More

    ಬೊಜ್ಜು ಕಡಿಮೆ ಮಾಡಿಕೊಳ್ಳಲು ಸಾಧ್ಯವೇ?

    ಇಂದು ಸಾಮಾನ್ಯವಾಗಿ ಕಂಡುಬರುತ್ತಿರುವ ತೊಂದರೆ ಬೊಜ್ಜು. ಕೇವಲ ಒಂದೇ ಒಂದು ಚಪಾತಿ ತಿಂದರೂ ಅದು 5-6 ಕಿ.ಮಿ ನಡೆಯುವಷ್ಟು ಕ್ಯಾಲೋರಿಯನ್ನು ನೀಡುತ್ತದೆ. ಒಂದನೇ ಚಪಾತಿ/ರೊಟ್ಟಿ ನಮ್ಮ ದೇಹದಲ್ಲಿ ಶಕ್ತಿಯಾಗಿ ಮಾರ್ಪಾಡಾಗುತ್ತದೆ. ಇದು ಆವಶ್ಯಕ. ಆದರೆ ನಾಳೆ ಉಪವಾಸವಿದ್ದರೆ ಬೇಕು ಎಂದು ದೇಹ ಭಾವಿಸಿಕೊಂಡು ಎರಡನೇ ಚಪಾತಿ/ರೊಟ್ಟಿಯನ್ನು ಕೊಬ್ಬಾಗಿ ಮಾರ್ಪಡಿಸುತ್ತದೆ. ಇದು ಶೇಖರಣೆಯಾಗುತ್ತ ಮುಂದೊಂದು ದಿನ ಬೊಜ್ಜು ಬರುತ್ತದೆ. ನಾವು ಹೆಚ್ಚು ಸೇವಿಸುತ್ತಿರುವ ಕಾಬೋಹೈಡ್ರೇಟ್​ಗಳು ಪ್ರಮುಖವಾಗಿ ಬೊಜ್ಜಿಗೆ ಕಾರಣ. ಹೆಚ್ಚಾದ ಕಾಬೋಹೈಡ್ರೇಟ್​ಗಳು ದೇಹದಲ್ಲಿ ಕೆಟ್ಟ ಕೊಬ್ಬಾಗಿ ಪರಿವರ್ತನೆಗೊಂಡು ಬೊಜ್ಜು ಬರುತ್ತಿದೆ.

    ಬೊಜ್ಜು ಕಡಿಮೆ ಮಾಡಿಕೊಳ್ಳಲು ಸಾಧ್ಯವೇ?ಪೋಷಕಾಂಶಯುಕ್ತ ಹಾಗೂ ಉತ್ತಮ ಕೊಬ್ಬು ಹೆಚ್ಚಿರುವ ಆಹಾರವನ್ನು ತೆಗೆದುಕೊಳ್ಳಬೇಕು. ಹಸಿವನ್ನು ಪದೇಪದೆ ಹೆಚ್ಚಿಸುವ ಆಹಾರವನ್ನು ತೆಗೆದುಕೊಳ್ಳಬಾರದು. ಹೆಚ್ಚು ನಟ್ಸ್ ಸೇವಿಸಬೇಕು. ಒಂದು ಬಾರಿ ಹೊಟ್ಟೆ ತುಂಬಿದ ನಂತರ 5-6 ಗಂಟೆಗಳ ಕಾಲ ಇದು ಹಸಿವನ್ನು ತಡೆಯುತ್ತದೆ. ಆದರೆ ಕಾಬೋಹೈಡ್ರೇಟ್​ಗಳು (ಅನ್ನ, ಚಪಾತಿ, ರೊಟ್ಟಿ ಇತ್ಯಾದಿ) ಹಸಿವನ್ನು ಪದೇಪದೆ ಹೆಚ್ಚು ಮಾಡುವುದಲ್ಲದೆ ದೇಹಕ್ಕೆ ಹೆಚ್ಚಿನ ಕ್ಯಾಲೋರಿಯನ್ನೂ ನೀಡುತ್ತವೆ. ತುಪ್ಪ, ಬೆಣ್ಣೆ, ಇಂಥವು ಒಳ್ಳೆಯ ಕೊಬ್ಬು ದೇಹದಲ್ಲಿ ಉತ್ಪಾದನೆಯಾಗಲು ಕಾರಣ. ಕೆಟ್ಟ ಕೊಬ್ಬನ್ನು ಕರಗಿಸಲು ಸಹಕಾರಿ. ಹೆಚ್ಚು ನಾರಿನಾಂಶಯುಕ್ತ ಆಹಾರ ಬಹಳ ಸಹಕಾರಿ. ತೂಕವನ್ನು ಕ್ರಮಬದ್ಧವಾಗಿ ಕಡಿಮೆ ಮಾಡಲು ಗ್ರೀನ್ ಟೀ ಉಪಯುಕ್ತ. ಕಾಲು ಲೀಟರ್ ನೀರನ್ನು ಕುದಿಯಲು ಬಿಡಿ. ಈಗ ಪಾತ್ರೆಯನ್ನು ಕೆಳಗಡೆ ಇಳಿಸಿ ಒಂದು ಚಮಚ ಗ್ರೀನ್ ಟೀ ಎಲೆಗಳನ್ನು ಹಾಕಿ, ಮೂರು ನಿಮಿಷದ ನಂತರ ಇದಕ್ಕೆ ನಿಂಬೆರಸ ಹಾಗೂ ಬೆಲ್ಲ ಹಾಕಿ ಆಹಾರಸೇವನೆಗಿಂತ ಮೊದಲು ದಿನಕ್ಕೆ 3 ಬಾರಿ ಕುಡಿಯರಿ.

    ಇಂದು ಆರೋಗ್ಯಕ್ಷೇತ್ರದಲ್ಲಿ ಆಪಲ್ ಸಿಡರ್ ವಿನೆಗರ್ ಜನಪ್ರಿಯ. ಇದು ಕರುಳಿನಲ್ಲಿ ಉತ್ತಮ ಸೂಕ್ಷ್ಮಾಣುಜೀವಿಗಳ ವರ್ಧನೆಗೆ ಉಪಯುಕ್ತ ವಾತಾವರಣ ನಿರ್ವಿುಸುತ್ತದೆ. ಪ್ರತಿನಿತ್ಯ ಆಹಾರಕ್ಕಿಂತ ಮೊದಲು ಒಂದು ಗ್ಲಾಸ್ ನೀರಿಗೆ 1-2 ಚಮಚ ಆಪಲ್ ಸಿಡರ್ ವಿನೆಗರ್ ಸೇರಿಸಿ ಕುಡಿಯುತ್ತ ಬಂದಲ್ಲಿ ತೂಕ ಹಾಗೂ ಹೈಪರ್ ಅಸಿಡಿಟಿ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ. ನಟ್ಸ್ ಸೇವನೆ ಒಳ್ಳೆಯದು. ಇದರಿಂದ ತಿಂಗಳಿಗೆ ಮೂರು ಕೆ.ಜಿ. ತೂಕ ಕಡಿಮೆ ಮಾಡಿಕೊಳ್ಳಬಹುದು. ವ್ಯವಸ್ಥಿತ ವ್ಯಾಯಾಮ, ಪ್ರತಿನಿತ್ಯ ವೇಗವಾಗಿ 21 ಸೂರ್ಯನಮಸ್ಕಾರ ಮಾಡುವುದು ಸಹಕಾರಿ. ರಾತ್ರಿ ಊಟದ ಬದಲಾಗಿ ಹಣ್ಣುಗಳು, ಸೊಪ್ಪು, ತರಕಾರಿಗಳು, ನಟ್ಸ್, ಸಲಾಡ್, ಬೇಯಿಸಿದ ತರಕಾರಿಗಳು, ಮೊಳಕೆಕಾಳುಗಳನ್ನು ಸೇವಿಸುವುದು ಉತ್ತಮ. ಅಂತೆಯೇ ಮಾಂಸಾಹಾರಿಗಳು ಬೇಯಿಸಿದ ಚಿಕನ್, ಮೊಟ್ಟೆ, ಮೀನನ್ನು ತೆಗೆದುಕೊಳ್ಳಬಹುದು. ಆದರೆ ಕರಿದ ಮಾಂಸಾಹಾರ ಒಳ್ಳೆಯದಲ್ಲ. ಹೀಗೆ ತೂಕ ನಿರ್ವಹಣೆಗೆ ವ್ಯವಸ್ಥಿತ ಆಹಾರಪದ್ಧತಿ ಅಡಿಪಾಯ. ಸರಿಯಾದ ವ್ಯಾಯಾಮ ಕಂಬದಂತೆ ಹಾಗೂ ಆಹಾರೌಷಧಗಳು ಮೇಲ್ಚಾವಣಿಯಂತೆ ಕೆಲಸ ಮಾಡಿ ಆರೋಗ್ಯಕರ ತೂಕದ ಆರೋಗ್ಯಸೌಧ ಹೊಂದಲು ದೇಹಕ್ಕೆ ಅನುವು ಮಾಡಿಕೊಡುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts