೆಗಳನ್ನು ನೋಡುತ್ತ ಆ ಉಗ್ರಾಣದತ್ತ ಹೋದೆವು. ಅದರ ಒಳಭಾಗದಲ್ಲೇ ಒಂದು ನೆರಳಿರುವ ಪ್ರದೇಶದಲ್ಲಿ ಡ್ರೈವರ್ ಕಾರನ್ನು ನಿಲ್ಲಿಸಿದ, ತಕ್ಷಣ ರ್ಪಾಂಗ್ ವ್ಯವಸ್ಥೆಯಲ್ಲಿದ್ದ ನಮ್ಮ ವೇಣೂರಿನ ಐಟಿಐನ ಸ್ವಯಂಸೇವಕ ವಿಸಿಲ್ ಹಾಕಿಕೊಂಡು ಬಂದು, ‘ಇಲ್ಲಿ ಗಾಡಿ ನಿಲ್ಲಿಸುವಂತಿಲ್ಲ, ಹೊರಗೆ ತೆಗೆಯಿರಿ’ ಎಂದು ವಿನಂತಿಸಿದ. ಆ ಕೂಡಲೇ ಕಾರಲ್ಲಿದ್ದ ನನ್ನನ್ನು ನೋಡಿ ‘ಕ್ಷಮಿಸಿ, ತಪ್ಪಾಯಿತು’ ಎಂದ. ಅವನನ್ನು ಹತ್ತಿರ ಕರೆದು ಹೆಸರನ್ನು ಕೇಳಿದೆ. ಅವರ ಪ್ರಿನ್ಸಿಪಾಲರನ್ನು ಕರೆದು- ‘ನನ್ನ ಕಾರನ್ನು ನಿಲ್ಲಿಸಿ, ಅಲ್ಲಿಂದ ಹೊರಗೆ ತೆಗೆಯಿರಿ ಎಂದಿದ್ದು ನನಗೆ ತುಂಬ ಇಷ್ಟವಾಯಿತು. ಅವನು ಶಿಸ್ತಿನಿಂದ ಮಾಡಿದ ಸೇವೆ ನನಗೆ ಅತೀವ ಆನಂದ ನೀಡಿತು, ಆ ವಿದ್ಯಾರ್ಥಿಗೆ ನನ್ನ ಮೆಚ್ಚುಗೆ ತಿಳಿಸಿರಿ’ ಎಂದೆ.

ಶಿಸ್ತು, ಸಹನೆ ಮತ್ತು ಕಾನೂನಿನ ಅರಿವು ಹಾಗೂ ಪಾಲನೆಯಪ್ರಜ್ಞೆ ನಮ್ಮಲ್ಲಿ ಬಂದರೆ, ಎಲ್ಲರಿಗೂ ನೆಮ್ಮದಿ. ಇದರಿಂದ ಸಮಾನತೆ, ಸಹಬಾಳ್ವೆ ಸಿಗಬಹುದಲ್ಲವೇ?

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...