ಹೆಬ್ರಿ: ವಿದ್ಯಾರ್ಥಿಗಳು ಅಂಕ ಗಳಿಸುವ ಯಂತ್ರಗಳಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಉದ್ಯಮಿ ಎಂ.ಕರುಣಾಕರ್ ಹೆಗ್ಡೆ ಹೇಳಿದರು.

ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಆಹ್ವಾನಿತ ಕಾಲೇಜುಗಳ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್. ಶುಭಹಾರೈಸಿದರು. ಕ್ವಿಜ್ ಮಾಸ್ಟರ್ ವೆಂಕಟೇಶ ಸ್ಪರ್ಧೆ ನಡೆಸಿಕೊಟ್ಟರು. 12 ಕಾಲೇಜುಗಳು ಭಾಗವಹಿಸಿದ್ದವು. ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಪ್ರಥಮ, ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ದ್ವಿತೀಯ, ಮೂಡುಬಿದಿರೆ ಆಳ್ವಾಸ್ ಕಾಲೇಜು ತೃತೀಯ ಸ್ಥಾನ ಪಡೆಯಿತು.
ಐಕ್ಯೂಎಸಿ ಸಂಚಾಲಕ ಡಾ.ಗಣೇಶ ಎಸ್., ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ಪ್ರವೀಣ್ ಕುಮಾರ್ ಎಸ್., ಕಾರ್ಯಕ್ರಮ ಸಂಯೋಜಕ ವಿಜೇಂದ್ರ ಶೆಣೈ ಎಚ್. ಉಪಸ್ಥಿತರಿದ್ದರು. ಹರೀಶ್ ನಾಯ್ಕ ಸ್ವಾಗತಿಸಿದರು. ದೀಪಿಕಾ ಪ್ರಾರ್ಥಿಸಿದರು. ಸ್ನೇಹಾ ಜೆ.ಶೆಟ್ಟಿ ವಂದಿಸಿದರು. ಶ್ರೇಯಾ ಎಸ್.ಶೆಣೈ ಕಾರ್ಯಕ್ರಮ ನಿರೂಪಿಸಿದರು.