ಕೆ.ಕೆಂಚಪ್ಪ ಮೊಳಕಾಲ್ಮೂರು
ಸಾವಿರಾರು ವರ್ಷಗಳ ಇತಿಹಾಸವಿರುವ ಬಾಂಡ್ರಾವಿ ಪ್ರಾಣದೇವ ಆಂಜನೇಯಸ್ವಾಮಿ ದೇವಾಲಯ ನಾಡಿನ ಭಕ್ತಗಣಕ್ಕೆ ಕಲ್ಯಾಣ ಕಾರ್ಯಗಳನ್ನು ಈಡೇರಿಸುವ ಪುಣ್ಯಕ್ಷೇತ್ರವಾಗಿ ಗುರುತಿಸಿಕೊಂಡಿದೆ.

ರಾವಾಯಣ, ಮಹಾಭಾರತದ ಹಲವು ಸಂದರ್ಭಗಳಿಗೆ ತಳಕು ಹಾಕಿಕೊಂಡಂತೆ ನಾಡಿನ ಪ್ರತಿ ಜಿಲ್ಲೆಯಲ್ಲೂ ಧಾರ್ಮಿಕ, ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳು ಇದ್ದೇ ಇರುತ್ತವೆ. ಅದೇ ರೀತಿಯಲ್ಲಿ ದಕ್ಷಿಣಾಭಿಮುಖವಾಗಿ ನೆಲೆಗೊಂಡಿರುವ ಬಾಂಡ್ರಾವಿ ಆಂಜನೇಯಸ್ವಾಮಿ ವಿಶಿಷ್ಠರೂಪಿ. ಹನುಮ, ಭೀಮ, ಮದ್ವ ಮೂರು ರೂಪಗಳಲ್ಲಿ ವಾಟ, ಮಂತ್ರ, ವಾಮಾಚಾರಗಳಿಂದ ಭಕ್ತರು ಅನುಭವಿಸುತ್ತಿರುವ ಸಂಕಟಗಳನ್ನು ತೊಡೆದು ಧರ್ಮ ರಕ್ಷಣೆಯ ಅಧಿಪತಿಯಾಗಿ ನೆಲೆಗೊಂಡಿದ್ದಾನೆ ಎನ್ನುವ ವಾತಿದೆ.
ಪುರಾತನ ದೇವಸ್ಥಾನಗಳ ಸಾಲಿಗೆ ಸೇರಿರುವ ಈ ಪುಣ್ಯಕ್ಷೇತ್ರದಲ್ಲಿ ನಾರಾಯಣ ಸ್ವರೂಪಿ ರಾಮ, ಸೀತೆ, ಭರತ ಮತ್ತು ಆಂಜನೇಯಸ್ವಾಮಿ ವಿಗ್ರಹಗಳಿವೆ. ಮಂತ್ರಾಲಯ ಮತ್ತು ಉಡುಪಿ ಶ್ರೀಮಠದ ಪೀಠಾಧಿಪತಿಗಳು ಆಗಾಗ ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದರು.
ಪ್ರತಿ ವರ್ಷ ಭರತ ಹುಣ್ಣಿಮೆಯಂದು ಬ್ರಹ್ಮರಥೋತ್ಸವ ನಡೆಯುತ್ತದೆ. ಆ ದಿನ ಸ್ವಾಮಿಗೆ ಅಷ್ಠೋತ್ತರ ಪಾರಾಯಣ, ಗೋ ಪೂಜೆ, ಪಂಚಾಮತ ಅಭಿಷೇಕ, ಸೀತಾ ರಾಮಚಂದ್ರರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯುತ್ತದೆ.
ಶ್ರಾವಣವಾಸ ಹಾಗೂ ಪ್ರತಿ ಹುಣ್ಣಿಮೆ ನಂತರ ಬರುವ ಭಾನುವಾರದಂದು ಪವವಾನ ಹೋಮ ಇತ್ಯಾದಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ತಮ್ಮ ಸಂಕಲ್ಪದ ಹರಕೆ ನೆರವೇರಿಸಿಕೊಳ್ಳಲು ಆಂಧ್ರ ಮತ್ತು ಕರ್ನಾಟಕದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ.
ಎಲ್ಲಿದೆ?
ದೇವಾಲಯ ಮೊಳಕಾಲ್ಮೂರು ತಾಲೂಕು ರಾಂಪುರದಿಂದ 18 ಕಿ.ಮೀ ದೂರದಲ್ಲಿದೆ. ಅಲ್ಲಿಂದ ಆಟೋರಿಕ್ಷಾಗಳ ವ್ಯವಸ್ಥೆ ಇದೆ. ಬೈಕ್ ಅಥವಾ ಕಾರುಗಳ ಸುಗಮ ಸಂಚಾರಕ್ಕೆ ಉತ್ತಮ ರಸ್ತೆಯೂ ಇದೆ. ದೇವಾಲಯದಲ್ಲಿ ಭಕ್ತರಿಗೆ ತಂಗಲು ಅವಕಾಶವಿದೆ.