ಬಿಳ್ಳೂರು ಗ್ರಾಪಂ ಉಪಾಧ್ಯಕ್ಷ ಶಿವ ಅಭಿಮತ
ಪಾತಪಾಳ್ಯ: ಸಮುದಾಯದ ಸಹಭಾಗಿತ್ವ ದೊರೆತಾಗ ಮಾತ್ರ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಿಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವ ತಿಳಿಸಿದರು.
ಬಿಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮೇಲುಸ್ತುವಾರಿ ಸಮಿತಿಯ ಪಾತ್ರವಿದೆ. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದು, ಹಾಜರಾತಿ ಪ್ರಮಾಣ ಹೆಚ್ಚಿಸುವುದು, ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಂದು ಮಗುವಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಸಮಿತಿಯ ನೀಡುತ್ತಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷರಾಗಿ ನಾಗರಾಜು, ಉಪಾಧ್ಯಕ್ಷೆಯಾಗಿ ರಾಧಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೆಂಕಟೇಶ್, ಶ್ಯಾಮ್‌ಕುಮಾರ್, ಶಿವರಾಂ, ಮಹೇಶ್ವರಿ, ರೇಖಾ, ಲಕ್ಷ್ಮೀ, ಮಾಧವಿ, ಉತ್ತನ್ನ, ಜಯರಾಮ್, ಮಮತಾ, ಮಜುರುಲ್ಲಾ, ಶಾಮೀರ್, ತಹಸ್ಮೀಮ್, ಶಾಹೀದಾ, ತ್ಯಾಗರಾಜು, ಅನುಶ್ರೀ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.
ಪ್ರಭಾರ ಮುಖ್ಯಶಿಕ್ಷಕ ಎನ್. ನಾಗರಾಜ್, ಸಿಆರ್‌ಪಿ ಹನುಮಂತಪ್ಪ, ಶಿಕ್ಷರಾದ ಸುಬಾನ್, ರಾಜಶೇಖರ, ಫರೂಕ್, ಸವಿತಾ, ಮಂಜುಳಾ, ರಾಜೇಶ್ವರಿ, ವರಲಕ್ಷ್ಮೀ, ಸ್ವಾತಿ, ಆಂಜನೇಯಲು ಹಾಗೂ ವಿದ್ಯಾರ್ಥಿಗಳು ಇದ್ದರು.