Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಡಿಜಿಲಾಕರ್ ದಾಖಲೆಗಳಿಗೆ ಮಾನ್ಯತೆ

Saturday, 11.08.2018, 3:04 AM       No Comments

ಬೆಂಗಳೂರು: ಡಿಜಿಲಾಕರ್ ಆಪ್ ಹಾಗೂ ಎಂ. ಪರಿವಾಹನ್ ಆಪ್​ನಲ್ಲಿರುವ ಡಿಜಿಟಲ್ ಮಾದರಿಯ ಚಾಲನಾ ಪರವಾನಗಿ ಪತ್ರ (ಡಿಎಲ್), ನೋಂದಣಿ ಪ್ರಮಾಣ ಪತ್ರ (ಆರ್​ಸಿ) ಹಾಗೂ ಇನ್ನಿತರೆ ದಾಖಲೆಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಅಧಿಕೃತ ದಾಖಲೆ ಎಂದೇ ಪರಿಗಣಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಖಡಕ್ ಆಗಿ ಆದೇಶಿಸಿದೆ.

ಡಿಜಿಲಾಕರ್ ಮತ್ತು ಎಂಪರಿವಾಹನ್ ಆಪ್​ಗಳಲ್ಲಿ ಲಭ್ಯವಾಗುವ ಡಿಜಿಟಲ್ ದಾಖಲೆಗಳನ್ನು ಸಂಚಾರ ಪೊಲೀಸರು ಒಪ್ಪಿಕೊಳ್ಳುತ್ತಿಲ್ಲ ಎಂದು ಹಲವು ರಾಜ್ಯದ ಜನರು ದೂರು ಮತ್ತು ಆರ್​ಟಿಐ ಸಲ್ಲಿಸಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಟ್ರಾಫಿಕ್ ಡಿಜಿಪಿ, ಎಡಿಜಿಪಿ, ಸಾರಿಗೆ ಆಯುಕ್ತರಿಗೆ ಸಚಿವಾಲಯ ಸುತ್ತೋಲೆ ಮುಖೇನ ಈ ಸೂಚನೆ ನೀಡಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅನ್ವಯ ಡಿಜಿಲಾಕರ್ ಮತ್ತು ಎಂ. ಪರಿವಾಹನ್ ಆಪ್​ನಲ್ಲಿ ಲಭ್ಯವಿರುವ ಡಿಜಿಟಲ್ ಮಾದರಿಯ ಎಲ್ಲ ದಾಖಲೆಗಳು, ಕಾಗದ ರೂಪದಲ್ಲಿ ಅಥವಾ ಸ್ಮಾರ್ಟ್​ಕಾರ್ಡ್ ರೂಪದಲ್ಲಿರುವ ನೈಜ ದಾಖಲೆಗಳಿಗೆ ಸಮವಾಗಿದೆ. ಈ ಡಿಜಿಟಲ್ ದಾಖಲೆಗಳನ್ನು ವಾಹನ ತಪಾಸಣೆ ಸಂದರ್ಭದಲ್ಲಿ ಮಾನ್ಯ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.

ದಾಖಲೆ ಜಪ್ತಿ ಅಗತ್ಯವಿಲ್ಲ!: ವಾಹನ ಚಾಲಕರು ಕೆಲ ಸಂಚಾರ ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ಸಂಚಾರ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಜಪ್ತಿ ಮಾಡುತ್ತಾರೆ. ಕುಡಿದು ಚಾಲನೆ ಮಾಡಿದ ಸಂದರ್ಭದಲ್ಲಿ ಹಾಗೂ ಅಜಾಗರೂಕತೆಯ ಚಾಲನೆ ಸಂದರ್ಭದಲ್ಲಿ ಡಿಎಲ್ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ಅಗತ್ಯತೆಯೂ ಇಲ್ಲ. ನಿಯಮ ಉಲ್ಲಂಘಿಸಿ ಡಿಜಿಟಲ್ ದಾಖಲೆ ತೋರಿಸಿದರೆ ಇ-ಚಲನ್ ವ್ಯವಸ್ಥೆಯ ವಾಹನ್ ಅಥವಾ ಸಾರಥಿ 4 ಮೂಲಕ ಡಿಜಿಟಲ್ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ ಎಂದು ಪೊಲೀಸರಿಗೆ ಸಚಿವಾಲಯ ಸೂಚಿಸಿದೆ.

ವಿಮೆ ಪತ್ರವೂ ಡಿಜಿಟಲ್ ರೂಪದಲ್ಲಿ ಲಭ್ಯ: ಹೊಸ ವಾಹನಗಳಿಗೆ ವಿಮೆ ಮತ್ತು ವಿಮೆ ನವೀಕರಣದ ದಾಖಲೆಗಳನ್ನೂ ಇನ್ಶೂರೆನ್ಸ್ ಇನ್ಪಮೇಷನ್ ಬೋರ್ಡ್ (ಐಐಬಿ) ಪ್ರತಿ ನಿತ್ಯ ವಾಹನ್ ಡೇಟಾಬೇಸ್​ಗೆ ಅಪ್​ಲೋಡ್ ಮಾಡುತ್ತಿದೆ. ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಎಂಪರಿವಾಹನ್ ಹಾಗೂ ಇ-ಚಲನ್ ಆಪ್​ನಲ್ಲೂ ಇದೀಗ ವಿಮೆ ಪತ್ರಗಳು ಡಿಜಿಟಲ್ ರೂಪದಲ್ಲಿ ಲಭ್ಯವಿದೆ. ಹೀಗಾಗಿ ತಪಾಸಣೆ ಸಂದರ್ಭದಲ್ಲಿ ವಾಹನ ಚಾಲಕರ ಕೈಯಲ್ಲಿ ಆಪ್​ನಲ್ಲಿರುವ ಡಿಜಿಟಲ್ ಮಾದರಿ ವಿಮಾ ಪತ್ರವಿದ್ದರೂ ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.

44 ಸಾವಿರ ಡಿಜಿಟಲ್ ದಾಖಲೆ ಡೌನ್​ಲೋಡ್

ಡಿಜಿಲಾಕರ್ ಆಪ್​ನಲ್ಲಿರುವ ಡಿಜಿಟಲ್ ದಾಖಲೆಗಳಿಗೆ ಮಾನ್ಯತೆ ನೀಡಿ 2018ರ ಫೆಬ್ರವರಿಯಲ್ಲಿ ಕರ್ನಾಟಕದ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಕೇವಲ 4 ತಿಂಗಳಲ್ಲಿ 14,088 ನೋಂದಣಿ ಪತ್ರ (ಆರ್​ಸಿ), 18,733 ಚಾಲನಾ ಪರವಾನಗಿ (ಡಿಎಲ್) ಹಾಗೂ 11,694 ಮಾಲಿನ್ಯ ಪ್ರಮಾಣಪತ್ರ ಹೀಗೆ ಒಟ್ಟಾರೆ 44 ಸಾವಿರ ಡಿಜಿಟಲ್ ದಾಖಲೆಗಳನ್ನು ಜನ ಆಪ್ ಮುಖಾಂತರ ಡೌನ್​ಲೋಡ್ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top