More

    ದೇಯಿ ಬೈದೆತಿ ಮುಡಿಗೆ 3 ಪ್ರಶಸ್ತಿ

    ಮಂಗಳೂರು: ಕಳೆದ ಏಪ್ರಿಲ್‌ನಲ್ಲಿ ತುಳುನಾಡಿನಾದ್ಯಂತ ತೆರೆಕಂಡ ದೇಯಿ ಬೈದೆತಿ ತುಳು ಸಿನಿಮಾ ಒಟ್ಟು ಮೂರು ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿದೆ. 2018ನೇ ಸಾಲಿನ ಉತ್ತಮ ಪ್ರಾದೇಶಿಕ ಭಾಷಾ, ಉತ್ತಮ ಪ್ರಾದೇಶಿಕ ಭಾಷಾ ನಿರ್ದೇಶಕ ಹಾಗೂ ಚಿತ್ರದ ಹಾಡಿಗೆ ಅತ್ಯುತ್ತಮ ಗಾಯಕಿ ಗೌರವ ಲಭಿಸಿದೆ.
    ತುಳುನಾಡಿನ ಅವಳಿ ವೀರರಾದ ಕೋಟಿ- ಚೆನ್ನಯರ ತಾಯಿ ದೇಯಿ ಬೈದೆತಿ ಕುರಿತು ಸೂರ್ಯೋದಯ್ ಪೆರಂಪಳ್ಳಿ ನಿರ್ಮಾಣ, ನಿರ್ದೇಶನದಲ್ಲಿ ತೆರೆಕಂಡ ‘ದೇಯಿ ಬೈದೆತಿ’ ಸಿನಿಮಾ ಕಲಾತ್ಮಕವಾಗಿ ವಿಭಿನ್ನವಾಗಿ ಮೂಡಿಬಂದಿದ್ದು, ಒಂದು ವರ್ಗದ ಪ್ರೇಕ್ಷಕ ವರ್ಗ ಸಿನಿಮಾಕ್ಕೆ ಫಿದಾ ಆಗಿದ್ದರು. ಸುಮಾರು 450 ವರ್ಷಗಳ ಹಿಂದೆ ಓರ್ವ ಮಹಿಳೆ ತನ್ನ ನಾಡಿಗೋಸ್ಕರ ಯಾವ ರೀತಿ ಜೀವ ಬಲಿದಾನ ಮಾಡುತ್ತಾಳೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದರು ನಿರ್ದೇಶಕರು. ಒಂದೇ ತುಳು ಸಿನಿಮಾ ಮೂರು ಗೌರವಕ್ಕೆ ಪಾತ್ರವಾಗಿರುವುದು ಇದೇ ಮೊದಲು.

    ಮೊದಲ ಸಿನಿಮಾಕ್ಕೆ ಗರಿ: ಕಲಾವತಿ ದಯಾನಂದ್ ಹಾಡಿದ ಮೊದಲ ಸಿನಿಮಾಕ್ಕೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿದೆ. ಸಿನಿಮಾದಲ್ಲಿ ಹಾಡಿದ ಗೆಜ್ಜೆಗಿರಿ ನಂದನೊಡು ದೇಯಿ ಉಲ್ಲಲ್‌ಯೆ ಹಾಡಿಗೆ ಈ ಗೌರವ ಸಂದಿದೆ. ಭಾಸ್ಕರ್ ರಾವ್ ಬಿ.ಸಿ.ರೋಡ್ ಸಂಗೀತ ಸಂಯೋಜನೆ ಮಾಡಿದ್ದರು.

    ಈ ಪ್ರಶಸ್ತಿ ಕರಾವಳಿ, ತುಳುನಾಡ ಸಂಸ್ಕೃತಿಗೆ ಸಂದ ಗೌರವ. 450 ವರ್ಷಗಳ ಹಿಂದೆ ನಡೆದ ಘಟನೆಯನ್ನು ಪಾಡ್ದನಗಳ ಮೂಲಕ ಉಳಿಸಿಕೊಂಡು ಬಂದ ಪಾಡ್ದನಗಾರರಿಗೆ ಈ ಪ್ರಶಸ್ತಿ ಅರ್ಪಣೆ. ಸಿನಿಮಾದ ಚಿತ್ರಕಥೆ, ಹಿಂದಿನ ಕಾಲದ ಸೊಗಡನ್ನು ಸುಂದರವಾಗಿ ಬಿಂಬಿಸಿದ ಕಲಾ ನಿರ್ದೇಶಕರಾದ ದಿನೇಶ್ ಸುವರ್ಣ ರಾಯಿ ಮತ್ತು ರವಿ ಪೂಜಾರಿ ಅವರ ಕೈಚಳಕವೂ ಪ್ರಶಸ್ತಿಗೆ ಪ್ಲಸ್ ಪಾಯಿಂಟ್.
    ಸೂರ್ಯೋದಯ ಪೆರಂಪಳ್ಳಿ, ನಿರ್ದೇಶಕ

    ನಾನು ಹಾಡಿದ ಮೊದಲ ಸಿನಿಮಾಕ್ಕೆ ಪ್ರಶಸ್ತಿ ಬಂದಿರುವುದೇ ಖುಷಿ. ಈ ಪ್ರಶಸ್ತಿ ಶ್ರೀಕೃಷ್ಣ ದೇವರಿಗೆ ಅರ್ಪಣೆ. ತುಳುನಾಡಿಗೆ ಅದ್ಭುತ ಚಿತ್ರ ನೀಡಿದ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿಗೆ ನಾನು ಧನ್ಯ.
    ಕಲಾವತಿ ದಯಾನಂದ್


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts