blank

ದೇವೇಗೌಡರಿಗೆ, ಕೃಷ್ಣಭೈರೇಗೌಡ ತಿರುಗೇಟು

hdd

 

ಬೆಂಗಳೂರು:
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಸತ್ತಿನಲ್ಲಿ ಯಾಕೆ ಧ್ವನಿ ಎತ್ತಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಅವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಿಂದ ಹೆಜ್ಜೆ ಹೆಜ್ಜೆಗೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕಕಕ್ಕೆ ಕರಾಳ ಅಧ್ಯಾಯವಾಗಿದೆ. ಕರ್ನಾಟಕದ ಬಗ್ಗೆ ಇವರಿಗೆ ಬದ್ದತೆ ಇದ್ದರೆ ಕರ್ನಾಟಕಕ್ಕೆ ಮೊದಲು ಕೇಂದ್ರದಿಂದ ನ್ಯಾಯ ಕೊಡಿಸಲಿ ಎಂದು ಸವಾಲು ಹಾಕಿದರು.
ತೆರಿಗೆ ಕಟ್ಟುವ, ಕಷ್ಟಪಟ್ಟು ದುಡಿಯೋ ಕರ್ನಾಟಕ ಜನರ ತೆರಿಗೆ ದುಡ್ಡು ಲೂಟಿ ಆಗುತ್ತಿದೆ. ಅದನ್ನ ಬಿಟ್ಟು ಅವರು ಮಾಡೋ ಅನ್ಯಾಯವನ್ನ ಮುಚ್ಚಿ ಹಾಕಿ ಇವರು ಕೂಡಾ ಅನ್ಯಾಯದಲ್ಲಿ ಪಾಲಾಗುವುದನ್ನು ಬಿಡಲಿ ಎಂದರು.
ನಮ್ಮ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗ್ತಿದೆ. ಅದನ್ನ ಸರಿ ಮಾಡಲಿ. ಅಮೇಲೆ ಉಳಿದಿದ್ದ ವಿಷಯ ಮಾತಾಡೋಕೆ ಅವರಿಗೂ ನೈತಿಕತೆ ಇರುತ್ತದೆ ಎಂದರು.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಇನ್ನು ಅನುಮತಿ ಕೊಟ್ಟಿಲ್ಲ. ಅನುಮತಿ ಕೊಡಿಸ್ತೀನಿ ಅಂತ ದೇವೇಗೌಡರು ಚುನಾವಣೆ ಸಮಯದಲ್ಲಿ ಹೇಳಿದ್ದರು. ಅದಕ್ಕೆ ಬದ್ದವಾಗಿ ಮೊದಲು ಅನುಮತಿ ಕೊಡಿಸಲಿ ಎಂದರು.
ಸುಪ್ರೀಂಕೋರ್ಟ್ ಕೂಡಾ ಮೇಕೆದಾಟು ಯೋಜನೆಗೆ ವಿರೋಧ ಇಲ್ಲ ಅಂತ ಹೇಳಿದೆ. ಚನ್ನಪಟ್ಟಣ ಚುನಾವಣೆಯಲ್ಲಿ ಕೈಹಿಡಿದು ಸಹಿ ಹಾಕಿಸ್ತೀವಿ ಅಂತ ಭಾಷಣ ಮಾಡಿದ್ದರು. ಆದ್ದರಿಂದ
ದೇವೇಗೌಡರೇ ಆಗಲಿ ಯಾರೇ ಆಗಲಿ ಮೊದಲು ಅನುಮತಿ ಕೊಡಿಸಲಿ ಎಂದರು.

TAGGED:
Share This Article

ಮನೆಯಲ್ಲೇ ಮಾಡಿ ಟೇಸ್ಟಿ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪ್ಪಿನಕಾಯಿ ಇಲ್ಲದೆ ಊಟ ಸಂಪೂರ್ಣ ಎನ್ನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ…

ಪ್ರತಿದಿನ 1 ದಾಳಿಂಬೆ ಸೇವನೆಯಿಂದಾಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ದಾಳಿಂಬೆ ಪೋಷಕಾಂಶಗಳಿಂದ ತುಂಬಿದೆ ಎಂಬುದು ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬರೂ ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು…

ಧೂಮಪಾನ ಬಿಡಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲವೇ?; ನಿಮಗಾಗಿಯೇ ಈ ಟ್ರಿಕ್ಸ್​ | Health Tips

ಪ್ರತ್ಯಕ್ಷವಾಗೋ ಅಥವಾ ಪರೋಕ್ಷವಾಗೋ ನಾವೆಲ್ಲರೂ ನಿಷ್ಕ್ರಿಯ ಧೂಮಪಾನಿಗಳು. ಏಕೆಂದರೆ ನಮ್ಮ ಸುತ್ತಲೂ ಯಾವಾಗಲೂ ಯಾರಾದರೂ ಸಿಗರೇಟ್…