ಇಂಡಿ: ವಿದ್ಯಾರ್ಥಿಗಳು ಆದರ್ಶ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಬಿಡಿಈ ಕಾಲೇಜಿನ ಪ್ರೊ. ರೂತ್ತಮ ಅಜುರ್ಣಗಿ ಹೇಳಿದರು.
ಇಂಡಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ವಾಣಿಜ್ಯಶಾಸ ವಿಭಾಗ ಮತ್ತು ಐಕ್ಯೂಎಸಿ ಅಡಿಯಲ್ಲಿ ಹಮ್ಮಿಕೊಂಡಿದ್ದ ನಾಯಕತ್ವದ ಗುಣಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಆರ್. ಎಚ್.ರಮೇಶ ಮಾತನಾಡಿ, ಭವಿಷ್ಯದ ಭಾರತಕ್ಕೆ ಉತ್ತಮ ನಾಯಕತ್ವದ ಗುಣಗಳನ್ನು ಯುವಜನತೆ ಅಳವಡಿಸಿಕಳ್ಳಬೇಕು ಎಂದರು.
ಐಕ್ಯೂಎಸಿ ಸಂಯೋಜಕರಾದ ಡಾ.ಶೀರುನುಸುಲ್ತಾನ ಇನಾಂದಾರ, ಪ್ರೊ.ತಿಪ್ಪಣ್ಣ ವಗ್ದಾಳ, ವಾಣಿಜ್ಯಶಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಜಲಕ್ಷ್ಮೀ ಆರ್., ಉಪನ್ಯಾಸಕರಾದ ಪ್ರೊ.ಪಿ.ಎಸ್.ದೇವರ, ಎಂ.ಎಚ್.ಮೋಮಿನ್, ಪೂಜಾ ಡಿ.ಆರ್., ಭಾರತಿ ಕನ್ನೊಳ್ಳಿ ಇದ್ದರು. ರಾಹುಲ್ ಭಾಸಗಿ ಸ್ವಾಗತಿಸಿದರು. ರಮೇಶ ಮಾವನಿಹಳ್ಳಿ ನಿರೂಪಿಸಿದರು. ಸ್ವಾಗತ ಸಾತಲಗಾಂವ ವಂದಿಸಿದರು.