ಕಾಮಗಾರಿ ಗುಣಮಟ್ಟ ಕಾಪಾಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಗ್ರಾಮೀಣ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಧಿಕಾರಿಗಳು ಮತ್ತು ಗುತ್ತಿಗೇದಾರರು ಕಾಮಗಾರಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕ ಬಸವರಾಜ ಮತ್ತಿಮೂಡ ಸೂಚನೆ ನೀಡಿದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ವಿ.ಕೆ.ಸಲಗರ, ಅಂಬಲಗಾ, ಅಪಚಂದ, ಜವಳಗಾ ಬಿ, ಮಡಕಿ, ಲಾಡಮುಗಳಿ, ಶ್ರೀಚಂದ, ಮಡಕಿ, ಕಮಲಾನಗರ, ಬೆಟ್ಟ ಜೇವರ್ಗಿ, ವಾಗ್ದರಗಿ ಗ್ರಾಮಗಳಲ್ಲಿ ಹಮ್ಮಿಕೊಂಡಿರುವ 10 ಕಾಮಗಾರಿಗೆ ಚಾಲನೆ ನೀಡಿದ ಅವರು, ಕ್ಷೇತ್ರ ಅಭಿವೃದ್ಧಿಗೆ ಸರ್ಕಾ ರದ ಅನುದಾನ ತಂದು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅಂಗನವಾಡಿ ಕೇಂದ್ರಗಳು, ಶಾಲಾ ಕೋಣೆಗಳು, ಸಿ.ಸಿ. ರಸ್ತೆಗಳು, ಶಾಲಾ ಆಟದ ಮೈದಾನ ಸೇರಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗಿದೆ. ಜನರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಮುಖರಾದ ಕಲ್ಯಾಣರಾವ ಗೋನಾಕಿ, ಸಿದ್ದಣ್ಣ ಗೌಡ ಧಮೂರ, ಶಿವರಾಯ ಗೌಡ ಮುದಡಗಿ, ಸತೀಶ್ ಸೋರಡೆ, ಸಿದ್ರಾಮಪ್ಪ ಗೌಡರ ಕಮಲಾನಗರ, ರೇವಣಸಿದ್ದಪ ಮೂಲಗೆ, ರೇಣುಕಾಚಾರ್ಯ ಬಿ, ವೀರು ಸ್ವಾಮಿ ನರೋಣ, ಬಸು ವಾಲಿ ನರೋಣ, ಶಂಭು ಗೂಗಳೆ, ಶಂಭು ಮೂಲಗೆ ಇತರರಿದ್ದರು.
10 ಕಾಮಗಾರಿಗೆ ಚಾಲನೆ: ಕಲಬುರಗಿ ಗ್ರಾಮೀಣ ವಿಧಾನಸಭೆ ಕ್ಷೇತ್ರ ಹಲವು ಗ್ರಾಮಗಳಲ್ಲಿ ಹಮ್ಮಿಕೊಂಡಿರುವ ಸಿಸಿ ರಸ್ತೆ, ಬಿಸಿಯೂಟದ ಅಡುಗೆ ಕೋಣೆ, ಅಂಬೇಡ್ಕರ್ ಭವನ, ಆಟದ ಮೈದಾನ ಸೇರಿ ವಿವಿಧ ಕಾಮಗಾರಿಗಳಿಗೆ ಏಕಕಾಲಕ್ಕೆ ಶಾಸಕ ಬಸವರಾಜ ಮತ್ತಿಮೂಡ ಚಾಲನೆ ನೀಡಿ, 10 ಕಾಮಗಾರಿಗಳಿಗೆ 4.45 ಲಕ್ಷ ರೂ. ಅನುದಾನ ಹೊಂದಿವೆ ಎಂದು ತಿಳಿಸಿದರು.