ರಿವೀಲ್ ಆಯ್ತು ಜೂ. ಎನ್​ಟಿಆರ್​ ‘ದೇವರ’ ರನ್​ ಟೈಮ್​!

ಆಂಧ್ರಪ್ರದೇಶ: ತೆಲುಗು ನಟ ಜೂ. ಎನ್​ಟಿಆರ್​ ಮತ್ತು ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ ‘ದೇವರ’ ಸಿನಿಮಾ ಇದೇ ಸೆಪ್ಟೆಂಬರ್ 27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಹೈ-ಬಜೆಟ್ ಸಿನಿಮಾ ಇದಾಗಿದ್ದು, ಭರ್ಜರಿ ಓಪನಿಂಗ್​ನತ್ತ ಚಿತ್ರತಂಡ ಎದುರುನೋಡುತ್ತಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಚಿತ್ರದ ಅಧಿಕೃತ ಟ್ರೇಲರ್​ ರಿಲೀಸ್ ಆಗಿದ್ದು, ಚಿತ್ರರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ದೇವರ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಚಿತ್ರದ ಒಟ್ಟು ರನ್​ಟೈಮ್ ಎಷ್ಟು ಎಂಬುದು ಇದೀಗ ಅನಾವರಣಗೊಂಡಿದೆ.

ಇದನ್ನೂ ಓದಿ: ಬಹುಕೋಟಿ ಸ್ಟಾಕ್ ಟ್ರೇಡಿಂಗ್ ಹಗರಣ.. ಅಸ್ಸಾಮಿ ನಟಿ ಸುಮಿ ಬೋರಾ ಅರೆಸ್ಟ್!

ಚಿತ್ರವು ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಉತ್ತಮ ಬೇಡಿಕೆ ಹೆಚ್ಚಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ಸಖತ್ ಬ್ಯುಸಿಯಾಗಿರುವ ಜೂ. ಎನ್​ಟಿಆರ್​ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸ್ವೀಕರಿಸುತ್ತಿದ್ದಾರೆ. ಇದು ‘ದೇವರ’ ಗೆಲುವಿಗೆ ಪ್ರಮುಖ ಕಾರಣವಾಗಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಇನ್ನು ದೇವರ ರನ್‌ಟೈಮ್ ಪ್ರಕಟವಾಗಿದ್ದು, ಚಿತ್ರದ ಒಟ್ಟು ವೀಕ್ಷಣೆ ಸಮಯ 178 ನಿಮಿಷಗಳಾಗಿವೆ. ಅಂದರೆ 2 ಗಂಟೆ 58 ನಿಮಿಷಗಳು.

ಚಿತ್ರಕ್ಕೆ ಹೆಚ್ಚಿನ ರನ್​ ಟೈಮ್​ ಕೊಟ್ಟಿರುವುದು ಕೆಲವರಿಗೆ ಬೇಸರ ಉಂಟುಮಾಡಿದ್ದು, ಚಿತ್ರಮಂದಿರದಲ್ಲಿ 3 ಗಂಟೆಗಳ ಕಾಲ ಕುಳಿತು ಸಿನಿಮಾ ನೋಡುವುದೇ ದೊಡ್ಡ ಸವಾಲಾಗಿದೆ. ಚಿತ್ರಮಂದಿರಗಳಲ್ಲಿ ದೇವರ ಹೇಗೆ ಮೋಡಿ ಮಾಡಲಿದೆ? ಸಿನಿಪ್ರೇಕ್ಷಕರಿಗೆ ಮನರಂಜನೆ ಉಣಬಡಿಸಲಿದೆಯಾ? ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಚಿತ್ರದಲ್ಲಿ ಜೂ. ಎನ್​ಟಿಆರ್​, ಜಾನವಿ ಕಪೂರ್​, ಚೈತ್ರಾ ರೈ, ಸೈಫ್​ ಅಲಿ ಖಾನ್​, ಶೃತಿ ಮರಾಠೆ, ಮುರುಳಿ ಶರ್ಮಾ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

26 ವರ್ಷ ಸೇವೆ, 10 ವರ್ಷದಿಂದ ಅದೇ ಸಂಬಳ! 1 ರೂ. ಹೆಚ್ಚಾಗಲಿಲ್ಲ: ಈ ಸರ್ಕಾರದ ವಿರುದ್ಧ ವೈದ್ಯ ಕಿಡಿ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…