ಮಹಾಂತ ಶಿವಯೋಗಿ ಶ್ರೀಗಳ 150ನೇ ಜಯತ್ಯುತ್ಸವ

ಯರಗಟ್ಟಿ: ತ್ರೀವಿಧ ದಾಸೋಹ ಮತ್ತು ಸಾಕಷ್ಟು ಪವಾಡಗಳ ಮೂಲಕ ಮುರಗೋಡದ ಲಿಂ.ಮಹಾಂತ ಶಿವಯೋಗಿಗಳು ಭಕ್ತರ ಪಾಲಿನ ದೇವರಾಗಿದ್ದರು ಎಂದು ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದ್ದಾರೆ.

ಇಲ್ಲಿನ ದುರದುಂಡಿಶ್ವರ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಶತಾಯುಷಿ ಲಿಂ.ಪರಮ ಪೂಜ್ಯ ಮಹಾಂತ ಶಿವಯೋಗಿಗಳ 150ನೇ ಜಯತ್ಯುತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮುರಗೋಡದ ನೆಲದಲ್ಲಿ ನೆಲೆಗೊಂಡ ಮಹಾಂತ ಸ್ವಾಮೀಜಿ ಈ ನಾಡಿನ ಮಠಗಳ ಗುರು ಪರಂಪರೆಯಲ್ಲಿ ಬಹಳಷ್ಟು ಉಚ್ಚ ಸ್ಥಾನದಲ್ಲಿದ್ದರು. ಇವರಿಗೆ ತಲೆ ಬಾಗದವರೇ ಇಲ್ಲ ಅಷ್ಟೊಂದು ವಿದ್ವತ್ ಪೂರ್ಣ ಪೂಜ್ಯರಾಗಿದ್ದರು ಎಂದರು.

ಬೆಳಗ್ಗೆ 6ಗಂಟೆಗೆ ಮಹಾಂತ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯಿತು. ಸಂಜೆ ವಿವಿಧ ವಾದ್ಯಮೇಳಗಳ ಮೂಲಕ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ನಂತರ ತೋಟ್ಟಿಲೋತ್ಸವ ನಡೆಯುವುದು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹಿರಿಯರಾದ ಅಶೋಕ ಹಾದಿಮನಿ, ಚನ್ನಯ್ಯ ಹಿರೇಮಠ ಮಾತನಾಡಿದರು. ಅಶೋಕ ಜಕಾತಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಹಾದಿಮನಿ, ದುಂಡಪ್ಪ ಸಣ್ಣಕ್ಕಿ, ಶ್ರೀಶೈಲ ವಾಲಿ, ರೇವಣಪ್ಪ ಅಂಗಡಿ, ಶಿವಶಂಕರ ಪಟ್ಟೆದ, ಈರಣ್ಣ ಬೆಣ್ಣಿ, ಉಮೇಶ ಪರಾಳಶೆಟ್ಟರ, ಶಿವಾನಂದ ನಿಜಗುಲಿ, ಮಹಾರುದ್ರಪ್ಪ ಮಲಶೆಟ್ಟಿ, ನಿಂಗಪ್ಪ ನಾಯ್ಕರ, ಶಿವಾನಂದ ಪಟ್ಟಣಶೆಟ್ಟಿ, ಮಠದ ಅಧ್ಯಕ್ಷ ಮಹಾಂತೇಶ ಜಕಾತಿ, ವಿಜಯ ಮರಡಿ, ಕುಮಾರ ಜಕಾತಿ ಇತರರು ಇದ್ದರು.

One Reply to “ಮಹಾಂತ ಶಿವಯೋಗಿ ಶ್ರೀಗಳ 150ನೇ ಜಯತ್ಯುತ್ಸವ”

  1. ಅತ್ಯುತ್ತಮ! ಆಚರಣೆ ಮತ್ತು ವಿಜೃಂಭಣೆ ಇದರ ಜೊತೆ ಮುಂಬರುವ ಯುವ ಪಿಡಿಗಳಲ್ಲಿ ಮೂಡುತ್ತಿದ್ದ ವಿಕೃತ ಸಂಸ್ಕಾರ ಆಚೆಗೆ ಹೇಗೆ ತಳ್ಳಬೇಕು ಅಥವಾ ದೂರ ಮಾಡುವ ವೈಚಾರಿಕ ಕ್ರಾಂತಿ ಹಿರಿಯ ಮುಖಂಡರು ನಿರ್ವಹಿಸಲು ಮುಂದಾಗಬೇಕು.

Leave a Reply

Your email address will not be published. Required fields are marked *