More

    ವಯಸ್ಸಾಗುವ ವಿಧಾನ

    ನೂರ್ಕಾಲ ಚೆನ್ನಾಗಿ ಬಾಳಿ’ ಎಂಬುದಾಗಿ ಹಿಂದಿನ ಕಾಲದಲ್ಲಿ ಹಿರಿಯರು ಹಾಗೇ ಸುಖಾಸುಮ್ಮನೆ ಭಾವರಹಿತವಾಗಿ ಹರಸುತ್ತಿದ್ದುದಲ್ಲ. ಏಕೆಂದರೆ ನೂರು ವಸಂತಗಳ ಕಾಲ ಚೆನ್ನಾಗಿ ಬದುಕುವ ಕಲೆ ನಮ್ಮ ಪೂರ್ವಜರಿಗೆ ಕರಗತವಾಗಿತ್ತು. ಕೈಕಾಲು ಗಟ್ಟಿಯಾಗಿದ್ದು ಯಾರ ಹಂಗೂ ಇಲ್ಲದೆ ಕೊನೆಯ ಉಸಿರಿನ ತನಕ ಬಾಳಬೇಕೆಂಬ ಆಗ್ರಹಪೂರ್ವಕ ಆಶಯವನ್ನೂ ಅವರು ಹೊಂದಿರುತ್ತಿದ್ದರು. ಅದರಂತೆ ಬದುಕುವುದು ಅವರಿಗೆ ಸಾಧ್ಯವೂ ಆಗಿತ್ತು. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ಮರುಕವಾಗುತ್ತದೆ. ಪ್ರಾಯ ಮೂವತ್ತು ದಾಟಿತೆಂದರೆ ಸಾಕು, ಒಂದಿಲ್ಲೊಂದು ಕಾಯಿಲೆಗಳು ಎಡತಾಕಲು ಆರಂಭವಾಗುತ್ತದೆ. ಅದೇ ವಂಶವಾಹಿ, ಅದೇ ಪರಂಪರೆ. ಹಾಗಿದ್ದೂ ದೇಹವೇಕೆ ಗಟ್ಟಿಮುಟ್ಟಾಗಿ ಬಾಳುವ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂಬುದು ಜಿಜ್ಞಾಸೆಗೆ ಒಳಪಡಿಸಬೇಕಾದ ವಿಷಯ.

    ವಯಸ್ಸಾಗುವ ವಿಧಾನಹಿಂದೆ ಇಷ್ಟೊಂದು ಕೃತಕ ರಾಸಾಯನಿಕಗಳ ಹಾವಳಿ ಇರಲಿಲ್ಲ. ತಿನ್ನುವ ಹಣ್ಣು, ತರಕಾರಿ, ಧಾನ್ಯಗಳಿಗೂ ರಾಸಾಯನಿಕಗಳ ಸಿಂಪಡಿಕೆ ಮಾಡುತ್ತಿರಲಿಲ್ಲ. ಹಾಲಿನ ಉತ್ಪನ್ನಗಳ ಮೇಲೆ ಹಾಮೋನುಗಳ ಆಟವಿರಲಿಲ್ಲ. ವಾತಾವರಣವೂ ಕಲುಷಿತವಾಗಿರಲಿಲ್ಲ. ಇವೆಲ್ಲಕ್ಕಿಂತ ಮಿಗಿಲಾಗಿ ಮನಸ್ಸು ಇಷ್ಟೊಂದು ಕೆಟ್ಟಿರಲಿಲ್ಲ.

    ಆಯುರ್ವೆದ ದೇಹದ ಭಾಗಗಳಿಗೆ ವಯಸ್ಸಾಗುವ ಪರಿಯನ್ನು ವಿಮಶಿಸಿದ್ದನ್ನು ಗಮನಿಸಿದರೆ ಮನಸ್ಸಿನಲ್ಲಿ ಪುಳಕವಾಗುತ್ತದೆ. ಆರು ತಿಂಗಳ ತನಕ ತಾಯಿಯ ಹಾಲು ಮಾತ್ರ ಸೇವಿಸುವ ಕ್ಷೀರಪ, ಎರಡು ವರ್ಷದ ತನಕ ಕ್ಷೀರಾನ್ನಾದ, ಬಳಿಕ ಅನ್ನಾದ-ಶಿಶುವಿನ ವಯಸ್ಸಿನ ವಿಭಾಗಗಳು. ಆ ಬಳಿಕ ಹತ್ತು ವಯಸ್ಸಿನವರೆಗೆ ಎಲ್ಲ ಧಾತುಗಳು, ಅಂಗಾಂಗಗಳು ಪುಷ್ಟಿಗೊಳ್ಳುವ ಕಾಲ. ಅದನ್ನು ಬಲ್ಯಮ್ ಎಂದು ಗ್ರಂಥಗಳಲ್ಲಿ ಹೆಸರಿಸಿದರು. ಇಪ್ಪತ್ತರ ತನಕ ವೃದ್ಧಿ. ಮೂವತ್ತರ ತನಕ ಶರೀರ ಕಳೆಗಟ್ಟುವ ಕಾಲ-ಪ್ರಭಾ. ಬಳಿಕ ನಲವತ್ತರವರೆಗೆ ಬುದ್ಧಿಯ ಮತ್ತಷ್ಟು ವಿಕಸನ – ಮೇಧ. ಈ ನಲವತ್ತರ ಹೊತ್ತಿಗೆ ಸಂಪೂರ್ಣತೆಯ ಪ್ರಾಪ್ತಿ! ಆ ಬಳಿಕ ಹಾನಿಯ ಆರಂಭ! ಮೊಟ್ಟಮೊದಲು ವಯಸ್ಸಾಗಲು ಆರಂಭವಾಗುವುದು ಚರ್ಮಕ್ಕೆ. ತ್ವಚೆಯನ್ನು ಐವತ್ತು ವಯಸ್ಸಿನವರೆಗೆ ಕಾಂತಿಯುತವಾಗಿ ಕಾಪಾಡಿಕೊಳ್ಳಬಹುದು. ಅರವತ್ತರ ಹೊತ್ತಿಗೆ ಶುಕ್ರದ ಶಕ್ತಿಗುಂದುವುದು. ಹಾಗಾಗಿ ಇಂದಿನಂತೆ ನಲವತ್ತು ವರ್ಷ ವಯಸ್ಸಿನಲ್ಲೇ ಸಂತಾನಶಕ್ತಿ ಕಡಿಮೆಯಾಗಿರುತ್ತಿರಲಿಲ್ಲ. ಎಪ್ಪತ್ತು ತಲುಪುವಾಗ ಶರೀರದ ವಿಕ್ರಮವೂ ಇಳಿಮುಖವಾಗಿ ದೃಷ್ಟಿ ಬಾಧಿಸಲ್ಪಡುತ್ತದೆ. ಎಲ್ಲಿಯ ಚಾಲೀಸ್, ಎಲ್ಲಿಯ ಸತ್ತರ್! ಎಂಬತ್ತು ವರ್ಷವಾದಾಗ ಕಿವಿಯು ಬಲಹೀನವಾಗುವುದು. ಬುದ್ಧಿಶಕ್ತಿಯೂ ನಶಿಸಲು ಆರಂಭವಾಗುವುದು. ಕೆಲಸದಿಂದ ನಿವೃತ್ತಿಗೆ ಯೋಗ್ಯ ಕಾಲ ಅಂದು ಅರವತ್ತಲ್ಲ, ಎಂಬತ್ತು!! ತೊಂಬತ್ತು ತಲುಪಿದಾಗ ಮನಸ್ಸು ದುರ್ಬಲವಾಗುತ್ತದೆ. ತೊಂಬತ್ತರ ನಂತರ ಅರಳುಮರುಳು ಎಂಬ ಮಾತಿರುವುದು ಇದಕ್ಕಾಗಿಯೇ ಇರಬೇಕು! ಕಮೇಂದ್ರಿಯಗಳೂ ದುರ್ಬಲವಾಗುತ್ತವೆ. ನೂರರ ಹೊತ್ತಿಗೆ ಸ್ಪರ್ಶಜ್ಞಾನವೂ ಇಲ್ಲದಾಗಿ ಜೀವಿತ ಪೂರ್ಣಗೊಳ್ಳುತ್ತದೆ. ಆದರಿಂದು ಎಪ್ಪತ್ತು ವರ್ಷ ಬದುಕಿದರೆ ಅದೇ ಹೆಚ್ಚೆಂಬ ಭಾವನೆ ಮಡುಗಟ್ಟುತ್ತಿದೆ. ನೂರರ ಮಾತು ದೂರದ ಮಾತು ಎಂಬಂತಾಗಿದೆ!

    ಪಂಚಸೂತ್ರಗಳು

    ಬಾದಾಮಿ: ಗಂಟಲುನೋವು ನಿವಾರಕ.

    ಕರಿಬೇವು: ಹೊಟ್ಟೆಯುಬ್ಬರ ಶಮನಕಾರಿ.

    ಪುದಿನ ಸೊಪ್ಪು: ಹೃದಯಕ್ಕೆ ಶಕ್ತಿದಾಯಕ.

    ಸೀಬೆಹಣ್ಣು: ಮೂತ್ರಪಿಂಡದ ಸೋಂಕು ನಿವಾರಕ.

    ಬಾಗೆಮರದ ತೊಗಟೆ: ಒಸಡಿನ ರೋಗ ಗುಣಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts