ಜ್ಞಾನದ ಜತೆಗೆ ಕೌಶಲ ಬೆಳೆಸಿಕೊಳ್ಳಿ

blank

ಅಂಕೋಲಾ: ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಸಮಯದಲ್ಲಿ ಜ್ಞಾನದ ಜತೆಯಲ್ಲಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಇಲ್ಲಿನ ಕೆನರಾ ಬ್ಯಾಂಕಿನ ಸಹಾಯ ವ್ಯವಸ್ಥಾಪಕ ಅರುಣಕುಮಾರ ಹೇಳಿದರು.

ಪಟ್ಟಣದ ಪಿ.ಎಂ. ಸಂಯುಕ್ತ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಹೂಮನೆ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ಫಾಲ್ಗುಣ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ವಿವಿಧ ವಿಷಯಗಳನ್ನು ಕಲಿಯಬಹುದು. ಹೊಸ ಆಸಕ್ತಿಗಳನ್ನು ಕಂಡುಕೊಳ್ಳವ ಮೂಲಕ ನಮ್ಮ ಗುರಿಗಳನ್ನು ನಿರ್ಧರಿಸಬಹುದು ಎಂದರು.

ಮೈತ್ರಿ ಸೇವಾ ಸಂಸ್ಥೆಯ ಗೋಪಾಲ ಗೌಡ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿದರು.

ಕಳೆದ ವರ್ಷ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಾಗು ಕೊಕರೆ, ಆದರ್ಶ ವಿದ್ಯಾರ್ಥಿನಿ ಶ್ರೀನಿಧಿ ಆಗೇರ, ಬಹುಮುಖ ಪ್ರತಿಭೆಯ ಹಾಲಕ್ಕಿ ವಿದ್ಯಾರ್ಥಿನಿ ಯಶೋಧಾ ಉದಯ ಗೌಡ ಅವರನ್ನು ಸನ್ಮಾನಿಸಲಾಯಿತು. ಜಿ.ಸಿ. ಕಾಲೇಜಿನ ಉಪನ್ಯಾಸಕಿ ರೇಷ್ಮಾ ನಾಯ್ಕ, ಭಾಗರಥಿ ಹೆಗಡೆಕಟ್ಟಾ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ವಿನಾಯಕ ನಾಯ್ಕ, ಗಣಪತಿ ಗೌಡ ಸಹಕರಿಸಿದರು. ಉಪನ್ಯಾಸಕರಾದ ಉಲ್ಲಾಸ ಹುದ್ದಾರ ಪ್ರಾಸ್ತಾವಿಕ ಮಾತನಾಡಿದರು. ರಮೇಶಗೌಡ ಎಂ. ಬಹುಮಾನ ಯಾದಿ ಓದಿದರು. ಉಮೇಶ ಗೌಡ ನಿರ್ವಹಿಸಿದರು. ಹಿರಿಯ ಉಪನ್ಯಾಸಕ ರಮಾನಂದ ನಾಯಕ ಸ್ವಾಗತಿಸಿದರು.

 

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…