ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 67ರ ಬಡಿಗೇರ ಓಣಿ ಮತ್ತು ಬಳ್ಳೊಳ್ಳಿ ಮಠ ಓಣಿಯ ತೆರೆದ ಚರಂಡಿ ಮತ್ತು ಸ್ಲ್ಯಾಬ್ ಕಾಮಗಾರಿಗೆ ಉಪಮೇಯರ್ ದುರ್ಗಮ್ಮ ಬಿಜವಾಡ ಭೂಮಿಪೂಜೆ ನೆರವೇರಿಸಿದರು.
15ನೇ ಹಣಕಾಸು ಯೋಜನೆ ಅಡಿ ಅಂದಾಜು 23 ಲಕ್ಷ ರೂ. ಕಾಮಗಾರಿಗೆ ಚಾಲನೆ ನೀಡಲಾಯಿತು.
ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜುನಾಥ ಕಾಟಕರ, ಶಶಿಕಾಂತ ಬಿಜವಾಡ, ಕೃಷ್ಣಾ ಊರಣಕರ, ಸುಭಾಸ ಅಥಣಿ, ಮಹೇಶ ಮರೇವಾಡ, ದೀಪಕ ಮೆಹರವಾಡೆ, ರಾಜು ಕೋರ್ಯಾಣಮಠ, ಮುತ್ತು ನರೇಗಲ್, ಬಸವರಾಜ ಇಚ್ಚಂಗಿ, ಹಿತೇಶ ಜೈನ್, ಅಶೋಕ ಇಚ್ಚಂಗಿ, ಬಸವರಾಜ ನಾಗಶೆಟ್ಟಿ, ಈರಮ್ಮ ಶಿರೂರ, ಬಸಮ್ಮ ಬಳ್ಳೊಳ್ಳಿ, ಸುಜಾತ ಹಂಚೋಳ್ಳಿ, ದಾಕ್ಷಾಯಿಣಿ ನಾಗಶೆಟ್ಟಿ, ರೇಣುಕಾ ಇಚ್ಚಂಗಿ, ಗೌರಮ್ಮ ಮರೇವಾಡ ಉಪಸ್ಥಿತರಿದ್ದರು.