ಇಳಕಲ್ಲ (ಗ್ರಾ): ಲಿಂಗಾಯತ ಬಣಜಿಗರು ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದು ಸಿ.ಸಿ ಚಂದ್ರಾಪಟ್ಟಣ ಹೇಳಿದರು.
ಇಲ್ಲಿಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಜಯ ಮಹಾಂತೇಶ ಬಡಾವಣೆಯ ನೂತನ ಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವಾ ನಿವೃತ್ತರಾದ ಹಾಗೂ ಇಳಕಲ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಆಯ್ಕೆಯಾದ ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧಿವಂತ ಸಮಾಜ ಎನಿಸಿಕೊಂಡವರು ಯಾವುದೇ ಕ್ಷೇತ್ರದಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡಿ ಸಮಾಜಕ್ಕೆ ಹೆಮ್ಮೆ ತರುವಂತೆ ಮಾಡಿರಿ ಎಂದರು.
ಸನ್ಮಾನ ಸ್ವೀಕರಿಸಿದ ಇಳಕಲ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಡಾ.ಅರುಣಾ ಅಕ್ಕಿ, ಮಹಾಂತೇಶ ಅಂಗಡಿ, ಮಂಜುನಾಥ ಶೆಟ್ಟರ ಮಾತನಾಡಿದರು.
ಎಸ್.ವಿ.ಎಂ ಸಂಘದ ನಿರ್ದೇಶಕ ಮಲ್ಲಣ್ಣ ಹರವಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಹಾಂತೇಶ ಹಲಕುರ್ಕಿ, ನಿವೃತ್ತ ಉಪನ್ಯಾಸಕ ಮಹಾಂತೇಶ ಅರಳಿ, ಪಂಚಾಕ್ಷರಿ ಅಂಗಡಿ, ಅಶೋಕ ನೀರಲಕೇರಿ, ಸುರೇಶ ಅಂಗಡಿ, ಈರಣ್ಣ ನಂದಾಪೂರ, ನಿವೃತ್ತ ಉಪನ್ಯಾಸಕಿ ದ್ರಾಕ್ಷಾಯಿಣಿ ಗಡಾದ, ನಾಗರತ್ನಾ ಕಾಚಟ್ಟಿಯವರ, ಸವಿತಾ ಮಾಟೂರ, ಮಹಾದೇವಿ ತೊಂತನಾಳ, ಡಾ.ಬಸವರಾಜ ಅಂಗಡಿ, ಅಶೋಕ ವಾಲಿ ಹಾಗೂ ರೇವಣಸಿದ್ದಪ್ಪ ಮತ್ತು ಜಯಶ್ರೀ ದಂಪತಿಯನ್ನು ಗೌರವಿಸಲಾಯಿತು.
ಗುರಣ್ಣ ಮರಟದ, ವಿ.ಎಸ್.ಅಂಗಡಿ, ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದ ಅಧ್ಯಕ್ಷ ಗಂಗಾಧರ ಶೆಟ್ಟರ, ಮುರುಗೇಶ ಪಾಟೀಲ, ಗುರುಬಸಪ್ಪ ಕೋಟಿ, ಪರುತಪ್ಪಗೌಡ ಪಟ್ಟಣಶೆಟ್ಟಿ, ಬಸಪ್ಪ ಅಂಗಡಿ, ಈರಣ್ಣ ಕರಡಿ, ಶಿವರುದ್ರಪ್ಪ ಗೊಂಗಡಶೆಟ್ಟಿ, ಮಹಾಂತಪ್ಪ ವಾಲಿ, ಡಾ. ಮಹಾಂತೇಶ ಅಕ್ಕಿ, ಸಂಗಮೇಶ ಪಟ್ಟಣಶೆಟ್ಟಿ, ಗುರುಬಸಪ್ಪ ತುಪ್ಪದ, ವೀರಣ್ಣ ಅಂಗಡಿ, ಗಂಗಾಧರ ಅಂಗಡಿ, ಶಿವಕುಮಾರ ಅಕ್ಕಿ, ಪ್ರಭು ಪಟ್ಟಣಶೆಟ್ಟಿ, ಪರಪ್ಪ ಕವಲಿ, ಬಸವರಾಜ ಗುಗ್ಗರಿ, ಅಡಿವೆಪ್ಪ ಅಂಗಡಿ, ಈರಪ್ಪ ಗೋನಾಳ ಮಲ್ಲಪ್ಪ ಅಂಗಡಿ, ಬಸವರಾಜ ಪಟ್ಟಣಶೆಟ್ಟಿ, ಮಲ್ಲು ನಿರಲಕೇರಿ, ಸಿದ್ದು ಅಂಗಡಿ, ಗಂಗಮ್ಮ ಎಮ್ಮಿ, ಕವಿತಾ ಬೆಲ್ಲದ, ಇಂದುಮತಿ ಅಂಗಡಿ, ಸುನಿತಾ ಅಂಗಡಿ, ವಿಜಯಲಕ್ಷ್ಮಿ ಕಂಠಿ ಮತ್ತಿತರಿದ್ದರು.
ಸುಜಾತ ಅಂಗಡಿ, ಮಹಾದೇವಿ ಬಾದಿಮನಾಳ ಪ್ರಾರ್ಥಿಸಿದರು. ನಿವೇದಿತಾ ಅಂಗಡಿ ವಚನ ಹಾಡಿದರು. ವಿ.ಬಿ.ಜೀರಗಿ ಸ್ವಾಗತಿಸಿದರು. ಚನ್ನಬಸಪ್ಪ ಲೆಕ್ಕಿಹಾಳ ನಿರೂಪಿಸಿದರು. ಮಂಜು ಅಂಗಡಿ ವಂದಿಸಿದರು.
ಫೋಟೋ: ಇಳಕಲ್ಲ (ಗ್ರಾ) 01
ಇಳಕಲ್ ಕೋ ಆ್ರೇಟಿವ್ ಬ್ಯಾಂಕ್ ನಿರ್ದೇಶಕರನ್ನು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸತ್ಕರಿಸಲಾಯಿತು. ಡಾ.ಅರುಣಾ ಅಕ್ಕಿ, ಮಹಾಂತೇಶ ಅಂಗಡಿ, ಮಂಜುನಾಥ ಶೆಟ್ಟರ ಇತರರಿದ್ದಾರೆ.