ನವದೆಹಲಿ: ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ನೃತ್ಯ ಸಂಯೋಜಕಿ ಧನಶ್ರೀ ವರ್ಮ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರು ಕಳೆದ ಕೆಲ ಸಮಯದಿಂದ ಆಪ್ತವಾಗಿದ್ದರೂ, ತಮ್ಮಿಬ್ಬರ ಸಂಬಂಧದ ಬಗ್ಗೆ ಎಲ್ಲೂ ಸೀಕ್ರೆಟ್ ಬಿಟ್ಟುಕೊಟ್ಟಿರಲಿಲ್ಲ. ಇನ್ಸ್ಟಾಗ್ರಾಂನಲ್ಲಿ ವಿವಿಧ ಡ್ಯಾನ್ಸ್ ವಿಡಿಯೋಗಳ ಮೂಲಕವೂ ಗಮನಸೆಳೆಯುತ್ತಿದ್ದ ಚಾಹಲ್ ಅವರ ನೃತ್ಯದ ಹಿಂದೆ ಧನಶ್ರೀ ಅವರೇ ಕೋರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ಧನಶ್ರೀ ಅವರ ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಲಭಿಸಿರುವ ಮಾಹಿತಿಯ ಪ್ರಕಾರ, ಚಾಹಲ್ ಅವರ ಡ್ಯಾನ್ಸ್ ವಿಡಿಯೋಗಳಲ್ಲಿ ಧನಶ್ರೀ ಅವರ ನೃತ್ಯ ಸಂಯೋಜನೆ ಕೆಲಸ ಮಾಡಿದೆ. ಚಾಹಲ್ ಈ ಮುನ್ನ ಸಲ್ಮಾನ್ ಖಾನ್ ಅವರ ಜನಪ್ರಿಯ ‘ಸ್ಲೋ ಮೋಷನ್’ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಪ್ರಕಟಿಸಿದ್ದರು. ಸಾಕಷ್ಟು ವೈರಲ್ ಆಗಿದ್ದ ಅವರ ಈ ಡ್ಯಾನ್ಸ್ಗೆ ಧನಶ್ರೀ ಅವರೇ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಎಂಗೇಜ್ ಆದ ಚಾಹಲ್ಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ ಸೆಹ್ವಾಗ್, ರೋಹಿತ್ ಶರ್ಮ
‘ನಾನು ನಿಮ್ಮ ನೃತ್ಯದ ಟೀಚರ್ ಆಗಿ ಹೇಳುತ್ತಿದ್ದೇನೆ, ನಿಮ್ಮ ವಿಕೆಟ್ ನಾನು ತೆಗೆದುಕೊಳ್ಳಲಾರೆ. ಚಾಹಲ್ ನೀವು ಅತ್ಯಂತ ಮನರಂಜನೆ ಒದಗಿಸುವ ವಿದ್ಯಾರ್ಥಿಯಾಗಿದ್ದೀರಿ ಮತ್ತು ಅಮೋಘ ವ್ಯಕ್ತಿಯಾಗಿದ್ದೀರಿ. ಎಡಗೈ ಲೆಗ್ ಸ್ಪಿನ್ನರ್ನ ಸ್ಲೋ ಮೋಷನ್ ಅನುಭವವಿದು’ ಎಂದು ಧನಶ್ರೀ ಅವರು ಚಾಹಲ್ರ ಜನ್ಮದಿನದಂದು ಮಾಡಿದ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
https://www.instagram.com/p/CC-ySoTlk52/?utm_source=ig_web_copy_link
ತಮ್ಮ ನೃತ್ಯದ ವಿಡಿಯೋಗಳನ್ನು ಯುಟ್ಯೂಬ್ನಲ್ಲಿ ಪ್ರಕಟಿಸಿ ಈಗಾಗಲೆ ಸಾಕಷ್ಟು ಜನಪ್ರಿಯರಾಗಿರುವ ಧನಶ್ರೀ ವರ್ಮ, ತಮ್ಮದೇ ಡ್ಯಾನ್ಸ್ ತಂಡವನ್ನೂ ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲೂ 5 ಲಕ್ಷ ಅನುಯಾಯಿಗಳನ್ನು ಹೊಂದಿರುವ ಧನಶ್ರೀ, ವಿವಿಧ ಡ್ಯಾನ್ಸ್ ವಿಡಿಯೋಗಳ ಮೂಲಕ ಸಾಕಷ್ಟು ಗಮನಸೆಳೆದಿದ್ದಾರೆ. ವೆಡ್ಡಿಂಗ್ ಕೋರಿಯೋಗ್ರಾಫರ್ ಆಗಿಯೂ ಧನಶ್ರೀ ಸಾಕಷ್ಟು ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ.
https://www.instagram.com/p/CCiKrsZFBsl/?utm_source=ig_web_copy_link
https://www.instagram.com/p/CCdbtDVl_G4/?utm_source=ig_web_copy_link
https://www.instagram.com/p/CAzmTPbFbkR/?utm_source=ig_web_copy_link
https://www.instagram.com/tv/CAcjMQflKJ0/?utm_source=ig_web_copy_link
https://www.instagram.com/tv/CAHpw_2FPN0/?utm_source=ig_web_copy_link
https://www.instagram.com/p/B_WzoaMFa13/?utm_source=ig_web_copy_link
https://www.instagram.com/p/B-eo-AnFgFr/?utm_source=ig_web_copy_link
https://www.instagram.com/p/CDWF5O5l5qy/?utm_source=ig_web_copy_link
https://www.instagram.com/p/CC8X0R5lqTC/?utm_source=ig_web_copy_link
https://www.instagram.com/p/CCs3CiWlS1G/?utm_source=ig_web_copy_link