ಢಾಕಾಗೆ ಹೊರಟಿದ್ದ ಬಾಂಗ್ಲಾ ವಿಮಾನ ಹೈಜಾಕ್​ಗೆ ಯತ್ನ: ತುರ್ತು ಭೂಸ್ಪರ್ಶ

ಢಾಕಾ: ಬಾಂಗ್ಲಾದೇಶದ ಬಿಮಾನ್​ ಏರ್​ಲೈನ್ಸ್​ನ ವಿಮಾನವನ್ನು ಹೈಜಾಕ್​ ಮಾಡಲು ಯತ್ನಿಸಿದ ಕಾರಣ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಬಾಂಗ್ಲಾದೇಶದ ಮಾಧ್ಯಮಗಳ ಮಾಹಿತಿಯ ಅನ್ವಯ ಬಿಜಿ 147 ವಿಮಾನ ದುಬೈನಿಂದ ಢಾಕಾಗೆ ಪ್ರಯಾಣ ಮಾಡುತ್ತಿತ್ತು. ಅದರಲ್ಲಿದ್ದ ಒಬ್ಬ ಗನ್​ಮ್ಯಾನ್​ ಕಾಕ್​ಪಿಟ್​ಗೆ ತೆರಳಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ ಕಾರಣ ಚಿತ್ತಗಾಂಗ್​ನ ಶಾ ಅಮಾನತ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್​ ಮಾಡಲಾಗಿದೆ.

ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗುತ್ತಿದ್ದಂತೆ ಅಧಿಕಾರಿಗಳು ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಇಳಿಸಲಾಗಿದೆ. ಆದರೆ ಆ ಗನ್​ಮ್ಯಾನ್​ ಹಾಗೂ ಇಬ್ಬರು ವಿಮಾನ ಸಿಬ್ಬಂದಿ ಇನ್ನೂ ಪ್ಲೇನ್​ನೊಳಗೇ ಇದ್ದಾರೆ ಎಂದು ಮಾಹಿತಿ ಸಿಕ್ಕಿದೆ.