25.9 C
Bengaluru
Wednesday, January 22, 2020

ಆಯುರ್ವೇದದ ಅನೇಕ ವಿಶೇಷತೆಗಳಲ್ಲೊಂದು ಈ ಕರ್ಮ ವಿಜ್ಞಾನ

Latest News

ಮಾನವ ಮುಖ ಹೋಲುವ ಮೇಕೆಯನ್ನು ದೇವರ ಅವತಾರವೆಂದು ಪೂಜಿಸುವ ಜನರು; ಆದರೆ ನಿಜಕ್ಕೂ ಆ ಪ್ರಾಣಿಗಿರುವ ಸಮಸ್ಯೆ ಏನು ಗೊತ್ತಾ?

ರಾಜಸ್ತಾನದ ನಿಮೋಡಿಯಾ ಎಂಬಲ್ಲಿ ಮೇಕೆಯೊಂದಿದೆ. ಆ ಮೇಕೆ ಉಳಿದವುಗಳಂತೆ ಇಲ್ಲ, ಸ್ವಲ್ಪ ವಿಭಿನ್ನವಾಗಿದೆ. ಹಾಗಾಗಿ ಈ ಮೇಕೆಯನ್ನು ಅಲ್ಲಿನ ಜನರು ಪೂಜಿಸುತ್ತಾರೆ. ಅಷ್ಟಕ್ಕೂ ಅದೇನು ದೈವಿ ಶಕ್ತಿ...

ರಾಜ್ಯಮಟ್ಟದ 28ನೇ ಭಜನೆ ಮೇಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ

ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ರಾಜ್ಯ ಮಟ್ಟದ 28ನೇ ಭಜನಾ ಮೇಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ರಾಜ್ಯಮಟ್ಟದ ಭಜನಾ...

ಮುಖ್ಯಮಂತ್ರಿ ಯಡಿಯೂರಪ್ಪ ವಿದೇಶದಿಂದ ವಾಪಸಾದ ಬಳಿಕ ಸಚಿವ ಸಂಪುಟ ವಿಸ್ತರಣೆ: ಡಿಸಿಎಂ ಅಶ್ವತ್ಥ ನಾರಾಯಣ

ತುಮಕೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ವಿದೇಶದಿಂದ ಬಂಡ ಕೂಡಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್​ ತಿಳಿಸಿದರು. ಇಲ್ಲಿನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ...

ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಆದ್ಯತೆ ನೀಡುವೆ ಎಂದ ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ: ರೈತ ಪರ ಕಾಳಜಿಯ ಸಿದ್ಧಗಂಗಾಶ್ರೀಗಳ ಶಿಕ್ಷಣದ ನಿಸ್ವಾರ್ಥ ಸೇವೆಯಿಂದ ಜಗತ್ತೇ ನಾಡನ್ನು ನೋಡುವಂತಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ನಗರದ ಪಬ್ಲಿಕ್...

ಎಲ್ಲ ವರ್ಗದವರಿಗೂ ಲ್ಯಾಪ್​ಟಾಪ್ ವಿತರಿಸಲು ಎನ್​ಎಸ್​ಯುುಐ ಕಾರ್ಯಕರ್ತರ ಒತ್ತಾಯ

ಶಿವಮೊಗ್ಗ: ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೀಡುತ್ತಿರುವ ಉಚಿತ ಲ್ಯಾಪ್​ಟಾಪ್ ಯೋಜನೆಯನ್ನು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು ಎಂಂದು ಒತ್ತಾಯಿಸಿ ಎನ್​ಎಸ್​ಯುುಐ...

ಆಯುರ್ವೇದದಲ್ಲಿ ಅನೇಕ ವಿಶೇಷತೆಗಳಿವೆ. ಇವುಗಳನ್ನು ಪರಿಪೂರ್ಣವಾಗಿ ಸಿದ್ಧಪಡಿಸಿ ಮಾನವ ಕುಲಕ್ಕೆ ಸಾದರ ಪಡಿಸಿದ್ದು ವೈದ್ಯವಿಜ್ಞಾನಿಋಷಿಗಳ ಹೆಗ್ಗಳಿಕೆ. ಆಹಾರ ವಸ್ತುಗಳು, ಔಷಧೀಯ ಸಸ್ಯಗಳು, ಭೂಮಿಯಲ್ಲಿರುವ ಖನಿಜಾದಿ ದ್ರವ್ಯಗಳನ್ನೆಲ್ಲ ವಿವರಿಸುವ ಸಂದರ್ಭದಲ್ಲಿ ಇದೇ ತತ್ತ್ವವನ್ನು ಅವರು ಅಳವಡಿಸಿದ್ದಾರೆ. ಹೀಗಾಗಿ ಒಂದು ದ್ರವ್ಯದ ವಿವರಣೆಯೆಂದರೆ ಅದರ ಆಮೂಲಾಗ್ರ ಬಣ್ಣನೆ.

ಉದಾಹರಣೆಗೆ ಕದಲಿಯ ಬಗ್ಗೆ ಹೇಳುವುದೆಂದರೆ ಭೂಮಿಯೊಳಗಿರುವ ಅದರ ಬೇರುಗಡ್ಡೆಯಿಂದ ಹಿಡಿದು ಕಾಂಡದ ಹೊರತ್ವಚೆ, ಕಾಂಡದ ಒಳಭಾಗ, ಬಾಳೆಎಲೆ, ಹೂ, ಬಾಳೆಹಣ್ಣಿನ ತನಕ ಎಲ್ಲಾ ಭಾಗಗಳ ಪರಿಪೂರ್ಣ ವರ್ಣನೆ! ಬಾಳೆಗಿಡದಲ್ಲಿ ಮೂಲ ಪ್ರಭೇದಗಳಿದ್ದರೆ ಅದರನ್ನೂ ತಿಳಿಹೇಳಿ ಅದಕ್ಕನುಗುಣವಾಗಿ ಅದರ ಕಾರ್ಯದ ವಿವರಣೆ! ಕೊಮ್ಮೆಗಿಡವೆಂದರೆ ಅದರಲ್ಲಿ ಬಿಳಿ ಹಾಗೂ ಕೆಂಪು ಪ್ರಭೇದಗಳಿವೆ. ಈ ಶ್ವೇತ ಪುನರ್ನವ, ರಕ್ತ ಪುನರ್ನವಗಳ ಕಾರ್ಯ ವೈಶಾಲ್ಯದಲ್ಲಿ ವ್ಯತ್ಯಾಸವಿದೆ. ಹೀಗೆ ಪ್ರಭೇದಗಳನ್ನು ಹಣ್ಣು, ಹೂ, ಕಾಂಡಗಳ ಬಣ್ಣಗಳ ಆಧಾರದಲ್ಲಿ ಪ್ರತ್ಯೇಕವಾಗಿ ಹೇಳಬೇಕಿದ್ದರೆ ಅವುಗಳ ಗುಣಕರ್ಮದಲ್ಲಿ ವ್ಯತ್ಯಾಸವಿದೆ ಎಂಬುದನ್ನರಿತೇ ಪ್ರತ್ಯೇಕಿಸಿ ಹೇಳಿರುವುದು ಚಿಂತನಾಲಹರಿಯ ಮೇಲ್ಮೆಯನ್ನು ಸೂಚಿಸುತ್ತದೆ.

ಒಂದು ದ್ರವ್ಯದ ಕಾಮುಖತೆಯನ್ನು ವಿವರಿಸಿದ್ದರಲ್ಲಿ ವಿಶೇಷತೆಯಿದೆ. ಸಾಮಾನ್ಯವಾಗಿ ಇಂದಿನ ಆಧುನಿಕ ಪಾಶ್ಚಿಮಾತ್ಯ ಜ್ಞಾನದಲ್ಲಿ ಆಹಾರವಸ್ತುವಿನಲ್ಲಿರುವ ಘಟಕ ಅಂಶಗಳು ಯಾವುದೆಲ್ಲ ಇವೆ, ಎಷ್ಟೆಷ್ಟಿವೆ ಎಂದು ಹೇಳುವ ಪದ್ಧತಿಯಿದೆ ಹೊರತು ಅವುಗಳ ಕೆಲಸ ಹೇಗೆಂಬುದರ ವಿವರಣೆ ಇಲ್ಲ.

ಆಲೂಗಡ್ಡೆಯಲ್ಲಿ ಯಾವೆಲ್ಲಾ ಪೋಷಕಾಂಶಗಳಿವೆ, ಯಾವುದೆಲ್ಲ ರಾಸಾಯನಿಕಗಳಿವೆ ಎಂಬ ಮಾಹಿತಿ ಬಿಟ್ಟರೆ ಆಲೂಗಡ್ಡೆಯನ್ನು ಒಬ್ಬ ವ್ಯಕ್ತಿ ಸೇವಿಸಿದಾಗ ದೇಹದ ಮೇಲೆ ಏನೇನು ಪರಿಣಾಮ ಬೀರುತ್ತದೆ ಎಂಬ ವಿಚಾರದ ಪ್ರಸ್ತಾಪ ಕಂಡುಬರುವುದಿಲ್ಲ. ಆದುದರಿಂದಲೇ ಅಮ್ಲಪಿತ್ತವಿರುವ ವ್ಯಕ್ತಿಗೆ ಘಟಕ ಅಂಶಗಳ ಆಧಾರದಲ್ಲಿ ಅದನ್ನು ತಿನ್ನಬೇಕೋ ಬೇಡವೋ ಎಂಬ ಗೊಂದಲ! ತಿಂದಾಗಲಷ್ಟೇ ಹೊಟ್ಟೆಯುಬ್ಬರ ಉಂಟಾಗುವುದು ಅನುಭವಕ್ಕೆ ಬಂದು ಈ ಜ್ಞಾನ ಪ್ರಾಪ್ತಿಯಾಗುತ್ತದೆ. ಆಯುರ್ವೆದ ಇದಕ್ಕೆ ಆಸ್ಪದ ಕೊಡಲಿಲ್ಲ.

ವಿವರಿಸಲಾದ ಪ್ರತಿಯೊಂದು ದ್ರವ್ಯದ ರಸ, ಗುಣ, ವೀರ್ಯ, ವಿಪಾಕ, ಪ್ರಭಾವಗಳನ್ನಂತೂ ಹೇಗೂ ನಿರ್ದಿಷ್ಟವಾಗಿ ಹೇಳಿದೆ. ಪಂಚಮಹಾಭೂತ, ವಾತಾದಿ ದೋಷ ಹಾಗೂ ಶರೀರಪ್ರಕೃತಿಯ ಮೇಲಿನ ಪರಿಣಾಮಗಳನ್ನು ಸ್ಪಷ್ಟವಾಗಿ ಹೇಳಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ದೇಹದ ಮೇಲೆ ಅದರ ಪರಿಣಾಮವೇನು, ಯಾವ ರೋಗ ಉಂಟುಮಾಡುತ್ತದೆ, ಯಾವೆಲ್ಲ ರೋಗ ಗುಣಪಡಿಸುತ್ತದೆ ಎಂಬ ನಿಖರ ಹಾಗೂ ನಿರ್ದಿಷ್ಟವಾದ ಜ್ಞಾನವನ್ನು ನೀಡಿರುವುದು ಮಾನವರಿಗೆ ಸಾರ್ವಕಾಲಿಕ ಕೊಡುಗೆ. ಇದನ್ನೇ ‘ದ್ರವ್ಯ ಗುಣ ಕರ್ಮ ವಿಜ್ಞಾನ’ ಎನ್ನುವುದು.

ಇಲ್ಲಿರುವುದು ದ್ರವ್ಯದ ಕರ್ಮಗಳ ವೈಜ್ಞಾನಿಕ ಅನಾವರಣ. ಸಸ್ಯದ ಪ್ರತಿಯೊಂದು ಅಂಗವನ್ನು ಯಾವ ಸ್ವರೂಪದಲ್ಲಿ ಸೇವಿಸಿದರೆ ಶರೀರದಲ್ಲಿ ಏನೆಲ್ಲಾ ಕಾರ್ಯಗಳಾಗುತ್ತವೆ, ದೋಷಗಳ ಮೇಲೇನು ಪರಿಣಾಮ, ಧಾತುಗಳಲ್ಲಿ ಉಂಟಾಗುವ ಬದಲಾವಣೆ, ಮಲಮೂತ್ರಾದಿ ಪ್ರಕ್ರಿಯೆ ಏನಾಗುತ್ತದೆ ಎಂಬ ವಿಶಿಷ್ಟ ತಿಳಿವಳಿಕೆ ದಾಖಲಿಸಲ್ಪಟ್ಟಿದೆ. ವಿಶೇಷತೆ ಇಲ್ಲಿಗೇ ಕೊನೆಯಾಗುವುದಿಲ್ಲ. ಎಲ್ಲವನ್ನೂ ಕ್ರೋಢೀಕರಿಸಿದರೆ ಇಂತಹ ಲಕ್ಷಾಂತರ ದ್ರವ್ಯಕರ್ಮಗಳನ್ನು ಆಯುರ್ವೆದ ಗ್ರಂಥಗಳಲ್ಲಿ ಹೇಳಲಾಗಿದ್ದು ಅವುಗಳಲ್ಲಿ ಅವುಗಳಲ್ಲಿ ಒಂದೇ ಒಂದು ಅಂಶ ತಪ್ಪಾಗಿದೆ ಎಂದು ಇಲ್ಲಿಯ ತನಕ ಸಾಬೀತುಮಾಡಲು ಸಾಧ್ಯವಾಗಿಲ್ಲ! ಸತ್ಯವೇ ನಿತ್ಯ, ಸತ್ಯವೇ ಶಾಶ್ವತ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...