ಬಸವನಬಾಗೇವಾಡಿ: ಜಿಲ್ಲೆಯಲ್ಲೇ ಎಲ್ಲ ರಂಗದಲ್ಲಿ ಅತ್ಯಂತ ಮುಂದುವರಿದ ತಾಲೂಕು ಕೇಂದ್ರವಾಗಿ ಬಸವನಬಾಗೇವಾಡಿ ಹೊರಹೊಮ್ಮುತ್ತಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸ್ಥಳೀಯ ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಯೋಜನೆ 57.65 ಲಕ್ಷ ರೂ. ಹಣದಲ್ಲಿ ಕಟ್ಟಡ ಮತ್ತು ದುರಸ್ತಿ ಕಾಮಗಾರಿ, 25.26 ಲಕ್ಷ ರೂ. ಹಣದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿ ಹಾಗೂ 225 ಲಕ್ಷ ರೂ. ವೆಚ್ಚದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಗೃಹ ಮಂಡಳಿ ಯೋಜನೆಯಡಿ ಸರ್ಕಾರಿ ಪಪೂ ಕಾಲೇಜಿನ ಹೆಚ್ಚುವರಿ ಕಟ್ಟಡದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಂ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಟಿ.ಎ.ಪಿ.ಎಂ.ಸಿ. ಅಧ್ಯಕ್ಷ ಶೇಖರಗೌಡ ಪಾಟೀಲ, ಶಂಕರಗೌಡ ಬಿರಾದಾರ, ಬಸವರಾಜ ಗೊಳಸಂಗಿ, ಸಂಕನಗೌಡ ಪಾಟೀಲ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಮುರುಗೇಶ ನಾಯ್ಕೋಡಿ, ಸಂಗನಬಸು ಪೂಜಾರಿ, ಬಸವರಾಜ ಕೋಟಿ, ಸದಾನಂದ ಬಶೆಟ್ಟಿ, ಸಂಗಯ್ಯ ಕಾಳಸ್ತೇಶ್ವರಮಠ, ರವಿ ರಾಠೋಡ, ಜಟ್ಟಿಂಗರಾಯ ಮಾಲಗಾರ, ಸಿದ್ದನಗೌಡ ಚಿಕ್ಕೊಂಡ, ಸುರೇಶಗೌಡ ಪಾಟೀಲ, ಮಹೇಶ ಮುಳವಾಡ, ರಂಜಾನ್ ಹೆಬ್ಬಾಳ, ಜಗದೇವಿ ಗುಂಡಳ್ಳಿ, ಜಿಪಂ ಎ.ಇ.ಇ ವಿಲಾಸ ರಾಠೋಡ, ಕಾಲೇಜು ಪ್ರಾಚಾರ್ಯ ಡಾ.ಎನ್.ಬಿ.ಹೊಸಮನಿ, ಎಸ್.ಡಿ.ಪಾಟೀಲ, ಉಪ ಪ್ರಾಚಾರ್ಯ ರಮೇಶ ಪೂಜಾರಿ, ಶಿಕ್ಷಕರಾದ ಆರ್.ಬಿ.ಅಂಬಳಿ, ಡಾ.ಎಸ್.ಎಂ ನಾಟೀಕಾರ, ಲೀಲಾವತಿ.ಪಿ., ಪ್ರಶಾಂತ ನಾಯಕ, ಶ್ರೀಶೈಲ ಬಳವಾಟ ಇತರರಿದ್ದರು.