ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ಶ್ರೀಮನ್ ಮದ್ವಾಚಾರ್ಯರ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಶಾಖಾಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವ ನಿಮಿತ್ತ ಮಧ್ಯಾರಾಧನೆ ಕಾರ್ಯಕ್ರಮಗಳು ಬುಧವಾರ ಶ್ರದ್ಧೆಭಕ್ತಿಗಳಿಂದ ನಡೆದವು.
ಇದನ್ನು ಓದಿ: ಪುರಂದರ ಮಂಟಪದಲ್ಲಿ ಮಧ್ಯಾರಾಧನೆ
ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರಸಹಿತ ಫಲ ಪಂಚಾಮೃತಾಭಿಷೇಕ, ಕನಕಾಭಿಷೇಕ, ಅಲಂಕಾರ, ಸಂಜೆ ರಥೋತ್ಸವ, ತೊಟ್ಟಿಲು ಸೇವಾ ಸೇರಿ ನಾನಾ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಗಳು ವಿಚಾರಣಾಕರ್ತ ಟಿ.ಕೊಟ್ರೇಶ, ವ್ಯವಸ್ಥಾಪಕ ಪುರುಷೋತ್ತಮಾಚಾರ್, ಅರ್ಚಕ ಕಿಶೋರಾಚಾರ್ ಪೌರೋಹಿತ್ಯದಲ್ಲಿ ನಡೆದವು.
ರಾಯರ ಬೃಂದಾವನವನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪಟ್ಟಣ ಸೇರಿ ತಾಲೂಕಿನ ನಾನಾ ಗ್ರಾಮಗಳಿಂದ ಸದ್ಭಕ್ತರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಮಂಗಳವಾರ ಸಂಜೆ ಬಳ್ಳಾರಿಯ ಜಿಲಾನಿ ಭಾಷಾ ತಂಡದವರಿಂದ ಭರತನಾಟ್ಯ ಸೇವಾ ಪ್ರದರ್ಶನ ನಡೆಯಿತು.