ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬೆಂಗಳೂರಿನಲ್ಲಿ ಮಂಗಳವಾರ ನಿಧನರಾಗಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿಯಾಗಿದ್ದ ಕಾಂಗ್ರೆಸ್ ನಾಯಕ ಡೇವಿಡ್ ಸಿಮೆಯೋನ್ (೭೫) ಅವರ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಸಾರ್ವಜನಿಕ ದರ್ಶನ ಬಳಿಕ ವಾಹನದಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆಯನ್ನು ಆರಂಭಿಸಲಾಯಿತು. ಐವಾನ್-ಇ-ಶಾಹಿ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮುಖ್ಯರಸ್ತೆ, ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ವೆಂಕಟೇಶ ನಗರದಲ್ಲಿರುವ ಕ್ರಿಶ್ಚಿಯನ್ ಗ್ರೇ ಯಾರ್ಡ್ವರೆಗೂ ಮೆರವಣಿಗೆ ಸಾಗಿತು.ನಂತರ ಅಲ್ಲಿ ಧರ್ಮ ಗುರುಗಳಿಂದ ಬೈಬಲ್ ಪಠಣ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ ಬಳಿಕ ಸರ್ಕಾರಿ ಗೌರವದೊಂದಿಗೆ ಡೇವಿಡ್ ಸಿಮೆಯೋನ್ ಅವರ ಅಂತ್ಯಕ್ರಿಯೆ ನೆರವೇರಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಕೋರ್ ಕಮೀಟಿ ಅಧ್ಯಕ್ಷ ಬಸವರಾಜ ತಡಕಲ್,ರಾಜ್ಯ ವಕ್ತಾರ ದೇವೇಗೌಡ ತೆಲ್ಲೂರ, ಪ್ರಮುಖರಾದ ಸಂಧ್ಯಾರಾಜ ಸ್ಯಾಮುವೆಲ್, ಸಿಮೆಯೋನ್ ಸ್ಯಾಮುವೆಲ್, ಚರ್ಚ್ ಕಾರ್ಯದರ್ಶಿ ವಿಜಯಕುಮಾರ ಸೇರಿದಂತೆ ಬೀದರ್,ಕಲಬುರಗಿ,ಯಾದಗಿರಿ,ರಾಯಚೂರು,ಬಳ್ಳಾರಿ,ವಿಜಯಪುರ ಇನ್ನಿತರ ಜಿಲ್ಲೆಗಳ ಅಭಿಮಾನಿಗಳು, ಕ್ರೆÊಸ್ತ ಬಾಂಧವರು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಚರ್ಚ್ ವೆಂಕಟೇಶ ನಗರದವರೆಗೂ ಮೆರವಣಿಗೆ

You Might Also Like
ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style
life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…
ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್
ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…